ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲಪ್ರಭಾ ಒಳಹರಿವು ದಿಢೀರ್ ಕುಸಿತ; ನಿಟ್ಟುಸಿರುಬಿಟ್ಟ ನದಿಪಾತ್ರದ ಜನ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಆಗಸ್ಟ್ 18: ಪಶ್ಚಿಮ ಘಟ್ಟ ಹಾಗೂ ಬೆಳಗಾವಿಯಲ್ಲಿ ನಿನ್ನೆಯಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಮಲಪ್ರಭಾ ನದಿಯ ಒಳಹರಿವು 25 ಸಾವಿರದಿಂದ 11 ಸಾವಿರಕ್ಕೆ ತಗ್ಗಿದೆ. ಅದೇ ರೀತಿ ಹೊರಹರಿವೂ ತಗ್ಗಿದೆ.

ನಾಲ್ಕು ದಿನಗಳಿಂದ ನವಿಲುತೀರ್ಥ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ರಾಮದುರ್ಗ, ರೋಣ, ನರಗುಂದ, ಬದಾಮಿ ತಾಲೂಕುಗಳ ಅನೇಕ ಗ್ರಾಮಗಳು ಜಲಾವೃತಗೊಂಡು ಗ್ರಾಮಸ್ಥರನ್ನು ಆತಂಕಕ್ಕೆ ದೂಡಿದ್ದವು. ಆದರೆ ಮಂಗಳವಾರ ಹೊರಹರಿವು ಕಡಿಮೆಯಾಗಿದ್ದು ಬುಧವಾರ ಸಂಜೆಯವರೆಗೆ ಆ ಗ್ರಾಮಗಳ ನೀರು ಗಣನೀಯವಾಗಿ ಹಿಂದೆ ಸರಿಯುವ ಸಾಧ್ಯತೆಯಿದೆ.

 Belagavi: People Relaxed As Malaprabha Inflow Water Decreased

 ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.48 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.48 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ

ಜಲಾಶಯಕ್ಕೆ ಒಳಹರಿವು ಪ್ರಮಾಣ ಕುಗ್ಗಿದರೆ ನೀರು ಬಿಡುಗಡೆ ಪ್ರಮಾಣ ಕೂಡ ಕಡಿಮೆ ಆಗಲಿದೆ. ಇದರಿಂದ ಪ್ರವಾಹದ ಭೀತಿಯಲ್ಲಿದ್ದ ನದಿಪಾತ್ರದ ಜನರು ಆತಂಕ ತುಸು ದೂರವಾಗಿದೆ.

English summary
Rainfall has decreased since yesterday in belagavi. So the inflow water level also decreased in malaprabha river
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X