ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಮು ಗಲಭೆ ಸೃಷ್ಟಿಸಿದ ಆಟ ಮೈದಾನ

By Vanitha
|
Google Oneindia Kannada News

ಬೆಳಗಾವಿ, ಜುಲೈ, 13 : ನಗರದ ಹಳೆ ಗಾಂಧಿನಗರ ಮಾರುಕಟ್ಟೆ ಬಳಿ ಇದ್ದಕ್ಕಿದ್ದ ಹಾಗೆ ಭಾನುವಾರ ರಾತ್ರಿ ಕೋಮುಗಲಭೆ ಏರ್ಪಟ್ಟಿದೆ. ಗಾಳಿಯಲ್ಲಿ ಗೂಡು ಹಾರಿಸಿ ಅಶ್ರುವಾಯು ಸಿಂಪಡಿಸುವುದರ ಮೂಲಕ ಗಲಭೆಯನ್ನು ಹತೋಟಿಗೆ ತಂದ ಪೊಲೀಸರು 55 ಮಂದಿಯನ್ನು ಬಂಧಿಸಿದ್ದಾರೆ.

ಗಾಂಧಿ ನಗರ ಬಳಿಯ ಆಟದ ಮೈದಾನದಲ್ಲಿ ಕನ್ನಡ, ಮರಾಠಿ, ಉರ್ದು ಶಾಲೆಯ ಹುಡುಗರು ಕ್ರಿಕೆಟ್ ಆಡುವುದನ್ನು ಒಬ್ಬ ವ್ಯಕ್ತಿ ವಿರೋಧ ವ್ಯಕ್ತ ಪಡಿಸಿದನು. ಇದರಿಂದ ಕುಪಿತಗೊಂಡ ಪೋಷಕರ ನಡುವೆ ಸಣ್ಣ ಗಲಭೆ ಏರ್ಪಟ್ಟಿದೆ. ನಂತರ ತಾರಕ್ಕೆಕ್ಕೇರಿದ ಪರಿಣಾಮ ಸಾಕಷ್ಟು ಹಿಂಸಾಕೃತ್ಯಗಳು ಜರುಗಿವೆ.[ಹೀರೋ ಮತ್ತೆ ರಾಜ್ಯಕ್ಕೆ ಬಂದೇ ಬರುತ್ತದೆ : ಸಿದ್ದರಾಮಯ್ಯ]

Quarrel over playground leads to violence in Belagavi; 55 arrested

ಗಲಭೆಯಲ್ಲಿ ಕಲ್ಲು ತೂರಾಟ ಸಂಭವಿಸಿದ್ದು, ಹತೋಟಿಗೆ ತರುವಲ್ಲಿ ಪೊಲೀಸರು ಹರಸಾಹಸ ಪಡುವಂತಾಯಿತು. ಪೊಲೀಸ್ ಸಿಬ್ಬಂದಿ ಸೇರಿದಂತೆ 15 ಜನರಿಗೆ ಗಾಯಗಳಾಗಿವೆ. ರಸ್ತೆ ಬದಿಯ ಸಾಕಷ್ಟು ವಾಹನಗಳು ಜಖಂಗೊಂಡಿದೆ. ಇದರ ಪರಿಣಾಮ ಬೇರೆಡೆಯಿಂದ ಪೊಲೀಸ್ ಸಿಬ್ಬಂದಿಯನ್ನು ತರಿಸಲಾಗಿದ್ದು. ನಗರದ ಸೂಕ್ಷ್ಮ ಪ್ರದೇಶದಲ್ಲಿ ಸಿಬ್ಬಂಧಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.

English summary
At least 15 persons were injured and nearly a dozen roadside vehicles,4 wheelers,damaged in the sudden communal violence.55 people have been arrested on Monday afternoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X