ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೋನ್ ಟ್ಯಾಪಿಂಗ್ ಆರೋಪದಲ್ಲಿ ಹುರುಳಿಲ್ಲ; ಡಿಕೆಶಿಗೆ ಡಿಸಿಎಂ ಸವದಿ ತಿರುಗೇಟು

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಆಗಸ್ಟ್ 24: ರಾಜ್ಯ ಸರ್ಕಾರದಿಂದ ನನ್ನ ಫೋನ್ ಕರೆಗಳು ಕದ್ದಾಲಿಕೆ ಆಗುತ್ತಿವೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಆರೋಪದಲ್ಲಿ ಯಾವುದೇ ಹುರಳಿಲ್ಲ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಿರುಗೇಟು ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಮೀಲಾಗಿದ್ದಾರೆ. ಈ ಆರೋಪ ಮರೆಮಾಚಿ, ಜನರ ಗಮನ ಬೇರೆಡೆ ಸೆಳೆಯಲು ಡಿ.ಕೆ ಶಿವಕುಮಾರ್ ಫೋನ್​ ಟ್ಯಾಪಿಂಗ್ ‌ಆರೋಪ ಮಾಡ್ತಿದ್ದಾರಷ್ಟೇ ಎಂದರು.

"ಕಳ್ಳ ಮನಸ್ಸು ಉಳ್ಳುಗೆ' ಎಂದು ಡಿಕೆಶಿಗೆ ಟಾಂಗ್ ಕೊಟ್ಟ ಸಿ.ಪಿ ಯೋಗೇಶ್ವರ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಫೋನ್​ ಟ್ಯಾಪಿಂಗ್ ಮಾಡುವ ಅವಶ್ಯಕತೆ ನಮಗಿಲ್ಲ, ಡಿಕೆಶಿ​ ಅವರು ‌ಮಾಡುತ್ತಿರುವ ಆರೋಪ ಶುದ್ಧ ಸುಳ್ಳು ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದರು.

No Truth In DK Shivakumars Phone Tapping Allegation: DCM Lakshman Savadi

ಬೆಂಗಳೂರು ‌ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಶಿವಕುಮಾರ್ ಧಮ್ಕಿ ಹಾಕಿರುವುದು ಸರಿಯಲ್ಲ. ಗಲಭೆಕೋರರನ್ನು ಬಂಧಿಸುವ ಕೆಲಸವನ್ನು ನಮ್ಮ ಪೊಲೀಸರು ಮಾಡುತ್ತಿದ್ದಾರೆ. ಡಿಕೆಶಿ ಅವರ ಬೆದರಿಕೆಗೆ ರಾಜ್ಯ ಸರ್ಕಾರವೂ ಹೆದರಲ್ಲ, ಅಧಿಕಾರಿಗಳೂ ಹೆದರಲ್ಲ ಎಂದು ಟಾಂಗ್ ಕೊಟ್ಟರು.

English summary
Deputy Chief Minister Lakshman Savadi said there was no truth in KPCC president DK Shivakumar's allegation that his phone calls were being Tapping from the state government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X