ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ: ಪಿಎಂ ಕೇರ್ಸ್ ಗೆ 1 ಲಕ್ಷ ರೂ, ಕೊಟ್ಟ 85 ರ ವೃದ್ಧೆ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಮೇ 13: ಅನಾರೋಗ್ಯವಿರುವುದರಿಂದ ಮೇಲೆದ್ದು ನಡೆದಾಡಲು ಆಗದ ಸ್ಥಿತಿ ಅವಳದ್ದು, ಇದರ ಮಧ್ಯದಲ್ಲಿಯೇ 85 ರ ವಯಸ್ಸಿನ ಅಜ್ಜಿಗೆ ಈಗ ದೇಶದ ಜನರ ಆರೋಗ್ಯದ ಚಿಂತೆ. ಇದೇ ಕಾರಣಕ್ಕಾಗಿ ಜನರ ಆರೋಗ್ಯಕ್ಕಾಗಿ ತಾನು ಕೂಡಿಟ್ಟ 1 ಲಕ್ಷ ರೂ. ಹಣವನ್ನು ಪ್ರಧಾನಮಂತ್ರಿ ಕೇರ್ಸ್ ಗೆ ದೇಣಿಗೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.

ಇಷ್ಟಕ್ಕೂ ಈ ಮಹಾ ಉಪಕಾರಿ ಅಜ್ಜಿಯ ಹೆಸರು ನಳನಿ ಕೆಂಭಾವಿ. ಬೆಳಗಾವಿ ನಗರದ ಟಿಳಕವಾಡಿ ಬಡಾವಣೆ ನಿವಾಸಿ. ಇಳಿ ವಯಸ್ಸಿನಲ್ಲೂ ಅಜ್ಜಿಯ ದೇಶಪ್ರೇಮ ಒಂಚೂರು ಮರೆಯಾಗಿಲ್ಲ.

ಬೆಳಗಾವಿಯ ಕೂಗನಳ್ಳಿ ಚೆಕ್ ಪೋಸ್ಟ್ ಬಳಿ ಬಂದಿಳಿದ ಸಾವಿರಾರು ಕನ್ನಡಿಗರುಬೆಳಗಾವಿಯ ಕೂಗನಳ್ಳಿ ಚೆಕ್ ಪೋಸ್ಟ್ ಬಳಿ ಬಂದಿಳಿದ ಸಾವಿರಾರು ಕನ್ನಡಿಗರು

ಕೊರೊನಾ ವೈರಸ್ ನಿಂದ ದೇಶದಲ್ಲಿ ನೂರಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಇಡೀ ದೇಶವೇ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ತಾನೇ ಅನಾರೋಗ್ಯದಿಂದ ಬಳಲುತ್ತಿದ್ದರೂ ವೈದ್ಯಕೀಯ ಚಿಕಿತ್ಸೆಗಾಗಿ ತಾನು ಕೂಡಿಟ್ಟ 1 ಲಕ್ಷ ರೂ. ಚೆಕ್ ನ್ನು ಇಂದು ಪಿಎಂ ಕೇರ್ಸ್ ಗೆ ನೀಡಿದ್ದಾಳೆ.

 One Lakh Rupees Donate To PM Cares By Old Age Woman In Belagavi

ತಾನು ಎದ್ದು ಹೋಗಲು ಸಾಧ್ಯವಾಗದ ಹಿನ್ನೆಲೆ ಸಮಾಜ ಸೇವಕ ವಿಜಯ್ ಮೋರೆ ಮೂಲಕ ಜಿಲ್ಲಾಧಿಕಾರಿಗಳಿಗೆ ತಲುಪಿಸುವ ಕೆಲಸ ಮಾಡಿದ್ದಾಳೆ. ಅಜ್ಜಿ ನೀಡಿದ ಹಣವನ್ನು ಇವತ್ತು ವಿಜಯ್ ಮೋರೆ ಜಿಲ್ಲಾಧಿಕಾರಿಗಳಿಗೆ ನೀಡಿದರು.

ಬೆಳಗಾವಿಯಲ್ಲಿ ಜಮೀನಿನ ಕೊಳವೆ ಬಾವಿಗೆ ಬಿದ್ದು ರೈತ ಸಾವುಬೆಳಗಾವಿಯಲ್ಲಿ ಜಮೀನಿನ ಕೊಳವೆ ಬಾವಿಗೆ ಬಿದ್ದು ರೈತ ಸಾವು

ಅಜ್ಜಿ ನೀಡಿದ ಚೆಕ್ ನೀಡುತ್ತಿದ್ದಂತೆ ಆಶ್ಚರ್ಯ ಚಕಿತರಾದ ಜಿಲ್ಲಾಧಿಕಾರಿ ಡಾ.ಎಸ್.ಬಿ ಬೊಮ್ಮನಹಳ್ಳಿ, ಅಜ್ಜಿಗೆ ಜಿಲ್ಲಾಡಳಿತದ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಅಜ್ಜಿಗೆ ಆಯಸ್ಸು, ಆರೋಗ್ಯ ಕರುಣಿಸಲಿ ಎಂದು ಹಾರೈಸಿದರು.

English summary
One Lakh Rupees Check Give to PM Cares By Old Age Woman In Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X