ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮ್ಯಾಪ್ ಸಹಾಯದಿಂದ ಕಳ್ಳತನ; ಬೆಳಗಾವಿಯಲ್ಲಿ ಹೈಟೆಕ್ ಕಳ್ಳರ ಬಂಧನ

|
Google Oneindia Kannada News

ಬೆಳಗಾವಿ, ಅಕ್ಟೋಬರ್ 27: ಗೂಗಲ್ ಮ್ಯಾಪ್ ಮೂಲಕ ನಗರದ ಹೊರವಲಯದ ಮನೆಗಳನ್ನು ಗುರುತಿಸಿ ಕಳ್ಳತನ ಮಾಡಲು ಪ್ಲಾನ್ ಮಾಡುತ್ತಿದ್ದ ಖತರ್ನಾಕ್ ಕಳ್ಳರು ಇದೀಗ ಬೆಳಗಾವಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಇಸ್ತುರಲ್ ಗ್ರಾಮದ ಪ್ರಶಾಂತ ಕಾಶಿನಾಥ ಕರೋಶಿ (35) ಹಾಗೂ ಧಾಮಣಿ ಗ್ರಾಮದ ಅವಿನಾಶ್ ಶಿವಾಜಿ ಅಡಾವಕರ್ (28) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವಿಡಿಯೋ; ಸಿಸಿ ಟಿವಿಯಲ್ಲಿ ಸೆರೆಯಾಯ್ತು ಚಾಲಾಕಿ ಕಳ್ಳನ ಕೈಚಳಕವಿಡಿಯೋ; ಸಿಸಿ ಟಿವಿಯಲ್ಲಿ ಸೆರೆಯಾಯ್ತು ಚಾಲಾಕಿ ಕಳ್ಳನ ಕೈಚಳಕ

ಗೂಗಲ್ ಮ್ಯಾಪ್ ತಂತ್ರಜ್ಞಾನ ಬಳಕೆ ಮಾಡಿಕೊಂಡು ಬೆಳಗಾವಿ ನಗರ ಪ್ರದೇಶದ ಹೊರ ವಲಯದ ಮನೆಗಳನ್ನು ಸ್ಯಾಟಲೈಟ್ ಮೂಲಕ ಈ ಕಳ್ಳರು ಪತ್ತೆ ಮಾಡುತ್ತಿದ್ದರು. ನಂತರ, ಆ ಮನೆಯ ಅಕ್ಕಪಕ್ಕ ಏನೇನಿದೆ? ಎಷ್ಟು ಮನೆಗಳಿವೆ, ಮುಖ್ಯರಸ್ತೆಗೂ, ಆ ಮನೆಗೂ ಎಷ್ಟು ಅಂತರವಿದೆ? ಯಾರಾದರೂ ಬಂದರೆ ಎಸ್ಕೇಪ್ ಆಗಲು ಏನು ಮಾಡಬೇಕು? ಹೀಗೆ ಎಲ್ಲಾ ಸಂಗತಿಯನ್ನೂ ಗೂಗಲ್ ಮ್ಯಾಪ್ ಲೆಕ್ಕಾಚಾರ ಮಾಡಿಕೊಂಡು, ಸ್ಥಳ ಪರಿಶೀಲನೆಯನ್ನೂ ನಡೆಸುತ್ತಿದ್ದರು. ಎಲ್ಲಾ ತಿಳಿಯುತ್ತಿದ್ದಂತೆ ಒಂದು ದಿನ ನಿಗದಿಗೊಳಿಸಿ, ಆ ಮನೆಯಲ್ಲಿ ಕಳ್ಳತನಕ್ಕೂ ಮುಂದಾಗುತ್ತಿದ್ದರು.

Belagavi: Police Arrested Thieves Who Used To Rob With The Help Of Map

ಈ ಎಲ್ಲಾ ಸಂಗತಿಗಳೂ ಹೊರಬಂದಿದ್ದು, ಬೆಳಗಾವಿ ನಗರದ ಕ್ಯಾಂಪ್ ಠಾಣೆಯ ಹೊರ ವಲಯದಲ್ಲಿ ನಡೆದ ಕಳ್ಳತನ ಪ್ರಕರಣದಿಂದ. ಈ ಪ್ರಕರಣದ ತನಿಖೆ ಕೈಗೊಂಡಿದ್ದ ಕ್ಯಾಂಪ್ ಠಾಣೆಯ ಪೊಲೀಸ್ ನಿರೀಕ್ಷಕ ಡಿ.ಸಂತೋಷ ಕುಮಾರ್, ಒಂದು ತಂಡ ರಚನೆ ಮಾಡಿದ್ದರು. ಪಕ್ಕದ ರಾಜ್ಯದ ಕಳ್ಳರೇ ಕಳ್ಳತನ ಎಸಗಿರುವ ಶಂಕೆ ಈ ಪ್ರಕರಣದಲ್ಲಿ ಕಂಡುಬಂದಿತ್ತು. ಹೀಗಾಗಿ ಪಕ್ಕದ ಮಹಾರಾಷ್ಟ್ರದ ಕೊಲ್ಲಾಪುರ ಕ್ರೈಮ್ ತನಿಖಾ ತಂಡದಿಂದ ಮಾಹಿತಿ ಪಡೆದ ಪೊಲೀಸರು, ಇಲ್ಲಿ ನಡೆದ ಅಪರಾಧದ ಮಾಹಿತಿ ನೀಡಿ ಅಲ್ಲಿದ್ದ ಕೆಲವು ಶಂಕಿತ ಆರೋಪಿಗಳ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬೆಳಗಾವಿ ನಗರಕ್ಕೆ ಬಂದು ಕಳ್ಳತನ ಮಾಡಿ ವಾಪಸಾಗುತ್ತಿದ್ದ ಸಂಗತಿಯೂ ತಿಳಿದುಬಂದಿದೆ. ಈ ಮೂಲಕ ಬೆಳಗಾವಿ ನಗರದ ಲಕ್ಷ್ಮೀ ಟೆಕ್, ನಕ್ಷತ್ರ ಕಾಲೊನಿಯಲ್ಲಿನ ಮನೆ ಕಳ್ಳತನ ಸೇರಿದಂತೆ ನಗರದ ಮೂರು ಪ್ರತ್ಯೇಕ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 28.08 ಲಕ್ಷ ಮೌಲ್ಯದ ಚಿನ್ನದ ಆಭರಣಗಳು ಹಾಗೂ 11.50 ಲಕ್ಷ ಮೌಲ್ಯದ ಕಾರು ಸೇರಿದಂತೆ ಒಟ್ಟು 40 ಲಕ್ಷ ಮೌಲ್ಯದ ಸ್ವತ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ.

English summary
Thieves who used to steal homes in the city's outskirts with the help of Google Map are arrested by belagavi police
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X