• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಿಸ್ ಆಫ್ ಲವ್ ಗೆ ಅವಕಾಶ ನಿರಾಕರಿಸಿದ್ದು ಯಾಕೆ?

|

ಬೆಂಗಳೂರು. ನ. 25: ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಿಗೆ ಆಹಾರವಾಗಿದ್ದ ಕಿಸ್ ಆಫ್ ಲವ್ ಆಚರಣೆಗೆ ಬೆಂಗಳೂರಿನಲ್ಲಿ ಅವಕಾಶವಿಲ್ಲ. ನವೆಂಬರ್ 30 ರಂದು ಟೌನ್ ಹಾಲ್ ಮುಂಭಾಗ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ನವೆಂಬರ್ 30 ರಂದು ಕಿಸ್ ಆಫ್ ಲವ್ ಆಚರಣೆಗೆ ಅನುಮತಿ ಕೇಳಿ ಮನವಿ ಸಲ್ಲಿಸಲಾಗಿತ್ತು. ಆದರೆ ಇದು ಭಾರತೀಯ ದಂಡ ಸಂಹಿತೆಯ 294(ಎ) ಉಲ್ಲಂಘನೆಯಾಗಲಿದ್ದು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.[ಹಿಂದೆ ಸರಿದ ರಚಿತಾ ತನೇಜಾ]

ಕಾರ್ಯಕ್ರಮದಲ್ಲಿ ಎಷ್ಟು ಜನ ಭಾಗವಹಿಸುತ್ತಾರೆ? ಹಿನ್ನೆಲೆಯೇನು? ಉದ್ದೇಶವೇನು? ಎಂಬುದರ ಬಗ್ಗೆ ಮಾಹಿತಿ ನೀಡಲು ಆಯೋಜಕರ ಬಳಿ ಕೇಳಲಾಗಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ವಿವರ ಸಲ್ಲಿಕೆಯಾಗಿಲ್ಲ. ಇಂಥ ಆಚರಣೆಗಳು ಶಾಂತಿ ಮತ್ತು ಭದ್ರತೆಗೆ ಭಂಗ ತರುವಂತೆ ಕಂಡುಬರುತ್ತಿದ್ದು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಕಿಸ್ ಆಫ್ ಲವ್ ಬಗ್ಗೆ ರಾಜ್ಯಾದ್ಯಂತ ತೀವ್ರ ವಿರೊಧ ವ್ಯಕ್ತವಾಗಿದೆ. ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಆಚರಣೆಗೆ ಅವಕಾಶ ನೀಡಿ ಅಹಿತಕರ ಘಟನೆಗಳಿಗೆ ಕಾರಣವಾದರೆ ಯಾರು ಜವಾಬ್ದಾರಿ? ಎಂದು ಆಯೋಜಕರನ್ನು ಕೇಳಲಾಗಿತ್ತು. ಈ ಬಗ್ಗೆಯೂ ಸ್ಪಷ್ಟ ಉತ್ತರ ಬಂದಿರಲಿಲ್ಲ ಎಂದು ಹೇಳಿದ್ದಾರೆ.[ಮುತ್ತು ಕೊಟ್ರೆ ಏನಾಗ್ತದೆ? ಕಿಸ್ ಅಂದ್ರೆ ಏನು?]

ಐಪಿಸಿ 294(ಎ) ಏನು ಹೇಳುತ್ತದೆ?

ಸಾರ್ವಜನಿಕ ಕ್ಷೇತ್ರದಲ್ಲಿ ಅಶ್ಲೀಲವಾಗಿ ವರ್ತಿಸುವುದಕ್ಕೆ ಈ ಸೆಕ್ಷನ್ ತಡೆ ಒಡ್ಡುತ್ತದೆ. ಕೆಟ್ಟ ರೀತಿಯಲ್ಲಿ ಕುಣಿಯುವುದು, ನರ್ತಿಸುವುದು, ಅಶ್ಲೀಲ ಪದಗಳನ್ನು ಬಳಸಿ ಘೋಷಣೆ ಕೂಗುವುದನ್ನು ಈ ಸೆಕ್ಷನ್ ಸಂಪೂರ್ಣವಾಗಿ ನಿಷೇಧಿಸುತ್ತದೆ. ಅಲ್ಲದೇ ಈ ರೀತಿ ವರ್ತಿಸಿದವರಿಗೆ ಮೂರು ತಿಂಗಳು ಜೈಲು ಅಥವಾ ದಂಡ ವಿಧಿಸುವ ಅವಕಾಶವನ್ನು ನೀಡುತ್ತದೆ.

ಹಿಂದೆ ಸರಿದಿದ್ದ ರಚಿತಾ ತನೇಜಾ

ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಕಿಸ್ ಆಫ್ ಲವ್ ಆಯೋಜಕಿ ರಚಿತಾ ತನೇಜಾ ತಾನು ಕಾರ್ಯಕ್ರಮದಿಂದ ಹಿಂದೆ ಸರಿಯುತ್ತಿರುವುದಾಗಿ ಸೋಮವಾರ ತಿಳಿಸಿದ್ದರು. ಆದರೆ ಕೆಲ ಫೇಸ್ ಬುಕ್ ನ ಕಿಸ್ ಆಫ್ ಲವ್ ಕಾರ್ಯಕರ್ತರು ತಾವೇ ನವೆಂಬರ್ 30 ರಂದು ಕಾರ್ಯಕ್ರಮ ಆಯೋಜಿಸುವುದಾಗಿ ಹೇಳಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: No permission to Kiss of love in Bengaluru on November 30. It effects social peace and It violates IPC Section 294(a) Police Commissioner MN Redii said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more