ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಹುಲ್ ಗಾಂಧಿ, ಸಿದ್ದರಾಮಯ್ಯ ಜಗ್ಗಲಿಗೆ ಭಾರಿಸಿದ ರೀತಿ ನೋಡಿ

By Manjunatha
|
Google Oneindia Kannada News

ಸವದತ್ತಿ, ಫೆಬ್ರವರಿ 26: ಜನಾಶಿರ್ವಾದ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪದ ವಾದ್ಯ ಜಗ್ಗಲಿಗೆ ಭಾರಿಸಿ ಖುಷಿಪಟ್ಟರು.

ಬೆಳಗಾವಿಯ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತ ಕೋರಲು ಆಗಮಿಸಿದ್ದ ಜನಪದ ತಂಡದವರ ವಾದ್ಯ ಜಗ್ಗಲಿಗೆಯನ್ನು ಭಾರಿಸಿದರು.

ರಾಹುಲ್ ಗಾಂಧಿ ಅವರು ಯಾಂತ್ರಿಕವಾಗಿ ಭಾರಿಸಿದರೆ, ಜನಪದ ಕಲೆಗಳ ಪರಿಚಯ ಮತ್ತು ಹಿನ್ನೆಲೆಯುಳ್ಳ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಜ್ಜೆಹಾಕುತ್ತಾ ಉತ್ಸಾಹ ಭರಿತವಾಗಿ ಜಗ್ಗಲಿಗೆ ಭಾರಿಸಿದರು.

Rahul Gandhi and CM Siddaramaiah beat folk drums

ಇಬ್ಬರೂ ನಾಯಕರು ಜಗ್ಗಲಿಗೆ ಬಾರಿಸುತ್ತಿದ್ದರೆ ಸೇರಿದ್ದ ಕಾರ್ಯಕರ್ತರು ಘೋಷಣೆ ಕೂಗುತ್ತಾ ಉತ್ಸಾಹ ತುಂಬಿದರು. ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರು ಜಗ್ಗಲಿಗೆ ಭಾರಿಸಿದ ದೃಶ್ಯದ ವಿಡಿಯೋವನ್ನು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು ಕೆಲವೇ ನಿಮಿಷಗಳಲ್ಲಿ ನೂರಾರು ಮಂದಿ ಲೈಕ್ ಮಾಡಿದ್ದಾರೆ.

ಅಲ್ಲಿಂದ ತೆರಳಿದ ರಾಹುಲ್ ಅವರು ದಿಡೀರ್‌ನೆ ದಾರಿಯಲ್ಲಿ ಸಿಕ್ಕ ಹೊಲಗಳಿಗೆ ಭೇಟಿ ನೀಡಿ ರೈತ ಸಾಲ, ಕೃಷಿ ಪದ್ಧತಿ, ಲಾಭ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಪಡೆದರು.

English summary
AICC president Rahul Gandhi and CM Siddaramaiah beat folk drum 'Jaggalige' in Savadathi today. Siddaramaiah beats drum with action but Rahul did it mechanically.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X