ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಕಾಂಗ್ರೆಸ್‌ನಲ್ಲಿ ಮತ್ತೆ ಭಿನ್ನಮತ ಬಹಿರಂಗ

|
Google Oneindia Kannada News

Recommended Video

ಮತ್ತೆ ಕಾಂಗ್ರೆಸ್‍ನಲ್ಲಿ ಭಿನ್ನಮತ : Lok Sabha Elections 2019 | Oneindia Kannada

ಬೆಳಗಾವಿ, ಏ.23: ಲಖನ್ ಜಾರಕಿಹೊಳಿ ಗೋಕಾಕ್‌ನಲ್ಲಿ ಉತ್ತರಾಧಿಕಾರಿಯಾಗಿದ್ದು ನನ್ನ ಗಮನಕ್ಕೆ ಬಂದಿಲ್ಲ ಎಂದು ಬೆಳಗಾವಿ ಶಾಸಕ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕ್ ಲಖನ್ ಜಾರಕಿಹೊಳಿ ಉತ್ತರಾಧಿಕಾರಿ ಮಾಡಿರುವ ವಿಚಾರ ಅದರ ಬಗ್ಗೆ ನನಗೇನೂ ಗೊತ್ತಿಲ್ಲ.ಇಂತಹ ವಿಚಾರಗಳು ಅತೀ ಸೂಕ್ಷ್ಮ, ನಮ್ಮ ರಾಜ್ಯ ನಾಯಕರು ಮತ್ತು ಹೈಕಮಾಂಡ್ ನಾಯಕತ್ವ ನಿರ್ಧಾರ ಮಾಡುತ್ತೆ. ನಮ್ಮ ಅನಿಸಿಕೆ ಹೇಳಿಕೆ ಮೇಲೆ ಅವಲಂಬನೆ ಇರುವುದಿಲ್ಲ ಎಂದರು.

ಸತೀಶ್ ಜಾರಕಿಹೊಳಿಗೆ ತಲೆಕೆಟ್ಟಿದೆ: ರಮೇಶ್ ಜಾರಕಿಹೊಳಿಸತೀಶ್ ಜಾರಕಿಹೊಳಿಗೆ ತಲೆಕೆಟ್ಟಿದೆ: ರಮೇಶ್ ಜಾರಕಿಹೊಳಿ

ರಾಜ್ಯ ರಾಜಕಾರಣದಲ್ಲಿ ಚುನಾವಣೆ ನಂತರ ಧ್ರವೀಕರಣ ಆಗಲಿದೆ ಎಂಬ ವಿಚಾರದ ಕುರಿತು ಮಾತನಾಡಿದ ಅವರು, ಆ ಸಂದರ್ಭ ಇನ್ನೂ ಬಂದಿಲ್ಲ, ಆದರೆ ಕಡಲ ಮಂಥನ ಆದಾಗ ಅಮೃತನೂ ಬರುತ್ತೆ ವಿಷನೂ ಬರುತ್ತೆ ಎರಡನ್ನೂ ಸೇವಿಸಲು ತಯಾರಿರಬೇಕು, ಪರೋಕ್ಷವಾಗಿ ರಾಜಕೀಯದಲ್ಲಿ ಏನೇ ಬದಲಾವಣೆ ಆದರೂ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.

once again Belagavi congress infight broke out

ಸಾಧಕ ಬಾಧಕಗಳ ಬಗ್ಗೆ ವಿಚಾರ ಮಾಡುತ್ತಾರೆ. ಅಷ್ಟು ಸುಲಭವಾಗಿ ಕಾಂಗ್ರೆಸ್ ಪಕ್ಷವನ್ನು ಯಾರು ಚಲಾಯಿಸಲು ಸಾಧ್ಯವಿಲ್ಲ, ಕಾಂಗ್ರೆಸ್ ಪಕ್ಷ ಸುಲಭವಾಗಿ ನಡೆಸುತ್ತೇವೆ ಎಂದರೆ ಅದು ಮೂರ್ಖತನವಾಗುತ್ತೆ ಎಂದು ನಡುದರು.

ರಮೇಶ್‌ ಬಿಜೆಪಿ ಸೇರುವ ಸುಳಿವು ಕೊಟ್ಟ ಸತೀಶ್ ಜಾರಕಿಹೊಳಿರಮೇಶ್‌ ಬಿಜೆಪಿ ಸೇರುವ ಸುಳಿವು ಕೊಟ್ಟ ಸತೀಶ್ ಜಾರಕಿಹೊಳಿ

ಪಕ್ಷ ಯಾವ ಸಂದರ್ಭದಲ್ಲಿ ತನ್ನ ನಿರ್ಧಾರ ತೆಗೆದುಕೊಳ್ಳಬೇಕೋ ಅದನ್ನು ಮಾಡುತ್ತದೆ. ಪರೋಕ್ಷವಾಗಿ ಸತೀಶ್ ಜಾರಕಿಹೊಳಿಗೆ ಯಾರನ್ನೂ ಮೂರ್ಖ ಮಾಡಲು ಆಗಲ್ಲ ಎಂದು ಟಾಂಗ್ ನೀಡಿದ್ದಾರೆ.

English summary
Once again Belagavi congress infight broken out. MLA Lakshmi Hebbalkar shows her anger over Jarkiholi family politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X