ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನರ್ಹ ಶಾಸಕ ಮಹೇಶ್ ಕುಮಟಳ್ಳಿಗೆ ಕ್ಷೇತ್ರದ ಜನರಿಂದ ಮಂಗಳಾರತಿ

|
Google Oneindia Kannada News

ಬೆಳಗಾವಿ, ಆಗಸ್ಟ್ 11: ಅಥಣಿ ಕ್ಷೇತ್ರದ ಶಾಸಕರಾಗಿದ್ದು, ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪೀಕರ್ ಅವರಿಂದ ಅನರ್ಹತೆ ಶಿಕ್ಷೆಗೆ ಒಳಗಾಗಿರುವ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಕ್ಷೇತ್ರದ ಜನ ಇಂದು ಸರಿಯಾಗಿ ಮಂಗಳಾರತಿ ಮಾಡಿದ್ದಾರೆ.

ಇಂದು ಮಹೇಶ್ ಕುಮಟಳ್ಳಿ ಅವರು ಅಥಣಿ ಕ್ಷೇತ್ರದ ಸತ್ತಿ ಗ್ರಾಮದಲ್ಲಿ ಆರಂಭಿಸಲಾಗಿರುವ ಗಂಜಿ ಕೇಂದ್ರಕ್ಕೆ ಭೇಟಿ ನೀಡಲೆಂದು ಆಗಮಿಸಿದ್ದರು. ಆಗ ಅವರನ್ನು ಸುತ್ತವರೆದ ಜನ ಮಹೇಶ್ ಕುಮಟಳ್ಳಿ ಅವರನ್ನು ಬಲವಂತವಾಗಿ ಕಾರಿನಿಂದ ಇಳಿಸಿದರು.

ನಾಲ್ವರು ಸಂತ್ರಸ್ತರಿಗೆ ಮನೆಯಲ್ಲೇ ಆಶ್ರಯ ನೀಡಿದ ಅಥಣಿಯ ಮಾಜಿ ಶಾಸಕ ನಾಲ್ವರು ಸಂತ್ರಸ್ತರಿಗೆ ಮನೆಯಲ್ಲೇ ಆಶ್ರಯ ನೀಡಿದ ಅಥಣಿಯ ಮಾಜಿ ಶಾಸಕ

ಮಹೇಶ್ ಕುಮಟಳ್ಳಿ ಅವರನ್ನು ಬಲವಂತವಾಗಿ ಕಾರಿನಿಂದ ಕೆಳಗೆ ಇಳಿಸಿದ ಜನರು, ಅವರನ್ನು ರಸ್ತೆಯ ಮೇಲೆ ಕೂರುವಂತೆ ಸೂಚಿಸಿ ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡರು.

People Lambasted On Disqualified MLA Mahesh Kumatalli In Athani

ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತೀರಿ ಎಂದು ನಿಮ್ಮನ್ನು ಆರಿಸಿ ಕಳಿಸಿದ್ದೆವು ಆದರೆ ನೀವು ನಿಮ್ಮ ಸುಖಕಕ್ಕಾಗಿ ರಾಜೀನಾಮೆ ನೀಡಿದ್ದೀರಿ. ನೀವು ಈಗ ಸುಖವಾಗಿ ಇದ್ದೀರಿ ಆದರೆ ನಾವು ಸುಖವಾಗಿ ಇಲ್ಲ ಎಂದು ಜನರು ಮಹೇಶ್ ಕುಮಟಳ್ಳಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಭಾರೀ ಮಳೆಯಿಂದ ಕೇರಳದಲ್ಲಿ ಅನಾಹುತ; ಸತ್ತವರ ಸಂಖ್ಯೆ 68ಕ್ಕೆ ಏರಿಕೆಭಾರೀ ಮಳೆಯಿಂದ ಕೇರಳದಲ್ಲಿ ಅನಾಹುತ; ಸತ್ತವರ ಸಂಖ್ಯೆ 68ಕ್ಕೆ ಏರಿಕೆ

ರಾಜೀನಾಮೆ ನೀಡುವಾಗ ನಮ್ಮನ್ನು ಏನಾದರೂ ಕೇಳಿದ್ದಿರೇ? ಆಗ ಜನರ ಬಗ್ಗೆ ಕ್ಷೇತ್ರದ ಬಗ್ಗೆ ಇಲ್ಲದ ಕಾಳಜಿ ಈಗ ರಾಜೀನಾಮೆ ನೀಡಿದ ಮೇಲೆ ಬಂದಿದೆಯೇ ಎಂದು ಸಾರ್ವಜನಿಕರು ಕುಮಟಳ್ಳಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರವಾಹ: ಯಡಿಯೂರಪ್ಪ ಜೊತೆ ಜಂಟಿ ವೈಮಾನಿಕ ಸಮೀಕ್ಷೆ ನಡೆಸಿದ ಶಾ ಪ್ರವಾಹ: ಯಡಿಯೂರಪ್ಪ ಜೊತೆ ಜಂಟಿ ವೈಮಾನಿಕ ಸಮೀಕ್ಷೆ ನಡೆಸಿದ ಶಾ

English summary
Disqualified MLA Mahesh Kumtalli visited a flood affected area today in Athani. But people caught him drag him out of his car and lambasted on him for resigning to the MLA post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X