• search
 • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾನು ಲವ್ ಮಾಡಿದೆ ಅಂತ ಇಟ್ಕೊಳ್ಳಿ: ಸದನದಲ್ಲಿ ಸಿದ್ದರಾಮಯ್ಯ ವೀರಾವೇಶ

|
Google Oneindia Kannada News

ಬೆಂಗಳೂರು, ಡಿ 23: ರಾಜ್ಯ ಸರಕಾರ ತರಾತುರಿಯಲ್ಲಿ ಮಂಡಿಸಿದಂತಹ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ - 2021 ಕುರಿತು ಸದನದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸರಕಾರಕ್ಕೆ ತನ್ನದೇ ಶೈಲಿಯಲ್ಲಿ ಬಿಸಿಮುಟ್ಟಿಸುತ್ತಿದ್ದಾರೆ.

ವಿಧೇಯಕದ ಸಮಗ್ರ ಅಂಶಗಳ ಕುರಿತು ಚರ್ಚೆಗೆ ಅವಕಾಶ ನೀಡುವುದಾಗಿ ಸರಕಾರ ಹೇಳಿರುವುದರಿಂದ, ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ವಿಧೇಯಕ ಜಾರಿಗೆ ಬರಬಾರದು, ಬಂದರೆ ಏನು ತೊಂದರೆ ಎನ್ನುವುದನ್ನು ಸದನದ ಮುಂದಿಡುತ್ತಿದ್ದಾರೆ.

ಅಂದು ರಾಮನಗರದಲ್ಲಿ, ಈಗ ಶಿಗ್ಗಾಂವ್ ನಲ್ಲಿ 'ಅಧಿಕಾರ ಶಾಶ್ವತವಲ್ಲ' ಹೇಳಿಕೆ: ಮುಂದಾ?ಅಂದು ರಾಮನಗರದಲ್ಲಿ, ಈಗ ಶಿಗ್ಗಾಂವ್ ನಲ್ಲಿ 'ಅಧಿಕಾರ ಶಾಶ್ವತವಲ್ಲ' ಹೇಳಿಕೆ: ಮುಂದಾ?

"ಮಹಾತ್ಮ ಗಾಂಧೀಜಿಯವರು ಹಿಂದೊಮ್ಮೆ ಹೇಳಿದ್ದರು, ಶಾಸನದಲ್ಲಿ ಅವಕಾಶವಿದ್ದರೆ, ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತರುವುದಾಗಿ ಹೇಳಿದ್ದರು. ತಾವೆಲ್ಲಾ ಗಾಂಧೀಜಿಯವರ ಹಿಂಬಾಲಕರು ಎಂದು ಹೇಳಿಕೊಳ್ಳುವವರು, ಅವರ ಆಸೆಯನ್ನು ಈಡೇರಿಸಲು ನಮಗೆ ಸಹಕಾರ ನೀಡಿ"ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಸರಕಾರದ ಸಮರ್ಥನೆಗೆ ನಿಂತರು.

ಸಿದ್ದರಾಮಯ್ಯನವರು ಸವಿಸ್ತಾರವಾಗಿ ಈ ವಿಧೇಯಕದ ಕುಂದು ಕೊರತೆಯನ್ನು ವಿವರಿಸುತ್ತಾ, ಅಲ್ಲಲ್ಲಿ ಲವ್, ಮದುವೆ, ವಯಸ್ಸಾಗಿದೆ ಎನ್ನುವ ಮಾತನ್ನು ಹೇಳುತ್ತಾ, ಸದನವನ್ನು ನಗೆಗಡಲಲ್ಲಿ ತೇಲಿಸಿದರು. ಸಿದ್ದರಾಮಯ್ಯನವರು ಹೇಳಿದ್ದು ಇಷ್ಟು

ವಯಸ್ಸಿಗೂ ಪ್ರೀತಿಗೂ ಒಂದಕ್ಕೊಂದು ಇಂಟರ್ ಲಿಂಕ್

ವಯಸ್ಸಿಗೂ ಪ್ರೀತಿಗೂ ಒಂದಕ್ಕೊಂದು ಇಂಟರ್ ಲಿಂಕ್

"ಯಾರಾದರೊಬ್ಬರು ಲವ್ ಮಾಡಿ ಮದುವೆ ಮಾಡಿಕೊಳ್ಳುತ್ತಾರೆ ಅಂತ ಇಟ್ಕೊಳ್ಳಿ, ನಾನಲ್ಲ, ನನಗೆ ವಯಸ್ಸಾಯಿತು ಬಿಡಿ, ಈಗ ಆಗಲ್ಲ"ಎಂದು ಸಿದ್ದರಾಮಯ್ಯನವರು ಹೇಳಿದಾಗ, ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ, "ವಯಸ್ಸಿಗೂ ಪ್ರೀತಿಗೂ ಒಂದಕ್ಕೊಂದು ಇಂಟರ್ ಲಿಂಕ್" ಇದೆಯಾ ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರು. "ಪ್ರೀತಿ ಬೇರೆ, ಮದುವೆ ಬೇರೆ, ಪ್ರೀತಿ ಯಾವ ವಯಸ್ಸಿನವರೂ ಮಾಡಬಹುದು, ಅದಕ್ಕೇನು ಏಜ್ ಲಿಮಿಟ್ ಇಲ್ಲ"ಎಂದು ಸಿದ್ದರಾಮಯ್ಯ ಇದಕ್ಕೆ ಪ್ರತ್ಯುತ್ತರ ಕೊಟ್ಟರು.

ವಿರೋಧ ಪಕ್ಷದ ನಾಯಕರೇ ನಿಮಗೆ ವಯಸ್ಸಾಗಿದೆ ಎಂದು ಯಾರು ಹೇಳಿದರು?

ವಿರೋಧ ಪಕ್ಷದ ನಾಯಕರೇ ನಿಮಗೆ ವಯಸ್ಸಾಗಿದೆ ಎಂದು ಯಾರು ಹೇಳಿದರು?

ಆಗ ಎದ್ದು ನಿಂತ ಸಚಿವ ಕೆ.ಎಸ್.ಈಶ್ವರಪ್ಪ, "ವಿರೋಧ ಪಕ್ಷದ ನಾಯಕರೇ ನಿಮಗೆ ವಯಸ್ಸಾಗಿದೆ ಎಂದು ಯಾರು ಹೇಳಿದರು, ನಿಮ್ಮ ಮನೆಯವರು ಹೇಳಿಲ್ಲ ತಾನೇ"ಎಂದು ಕಿಚಾಯಿಸಿದರು. "ವಯಸ್ಸು ಎನ್ನುವುದು ಮನಸಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಯಾವ ಧರ್ಮ ಎನ್ನುವುದನ್ನು ನೋಡದೇ ಹುಡಗ ಮತ್ತು ಹುಡುಗಿ ಒಬ್ಬರನ್ನೊಬ್ಬರು ಲವ್ ಮಾಡುತ್ತಾರೆ. ಇದಕ್ಕೆ ಕಾನೂನಿನಲ್ಲೂ ಅವಕಾಶವಿದೆ. ಅದಕ್ಕೆ ಅಡ್ಡಿ ಬರಲು ನೀವ್ಯಾರು"ಎಂದು ಸಿದ್ದರಾಮಯ್ಯ, ಸರಕಾರವನ್ನು ಪ್ರಶ್ನಿಸಿದರು.

ಗುಜರಾತ್ ಹೈಕೋರ್ಟ್ ಅಲ್ಲಿನ ಸರಕಾರವನ್ನು ಪ್ರಶ್ನಿಸಿ ಛೀಮಾರಿ ಹಾಕಿತ್ತು

ಗುಜರಾತ್ ಹೈಕೋರ್ಟ್ ಅಲ್ಲಿನ ಸರಕಾರವನ್ನು ಪ್ರಶ್ನಿಸಿ ಛೀಮಾರಿ ಹಾಕಿತ್ತು

"ನಾನು ಕೇಳಿದ ಪ್ರಶ್ನೆಯನ್ನೇ ಗುಜರಾತ್ ಹೈಕೋರ್ಟ್ ಅಲ್ಲಿನ ಸರಕಾರವನ್ನು ಪ್ರಶ್ನಿಸಿ ಛೀಮಾರಿ ಹಾಕಿತ್ತು. ಹುಡುಗ, ಹುಡುಗಿ ಪ್ರೀತಿಸಿ ಮದುವೆಯಾದರೆ ಅದನ್ನು ಪ್ರಶ್ನೆ ಮಾಡಲು ನಿಮಗೇನು ಹಕ್ಕಿದೆ, ಅದು ಅವರ ಹಕ್ಕು ಮತ್ತು ಅವರ ಜೀವನ ಎಂದು ಹೈಕೋರ್ಟ್, ಗುಜರಾತ್ ಸರಕಾರಕ್ಕೆ ಚಾಟಿ ಬೀಸಿತ್ತು. ಹಾಗಾಗಿ ಮತಾಂತರ ನಿಷೇಧ ಕಾಯಿದೆಗೆ ಗುಜರಾತ್ ಹೈಕೋರ್ಟ್ ತಡೆಯಾಜ್ಣೆಯನ್ನು ನೀಡಿದೆ"ಎಂದು ಸಿದ್ದರಾಮಯ್ಯನವರು ಸರಕಾರದ ಕಿವಿ ಹಿಂಡಿದರು.

ಚೀಫ್ ಮಿನಿಸ್ಟರ್ ಎಂದರೆ ಡಿಕ್ಟೇಟರ್ ಅಲ್ಲ, ಎಲ್ಲರ ಹಾಗೇ ಇರುವ ಜನಸಾಮಾನ್ಯ

ಚೀಫ್ ಮಿನಿಸ್ಟರ್ ಎಂದರೆ ಡಿಕ್ಟೇಟರ್ ಅಲ್ಲ, ಎಲ್ಲರ ಹಾಗೇ ಇರುವ ಜನಸಾಮಾನ್ಯ

"ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ತಂದಿದ್ದಂತಹ ಮತಾಂತರ ನಿಷೇಧ ಕಾಯಿದೆ ಮತ್ತು ಕರ್ನಾಟಕ ಸರಕಾರ ಜಾರಿಗೆ ತರಲು ಮುಂದಾಗಿರುವ ಈ ವಿಧೇಯಕದ ಅಂಶಗಳು ಎಲ್ಲಾ ಬಹುತೇಕ ಒಂದೇ. ಅಲ್ಲಿನ ಸರಕಾರದ ಅಂಶಗಳನ್ನು ಕಟ್ ಎಂಡ್ ಪೇಸ್ಟ್ ಮಾಡಿ ಹಾಕಲಾಗಿದೆ. ಚೀಫ್ ಮಿನಿಸ್ಟರ್ ಎಂದರೆ ಡಿಕ್ಟೇಟರ್ ಅಲ್ಲ, ಎಲ್ಲರ ಹಾಗೇ ಇರುವ ಜನಸಾಮಾನ್ಯ. ನಾನು ಈ ಹಿಂದೆ ಮತಾಂತರ ನಿಷೇಧ ವಿಧೇಯಕದ ವಿಚಾರವನ್ನು ಸಚಿವ ಸಂಪುಟದ ಸಭೆಯಲ್ಲಿ ತನ್ನಿ ಎಂದು ಹೇಳಿರುವುದು ಸತ್ಯ"ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸದನದಲ್ಲಿ ಒಪ್ಪಿಕೊಂಡಿದ್ದಾರೆ.

   ಮೊಹಮ್ಮದ್ ಸಿರಾಜ್ ಅವರನ್ನು ಹಾಡಿ ಹೊಗಳಿದ ಸಚಿನ್ ತೆಂಡೂಲ್ಕರ್ | Oneindia Kannada

   English summary
   Opposition Leader Siddaramaiah Agressive Speech In Assembly On Anti - Conversion Bill. Know More
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X