ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿಯ ಅಚ್ಚೇದಿನ್ 'ಬರೀ ಓ ಭ್ರಮೆ' ಎಂದು ಯುವಕರಿಗೆ ಗೊತ್ತಾಗಿದೆ

|
Google Oneindia Kannada News

ಬೆಳಗಾವಿ, ಏಪ್ರಿಲ್ 9: "ಪ್ರಧಾನಿ ನರೇಂದ್ರ ಮೋದಿಯವರು ಯುವಕರಿಗೆ ಮೋಡಿ ಮಾಡಿದ್ದರು. ಹಾಗಾಗಿ, ಯುವಕರೆಲ್ಲಾ ಹೋದಲ್ಲಿ, ಬಂದಲ್ಲಿ ಮೋದಿ..ಮೋದಿ ಎನ್ನುತ್ತಿದ್ದರು. ಈಗ ಮೋದಿ ಬರೀ ಭ್ರಮೆ ಎಂದು ಗೊತ್ತಾಗಿದೆ"ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿ ಲೋಕಸಭಾ ಉಪಚುನಾವಣೆಯ ಸಂಬಂಧ ಸವದತ್ತಿಯಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, "ವಿದೇಶದಿಂದ ಕಪ್ಪುಹಣ ತರುತ್ತೇನೆ ಎಂದರು, ಹದಿನೈದು ಲಕ್ಷ ಅಕೌಂಟಿಗೆ ಹಾಕುತ್ತೇನೆ ಎಂದರೆ. ಆದರೆ ಹದಿನೈದು ಪೈಸಾನೂ ಹಾಕಿಲ್ಲ"ಎಂದು ಲೇವಡಿ ಮಾಡಿದರು.

ಸಾರಿಗೆ ನೌಕರರ ಮುಷ್ಕರ; ಸರ್ಕಾರವೇ ಹೊಣೆ ಎಂದ ಸಿದ್ದರಾಮಯ್ಯಸಾರಿಗೆ ನೌಕರರ ಮುಷ್ಕರ; ಸರ್ಕಾರವೇ ಹೊಣೆ ಎಂದ ಸಿದ್ದರಾಮಯ್ಯ

"ವರ್ಷಕ್ಕೆ ಎರಡು ಕೋಟಿ, ಐದು ವರ್ಷಕ್ಕೆ ಹತ್ತು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದಿದ್ದ ಮೋದಿವರು, ಏಳು ವರ್ಷವಾದರೂ ಹತ್ತು ಸಾವಿರ ಉದ್ಯೋಗವನ್ನೂ ಸೃಷ್ಟಿಸಿಲ್ಲ. ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಮುಚ್ಚಿದವು"ಎಂದು ಸಿದ್ದರಾಮಯ್ಯ ಆರೋಪಿಸಿದರು.

Opposition Leader Siddaramaiah Criticized Narenda Modi Led Union Government Over Price Hike

"ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗುತ್ತದೆ, ಹಣದುಬ್ಬರ ಕಮ್ಮಿಯಾಗುತ್ತದೆ ಎನ್ನುವ ಮಾತನ್ನು ಮೋದಿ ಆಡಿದ್ದರು. ಈಗ ನೀವೆಲ್ಲಾ ಅನುಭವಿಸುತ್ತಿದ್ದೀರಾ, ರಸಗೊಬ್ಬರ ಬೆಲೆ ಏರಿಕೆಯಾಗಿದೆ. ಅಡುಗೆ ಎಣ್ಣೆ ಬೆಲೆ ಗಗನಕ್ಕೇರಿದೆ"ಎಂದು ಸಿದ್ದರಾಮಯ್ಯನವರು ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

"ಮೋದಿಯವರು ಪ್ರಧಾನಿಯಾದ ನಂತರ ಒಮ್ಮೆಯಾದರೂ ಸತ್ಯ ಹೇಳಿದ್ದಾರಾ? ಪುಣ್ಯಾತ್ಮ ಒಂದು ದಿನವಾದರೂ ಬೆಲೆ ಏರಿಕೆಯ ಬಗ್ಗೆ ಮಾತನಾಡುವುದೇ ಇಲ್ಲ. ರಸಗೊಬ್ಬರಕ್ಕೆ ಕೊಡುತ್ತಿದ್ದ ಸಬ್ಸಿಡಿಯನ್ನೂ ಕಮ್ಮಿ ಮಾಡಿದರು"ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದರು.

ರಾಜಕೀಯ, ವೈಯಕ್ತಿಕ ಸಂಬಂಧ ಬೇರೆ ಬೇರೆ: ಮತ್ತೆ ಋಜುವಾತು ಮಾಡಿದ ಬಿಜೆಪಿ, ಕಾಂಗ್ರೆಸ್ ನಾಯಕರುರಾಜಕೀಯ, ವೈಯಕ್ತಿಕ ಸಂಬಂಧ ಬೇರೆ ಬೇರೆ: ಮತ್ತೆ ಋಜುವಾತು ಮಾಡಿದ ಬಿಜೆಪಿ, ಕಾಂಗ್ರೆಸ್ ನಾಯಕರು

"ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಿನ ಕಚ್ಚಾತೈಲದ ಬೆಲೆ ಆಧಾರದ ಮೇಲೆ ಹೇಳುವುದಾದರೆ, ಮೂವತ್ತರಿಂದ ನಲವತ್ತು ರೂಪಾಯಿಗೆ ಡೀಸೆಲ್ ಅನ್ನು ಮಾರಾಟ ಮಾಡಬಹುದು. ಸಾರ್ವಜನಿಕರಿಗೆ ಒಳ್ಳೆಯದನ್ನು ಮಾಡಬೇಕು ಎನ್ನುವ ಮನಸ್ಸು ಮೊದಲು ಇರಬೇಕು"ಎಂದು ಸಿದ್ದರಾಮಯ್ಯನವರು ಕೇಂದ್ರ ಸರಕಾರದ ವಿರುದ್ದ ಕಿಡಿಕಾರಿದರು. (ಚಿತ್ರ:ಪಿಟಿಐ)

English summary
Opposition Leader Siddaramaiah Criticized Narenda Modi Led Union Government Over Price Hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X