ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಅಧಿವೇಶನ, ಶಾಸಕರಿಗೆ ಡಿನ್ನರ್ ಮಿಸ್

|
Google Oneindia Kannada News

ಬೆಳಗಾವಿ, ಡಿ.1 : ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಸಭೆ ಚಳಿಗಾಲದ ಅಧಿವೇಶನದ ಖರ್ಚನ್ನು ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿತ್ತು. ಅದರಂತೆ, ಹಲವು ಸೌಲಭ್ಯಗಳಿಗೆ ಕತ್ತರಿ ಹಾಕಲಾಗಿದೆ. ಶಾಸಕರು ಅಧಿವೇಶನದ ಅವಧಿಯಲ್ಲಿ ರಾತ್ರಿ ಊಟವನ್ನು ತಮ್ಮ ಖರ್ಚಿನಲ್ಲಿಯೇ ಮಾಡಬೇಕಾಗುತ್ತದೆ.

ಡಿ.9ರಿಂದ 20ರವರೆಗೆ ನಡೆಯಲಿರುವ ಬೆಳಗಾವಿ ಅಧಿವೇಶನದಲ್ಲಿ ಶಾಸಕರಿಗೆ ನೀಡುವ ಸೌಲಭ್ಯಗಳ ಕುರಿತು ವಿಧಾನಸಭೆ ಕಾರ್ಯದರ್ಶಿ ಓಂ ಪ್ರಕಾಶ್ ಅವರು ಆದೇಶ ಹೊರಡಿಸಿದ್ದಾರೆ. ಇದರ ಅನ್ವಯ ಶಾಸಕರಿಗೆ ವಾಹನ ಸೌಲಭ್ಯದ ಬದಲು ಭತ್ಯೆ ನೀಡಲಾಗುತ್ತದೆ ಮತ್ತು ರಾತ್ರಿ ಊಟದ ವ್ಯವಸ್ಥೆಯನ್ನು ಶಾಸಕರೇ ನೋಡಿಕೊಳ್ಳಬೇಕು.

Suvarna Soudha

ಶಾಸಕರು ತಮ್ಮ ಆಪ್ತ ಸಹಾಯಕರು ಮತ್ತು ಭದ್ರತಾ ಸಿಬ್ಬಂದಿಗೆ ವಸತಿ ವ್ಯವಸ್ಥೆ ಮಾಡಿಕೊಳ್ಳಬೇಕು. ಬೆಳಗಾವಿ ಅಧಿವೇಶನದ ವೇಳೆ ಶಾಸಕರಿಗೆ ವಸತಿ ಮತ್ತು ವಾಹನ ಸೌಲಭ್ಯ ಒದಗಿಸುವ ಕುರಿತು ಸೂಕ್ತ ಶಿಫಾರಸುಗಳೊಂದಿಗೆ ಸಭಾಧ್ಯಕ್ಷರಿಗೆ ವರದಿ ಸಲ್ಲಿಸಲು ಎನ್‌.ಎಚ್‌.ಶಿವಶಂಕರ ರೆಡ್ಡಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. [ಹತ್ತು ದಿನದ ಅಧಿವೇಶನಕ್ಕೆ 14 ಕೋಟಿ ಖರ್ಚು]

ಶಾಸಕರಿಗೆ ಏನು ಸಿಗುತ್ತೆ : ಅಧಿವೇಶನದ ಅವಧಿಯಲ್ಲಿ ಶಾಸಕರಿಗೆ ಬೆಳಗಾವಿ, ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ವಸತಿ ಸ್ಥಳದಿಂದ ಅಧಿವೇಶನಕ್ಕೆ ಬರಲು ವಾಹನ ವ್ಯವಸ್ಥೆ ಬದಲಾಗಿ ಪ್ರತಿದಿನ 2,500 ರೂ. ಭತ್ಯೆ ನೀಡಲಾಗುತ್ತದೆ.[ಅಧಿವೇಶನಕ್ಕೆ ಭದ್ರತೆ ಹೇಗಿದೆ?]

ಬೆಳಗ್ಗೆ ಶಾಸಕರಿಗೆ ಅವರಿರುವ ಹೋಟೆಲ್‌ನಲ್ಲಿ ತಿಂಡಿ ಮತ್ತು ಸುವರ್ಣ ವಿಧಾನಸೌಧದಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ಊಟದ ವ್ಯವಸ್ಥೆಯನ್ನು ಶಾಸಕರು ಮಾಡಿಕೊಳ್ಳಬೇಕು. ಇದಕ್ಕೆ ಹೆಚ್ಚುವರಿ ಭತ್ಯೆಯನ್ನು ನೀಡಲಾಗುವುದಿಲ್ಲ.

ಶಾಸಕರೊಂದಿಗೆ ಬೆಳಗಾವಿಗೆ ಆಗಮಿಸುವ ಅವರ ಆಪ್ತ ಸಹಾಯಕರು ಮತ್ತು ಭದ್ರತಾ ಸಿಬ್ಬಂದಿಗೆ ಸರ್ಕಾರ ವಸತಿ ವ್ಯವಸ್ಥೆ ಮಾಡುವುದಿಲ್ಲ. ಈ ಕುರಿತು ಎಲ್ಲಾ ಶಾಸಕರಿಗೆ ಈಗಾಗಲೇ ಪತ್ರವನ್ನು ರವಾನಿಸಲಾಗಿದೆ.

ಅಂದಹಾಗೆ ಬೆಂಗಳೂರು ಬಿಟ್ಟು ದೂರದ ಬೆಳಗಾವಿಯ ಸುವರ್ಣ ಸೌಧದಲ್ಲಿ ಮೊದಲ ಅಧಿವೇಶನ ನಡೆಸಿದ ಬಿಜೆಪಿ ಸರ್ಕಾರ 7.39 ಕೋಟಿ ರೂ.ಗಳನ್ನು ಅಧಿವೇಶನಕ್ಕಾಗಿ ಖರ್ಚು ಮಾಡಿತ್ತು. ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ 10 ದಿನದ ಅಧಿವೇಶನಕ್ಕೆ 14 ಕೋಟಿ ಹಣ ಖರ್ಚಾಗಿತ್ತು. ಆದ್ದರಿಂದ ಈ ಬಾರಿ ಶಾಸಕರ ಸೌಲಭ್ಯಗಳಿಗೆ ಕತ್ತರಿ ಬಿದ್ದಿದೆ.

English summary
Karnataka Governments austerity measures puts several restrictions on money spent on Legislators, during the Winter session, begins at Karnataka- Maharashtra border district, Belagavi from 9 Dec 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X