ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಎಪಿಎಂಸಿ ಕದನ ಅಂತ್ಯ: ಮತ್ತೆ ರಾಜಿಯಾದ ಜಾರಕಿಹೊಳಿ ಸಹೋದರರು, ಹೆಬ್ಬಾಳ್ಕರ್

By ಬೆಳಗಾವಿ ಪ್ರತಿನಿಧಿ
|
Google Oneindia Kannada News

Recommended Video

ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರ ಪುಂಡಾಟ | Oneindia Kannada

ಬೆಳಗಾವಿ, ಅಕ್ಟೋಬರ್.16: ರಾಜ್ಯದ ಗಮನಸೆಳೆದಿದ್ದ ಬೆಳಗಾವಿ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಜಾರಕಿಹೊಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಮತ್ತೊಂದು ಕದನಕ್ಕೆ ನಾಂದಿ ಹಾಡುತ್ತಾ ಅನ್ನೋ ಲೆಕ್ಕಾಚಾರ ತಲೆ ಕೆಳಗಾಗಿದೆ.

ಪಕ್ಷದ ಹಿತದೃಷ್ಟಿಯಿಂದ, ಚುನಾವಣೆ ನಡೆಸದೇ ಅಧ್ಯಕ್ಷ, ಉಪಾಧ್ಯಕ್ಷರನ್ನ ಆಯ್ಕೆ ಮಾಡ್ತೀವಿ ಅಂತ ಹೇಳುತ್ತಿದ್ದ ನಾಯಕರು ಕೊನೆಗೂ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಹೌದು...ರಾಜ್ಯದ ಗಮನವನ್ನ ತನ್ನತ್ತ ಸೆಳೆದುಕೊಂಡಿದ್ದ ಬೆಳಗಾವಿ ಎ.ಪಿ.ಎಂ.ಸಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು.

ಮೈಸೂರು ದಸರಾ - ವಿಶೇಷ ಪುರವಣಿ

ಯಾಕಂದ್ರೆ ಕೆಲ ದಿನಗಳ ಹಿಂದಷ್ಟೇ ಬೆಳಗಾವಿ ಪಿ.ಎಲ್.ಡಿ ಬ್ಯಾಂಕ್ ಚುನಾವಣೆಯಲ್ಲಿ ಹಾವು-ಮುಂಗುಸಿಯಂತೆ ಪರಸ್ಪರ ಕಿತ್ತಾಡಿಕೊಂಡಿದ್ದ ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಬಾಳಕರ್ ನಡುವಿನ ಗುದ್ದಾಟ ಸ್ವಲ್ಪ ಮಟ್ಟಿಗೆ ತಣ್ಣಗಾಗಿತ್ತು.

ಲಕ್ಷ್ಮಿ ಹೆಬ್ಬಾಳ್ಕರ್‌, ಜಾರಕಿಹೊಳಿ ಸಹೋದರರ ನಡುವೆ ಮತ್ತೆ ಜಟಾಪಟಿ?ಲಕ್ಷ್ಮಿ ಹೆಬ್ಬಾಳ್ಕರ್‌, ಜಾರಕಿಹೊಳಿ ಸಹೋದರರ ನಡುವೆ ಮತ್ತೆ ಜಟಾಪಟಿ?

ಇನ್ನೇನು ಎಲ್ಲವೂ ಸರಿ ಹೋಯಿತು ಎನ್ನುವಷ್ಟರಲ್ಲಿ ಎದುರಾದ ಎಂಪಿಎಂಸಿ ಅದ್ಯಕ್ಷ, ಉಪಾಧ್ಯಕ್ಷ ಚುನಾವಣೆ ಜಾರಕಿಹೊಳಿ ಸಹೋದರರು ಮತ್ತು ಹೆಬ್ಬಾಳಕರ್ ನಡುವೆ ಮತ್ತೊಂದು ಕದನಕ್ಕೆ ಸಾಕ್ಷಿಯಾಗುತ್ತೇ ಅಂತಲೇ ಎಲ್ಲರೂ ಭಾವಿಸಿದ್ದರು.. ಆದ್ರೆ ಅದೀಗ ಹುಸಿಯಾಗಿದ್ದು, ಎಂಪಿಎಂಸಿ ಗುದ್ದಾಟ ಸುಖಾಂತ್ಯಗೊಂಡಿದೆ. ಮುಂದೆ ಓದಿ...

 ಅವಿರೋಧವಾಗಿ ಆಯ್ಕೆ

ಅವಿರೋಧವಾಗಿ ಆಯ್ಕೆ

ಸೋಮವಾರ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಹಿನ್ನೆಲೆಯಲ್ಲಿ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸದಸ್ಯರ ಜೊತೆಗೂಡಿ ಮಾತುಕತೆ ನಡೆಸಿದ ಶಾಸಕ ಸತೀಶ್ ಜಾರಕಿಹೊಳಿ ಹಾಗೂ ಶಾಸಕಿ ಹೆಬ್ಬಾಳಕರ್ ಬೆಳಗಾವಿ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರನ್ನ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.

 ಒಮ್ಮತದ ನಿರ್ಧಾರ

ಒಮ್ಮತದ ನಿರ್ಧಾರ

ಅಧ್ಯಕ್ಷ ಸ್ಥಾನ ಸತೀಶ ಜಾರಕಿಹೊಳಿ ಬಣಕ್ಕೆ, ಉಪಾಧ್ಯಕ್ಷ ಸ್ಥಾನ ಹೆಬ್ಬಾಳಕರ ಬಣಕ್ಕೆ ಎಂದು ರಾಜಿ ಮಾಡಿಕೊಳ್ಳುವ ಮೂಲಕ ಒಮ್ಮತದ ನಿರ್ಧಾರ ಕೈಗೊಂಡಿದ್ದು, ಎಪಿಎಂಸಿ ಅಧ್ಯಕ್ಷರಾಗಿ ಆನಂದ ಪಾಟೀಲ, ಉಪಾಧ್ಯಕ್ಷರಾಗಿ ಸುಧೀರ ಗಡ್ಡೆ ಆಯ್ಕೆಯಾಗಿದ್ದಾರೆ.

ಬೆಳಗಾವಿ ಒಡೆದು ಜಾರಕಿಹೊಳಿ ಸಹೋದರರ ಕಟ್ಟಿ ಹಾಕ್ತಾರಾ ಸಿಎಂ?ಬೆಳಗಾವಿ ಒಡೆದು ಜಾರಕಿಹೊಳಿ ಸಹೋದರರ ಕಟ್ಟಿ ಹಾಕ್ತಾರಾ ಸಿಎಂ?

 ಹೈಕಮಾಂಡ್ ಸೂಚನೆ

ಹೈಕಮಾಂಡ್ ಸೂಚನೆ

ಎಪಿಎಂಸಿ ಚುನಾವಣೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಎಪಿಎಂಸಿ ಚುನಾವಣೆ ಸುಖಾಂತ್ಯಗೊಂಡಿದ್ದು
ಚುನಾವಣಾಧಿಕಾರಿಗಳು ಅಧ್ಯಕ್ಷ, ಉಪಾಧ್ಯಕ್ಷರ ಹೆಸರು ಅಧಿಕೃತಗೊಳಿಸಿದ್ದಾರೆ.

ಹೈಕಮಾಂಡ್ ಸೂಚನೆ ಹಾಗೂ ಪಕ್ಷದ ಹಿತಕ್ಕಾಗಿ ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಶಾಸಕರಾದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

 ಕುತೂಹಲದ ಪ್ರಶ್ನೆ

ಕುತೂಹಲದ ಪ್ರಶ್ನೆ

ಒಟ್ಟಿನಲ್ಲಿ ಇಷ್ಟು ದಿನ ರಾಜಕೀಯ ಬದ್ದವೈರಿಗಳಂತಿದ್ದ ಸತೀಶ್ ಜಾರಕಿಹೊಳಿ ಹಾಗೂ ಹೆಬ್ಬಾಳ್ಕರ್ ಎಪಿಎಂಸಿ ಚುನಾವಣೆ ಮೂಲಕ ಒಂದಾಗಿದ್ದು, ಇದು ಇಂದಿಗಷ್ಟೇ ಸೀಮಿತವಾ ಅಥವಾ ಮುಂದುವರೆಯುತ್ತಾ ಅನ್ನೋದು ಕುತೂಹಲದ ಪ್ರಶ್ನೆಯಾಗಿದೆ.

ಬೆಳಗಾವಿ ರಾಜಕೀಯ: ಸಂಧಾನದ ಬಳಿಕವೂ ಆರಿಲ್ಲ ಲಕ್ಷ್ಮಿ ಹೆಬ್ಬಾಳ್ಕರ್‌ ಸಿಟ್ಟುಬೆಳಗಾವಿ ರಾಜಕೀಯ: ಸಂಧಾನದ ಬಳಿಕವೂ ಆರಿಲ್ಲ ಲಕ್ಷ್ಮಿ ಹೆಬ್ಬಾಳ್ಕರ್‌ ಸಿಟ್ಟು

English summary
Belgaum APMC election is over. President, Vice President elected unanimously. Now Satish Jarkiholi, Lakshmi Hebbalkar has reconciled. Here's a short article about this
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X