ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೌಢ್ಯ ವಿರೋಧಿ ಸಂಕಲ್ಪ ದಿನ: ಪೂರ್ವ ಸಿದ್ಧತೆ ಪರಿಶೀಲನೆ

By ಬೆಳಗಾವಿ ಪ್ರತಿನಿಧಿಯಿಂದ
|
Google Oneindia Kannada News

ಬೆಳಗಾವಿ, ಡಿಸೆಂಬರ್ 04 : ನಗರದ ಮಹಾನಗರ ಪಾಲಿಕೆಯ ಸದಾಶಿವ ನಗರದ ಬುದ್ಧ ಬಸವ ಅಂಬೇಡ್ಕರ್ ಶಾಂತಿಧಾಮ (ಸ್ಮಶಾನದಲ್ಲಿ) ಮಾನವ ಬಂಧುತ್ವ ವೇದಿಕೆ ವತಿಯಿಂದ ಡಿ.06 ರಂದು ಮೌಢ್ಯ ವಿರೋಧಿ ಸಂಕಲ್ಪ ದಿನ ನಡೆಯಲಿದೆ.

ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ

ಶಾಸಕ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಕಾರ್ಯಕ್ರಮ ನಡೆಯಲಿದೆ. ಸಮಾರಂಭದ ಪೂರ್ವ ಸಿದ್ಧತೆಗಳನ್ನು ಭಾನುವಾರ (ಡಿ.03)ರಂದು ಶಾಸಕ ಸತೀಶ್ ಜಾರಕಿಹೊಳಿ ಅವರು ಪರಿಶೀಲಿಸಿದರು.

Preparations in full swing for Anti Superstitious Day

ಬುದ್ಧ ಬಸವ ಅಂಬೇಡ್ಕರ್ ಶಾಂತಿಧಾಮದಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿರುವ ಸಿದ್ಧತಾ ಕಾರ್ಯಗಳು ಅಂತಿಮ ಹಂತಕ್ಕೆ ತಲುಪಿದ್ದು ಈ ಹಿನ್ನೆಲೆಯಲ್ಲಿ ಶಾಸಕರು ಸಿದ್ಧತೆ ಕಾರ್ಯಗಳು ವಿಕ್ಷಿಸಿದ ನಂತರ ಸಂಘಟಿಕರೊಂದಿಗೆ ಕಾರ್ಯಕ್ರಮದ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಅಂಬೇಡ್ಕರ್ ಸಮ್ಮೇಳನ ದಲಿತರ ಜಾಗೃತಿಗೋ, ಚುನಾವಣೆ ತಂತ್ರವೋ?ಅಂಬೇಡ್ಕರ್ ಸಮ್ಮೇಳನ ದಲಿತರ ಜಾಗೃತಿಗೋ, ಚುನಾವಣೆ ತಂತ್ರವೋ?

Preparations in full swing for Anti Superstitious Day

ಕಳೆದ 3 ವರ್ಷಗಳಿಂದ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಈ ಬಾರಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಸದಾಶಿವ ನಗರದ ರುದ್ರಭೂಮಿ ಮದುವೆ ಮನೆಯಂತೆ ಕಂಗೊಳಿಸುತ್ತಿದ್ದು ಇದರ ಸಿದ್ಧತೆಗಳನ್ನು ಕಂಡು ಶಾಸಕರು ಮೆಚ್ಚುಗೆ ವ್ಯಕತಪಡಿಸಿದರು.

Preparations in full swing for Anti Superstitious Day

ಅಲ್ಲದೇ ರಾಜ್ಯಾದ್ಯಂತದಿಂದ ಬರುವ ಜನರಿಗೆ ಕಾರ್ಯಕ್ರಮದಲ್ಲಿ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಬರುವ ಜನರಿಗೆ ಉಪಹಾರ, ಊಟ ನೀರು ಆಸನಗಳ ವ್ಯವಸ್ಥೆಗಳನ್ನು ಯಾವುದೇ ರೀತಿಯ ತೊಂದರೆಯಾಗದಂತೆ ಒದಗಿಸಿಕೊಡಬೇಕೆಂದು ಶಾಸಕರು ಸಂಘಟಿಕರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಸಂಘಟಕರುಗಳಾದ ಮಹೇಶ ಕಡಪಟ್ಟಿ, ನಾಡಗೌಡ (ಢವಳೇಶ್ವರ), ಮಲಗೌಡ ಪಾಟೀಲ, ಆರೀಪ ಪೀರಜಾದೆ, ವಿಜಯ ತಳವಾರ, ಅಲ್ಲಾಖಾನ, ಹಬೀಬ ಶಿಲ್ಲೇದಾರ, ಅನಿಲ ಪಾವಸೆ, ರವಿ ಹಂದಿಗುಂದ, ರಮೇಶ ಪಾಟೀಲ ಮತ್ತು ಇತರರು ಉಪಸ್ತಿತರಿದ್ದರು.

English summary
To mark the Dr. BR Ambedkar Maha Parinirvan Day, Anti superstitious day has been organized by former minister satish Jarkhiholi in Belgaum on dec.06.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X