ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುತಾಲಿಕ್ ಜತೆಗೆ ಅಶ್ಲೀಲ ಫೋಟೋ ಹಾಕಿದ ಜೆಡಿಎಸ್ ಮುಖಂಡನಿಗೆ ಒದೆ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಹುಕ್ಕೇರಿ, ನವೆಂಬರ್ 17: ಶ್ರೀರಾಮಸೇನೆ ಕಾರ್ಯಕರ್ತರಿಂದ ನೈತಿಕ ಪೊಲೀಸ್ ಗಿರಿ ಪ್ರದರ್ಶನವಾಗಿದೆ. ಜೆಡಿಎಸ್ ಮುಖಂಡರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ಫೇಸ್ ಬುಕ್ ನಲ್ಲಿ ಅಶ್ಲೀಲ ಪೋಟೋಗಳ ಜೊತೆ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಪೋಟೋ ಹಾಕಿರುವ ಆರೋಪದ ಮೇಲೆ ಜೆಡಿಎಸ್ ಮುಖಂಡ ಬಸಗೌಡ ಪಾಟೀಲ ಎಂಬುವರನ್ನು ಥಳಿಸಲಾಗಿದೆ.

Pramod muthalik photo with Blue Boys of BJP poster on Facebook irks Sri Ram Sena

ಜೆಡಿಎಸ್ ಮುಖಂಡನಿಗೆ ಥಳಿಸಿ, ಮಸಿ ಬಳೆದು ಶ್ರೀರಾಮಸೇನಾ ಕಾರ್ಯಕರ್ತರು ಮೆರವಣಿಗೆ ಮಾಡಿದ್ದಾರೆ.

ಫೇಸ್ ಬುಕ್ ನಲ್ಲಿ ಬ್ಲೂ ಬಾಯ್ಸ್ ಆಫ್ ಬಿಜೆಪಿ ಎಂಬ ಫೋಟೋದಲ್ಲಿ ಪ್ರಮೋದ್ ಮುತಾಲಿಕ್ ಫೋಟೋ ಹಾಕಿದ ಕಾರಣಕ್ಕೆ ನೈತಿಕ ಪೊಲೀಸ್ ಗಿರಿ ಮೆರೆದಿದ್ದಾರೆ.

ಜೆಡಿಎಸ್ ಮುಖಂಡ ಬಸಗೌಡ ಪಾಟೀಲ ಎಂಬುವರಿಗೆ ಥಳಿಸಿ, ಮಸಿ ಬಳಿದು, ಒಂದು ಕಿಲೋ ಮೀಟರ್ ವರೆಗೆ ಮಸಿ ಹಾಕಿ ಮೆರವಣಿಗೆ ಮಾಡಿದ್ದಾರೆ.

ನಂತರ ಘಟನೆ ಬಗ್ಗೆ ತಿಳಿದ ಪೊಲೀಸರು, ಬಸಗೌಡ ಪಾಟೀಲನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಹುಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
Sri Rama Sena activists held portest against the miscreants who defamed Pramod Muthalik on Social networking sites. JDS leader Basagowda Patil allegedly made a poster with a headline Blue Boys of BJP poster
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X