ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

30 ರೂ.ಗೆ ನೀರಿನ ಫಿಲ್ಟರ್ ತಯಾರಿಸಿ ವರ್ಲ್ಡ್ ಫೇಮಸ್ ಆದ ಬೆಳಗಾವಿ ಹೈದ

By ಡಿಪಿ ನಾಯ್ಕ
|
Google Oneindia Kannada News

ಬೆಳಗಾವಿ, ಜೂನ್.18: ಕೇವಲ 30 ರೂ.ನಲ್ಲಿ ನೀರಿನ ಫಿಲ್ಟರ್ ತಯಾರಿಸಿ, ಜಗತ್ತಿನೆಲ್ಲೆಡೆ ಅದನ್ನು ಮಾರಾಟ ಮಾಡುವ ಮೂಲಕ ಬೆಳಗಾವಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರ ನಿರಂಜನ್ ಕಾರಂಗಿ 'ಫಿಲ್ಟರ್‌ ಮ್ಯಾನ್‌' ಆಗಿ ಹೊರ ಹೊಮ್ಮಿದ್ದಾರೆ.

ತೋರು ಬೆರಳಷ್ಟು ಉದ್ದದ ಅವರ 'ಫ್ರೀ ಫಿಲ್ಟರ್‌' ಸಾಧನವನ್ನು ಎಂಜಿನಿಯರಿಂಗ್ ಅಂತಿಮ ವರ್ಷದ ಪ್ರಾಜೆಕ್ಟ್ ವೇಳೆ ತಯಾರಿಸಲು ಹೋದಾಗ ಅದು ತಿರಸ್ಕೃತಗೊಂಡಿತ್ತು. ಆದರೆ, ಈ ಫಿಲ್ಟರ್ ಪ್ರಾಜೆಕ್ಟ್ ಗೆ ಈಗ ರಾಜ್ಯ ಸರ್ಕಾರದ ಇಲೆವೆಂಟ್ 100 ಸಮಾವೇಶದಲ್ಲಿ ಪ್ರಶಸ್ತಿ ಕೂಡ ಲಭಿಸಿದೆ. ಜತೆಗೆ, ಸ್ಟಾರ್ಟ್ ಅಪ್‌ ಸಹಾಯಧನ ಕೂಡ ಮಂಜೂರು ಮಾಡಿದೆ.

ಕೊಡಗಿನ ಮಂಜೇಶ್ ಮಂದಣ್ಣನಂಥ ಗುರಿಕಾರ ಮತ್ತೊಬ್ಬನಿಲ್ಲಕೊಡಗಿನ ಮಂಜೇಶ್ ಮಂದಣ್ಣನಂಥ ಗುರಿಕಾರ ಮತ್ತೊಬ್ಬನಿಲ್ಲ

12 ಸಾವಿರ ರೂ. ಹೂಡಿಕೆಯೊಂದಿಗೆ ಆರಂಭವಾದ ನಿರಂಜನ್ ಅವರ ಉದ್ಯಮ ಈಗ 'ನಿರ್ನಲ್' ಎನ್ನುವ ಕಂಪೆನಿ ಹೆಸರಿನೊಂದಿಗೆ ಜಾಗತಿಕ ಮಟ್ಟದಲ್ಲಿಯೂ ವ್ಯವಹಾರ ಮಾಡುತ್ತಿದೆ. ದಿನವೊಂದಕ್ಕೆ 10 ಸಾವಿರ ಮೇಲ್ಪಟ್ಟು ಫಿಲ್ಟರ್‌ ತಯಾರಿಸುತ್ತಿದ್ದಾರೆ.

Niranjan Karagi is the worlds best producer of water filters

ಇದರಿಂದಾಗಿ ಇನ್‌ಫೋಸಿಸ್ ಸೇರಿದಂತೆ ಜಗತ್ತಿನ ಘಟಾನುಘಟಿ ಉದ್ಯಮಿಗಳೇ ಬೆರಗಾಗುವಂತೆ ಮಾಡಿದ್ದಾರೆ. ದೇಶದಲ್ಲಷ್ಟೇ ಅಲ್ಲದೇ ಆಫ್ರಿಕಾ, ಫ್ರಾನ್ಸ್‌, ನ್ಯೂಜಿಲೆಂಡ್, ಸಿಂಗಾಪುರ, ಕತಾರ್‌ ದೇಶಗಳಿಗೆ ಇವರ ಫಿಲ್ಟರ್ ತಲುಪಿದೆ. ಭಾರತೀಯ ಸೇನೆ ಕೂಡ ಸುಮಾರು ಒಂದು ಸಾವಿರ ಫಿಲ್ಟರ್‌ ಅನ್ನು ಖರೀದಿಸಿ ಪ್ರೋತ್ಸಾಹಿಸಿದೆ.

ನಿರಂಜನ್ ಎರಡು ವರ್ಷಗಳ ಹಿಂದೆ ಶಾಲೆ ಮಕ್ಕಳಿಗೋಸ್ಕರ ಈ ಫಿಲ್ಟರ್‌ ಅನ್ನು ತಯಾರಿಸಿದ್ದರು. ಅದನ್ನು ಅತ್ಯಂತ ಕನಿಷ್ಠ ಲಾಭದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈಗ ಅವರಿಗೆ ಕೋಲ್ಕತಾ ಐಐಎಂ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌) ವೇದಿಕೆ ಕಲ್ಪಿಸಲು ಮುಂದೆ ಬಂದಿದೆ.

Niranjan Karagi is the worlds best producer of water filters

ಇಂಗ್ಲೆಂಡ್‌ ಮತ್ತು ಭಾರತ ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿರುವ ಪ್ರಯೋಗ ಶಾಲೆಯಲ್ಲಿ ಸೌಲಭ್ಯ ಕಲ್ಪಿಸುವುದಾಗಿ ಹೇಳಿದೆ.

ಅಲ್ಟ್ರಾ ಫಿಲ್ಟರೇಶನ್ ಮೆಮರಿನ್ ತಂತ್ರಜ್ಞಾನದಲ್ಲಿ ಈ 'ಫ್ರೀ ಫಿಲ್ಟರ್‌' ತಯಾರಿಸಲಾಗಿದೆ. ಅದು ನೀರು ಶುದ್ಧ ಮಾಡುವ ಜತೆಗೆ ಶೇ. 80 ರಷ್ಟು ಬ್ಯಾಕ್ಟೀರಿಯಾಗಳನ್ನು ತಡೆಯುತ್ತದೆ. ಬೆರಳಿನ ಗಾತ್ರದ ಈ ಸಾಧನವನ್ನು ಸಾಮಾನ್ಯ ನೀರಿನ ಬಾಟಲಿಯ ಬಾಯಿಗೆ ಅಳವಡಿಸಿ ಶುದ್ಧ ನೀರು ಪಡೆಯಬಹುದು.

Niranjan Karagi is the worlds best producer of water filters

ಒಂದು 'ಫಿಲ್ಟರ್‌' ಸಾಧನ 100 ಲೀ. ನೀರು ಶುದ್ಧ ಮಾಡುತ್ತದೆ. ಈ ಸಾಧನಕ್ಕೆ ಒಮ್ಮೆ ನೀರು ತಾಗಿಸಿದರೆ ಗರಿಷ್ಠ ಎರಡು ತಿಂಗಳು ಬಳಸಬಹುದು. ಸದ್ಯ ಜಿಎಸ್ ಟಿಯಿಂದ ಫಿಲ್ಟರ್‌ ಬೆಲೆ 30 ರೂ. ಆಗಿದೆ. ಇದನ್ನು ಇನ್ನಷ್ಟು ಅಭಿವೃದ್ಧಿ ಮಾಡಿ 80 ರೂ.ಗೆ 10 ಸಾವಿರ ಲೀಟರ್‌ವರೆಗೆ ಶೇ. 100ರಷ್ಟು ನೀರು ಶುದ್ಧ ಮಾಡುವ 'ಅಲ್ಟ್ರಾ ಫಿಲ್ಟರ್‌' ಸಾಧನ ರೂಪಿಸುತ್ತಿರುವುದಾಗಿ ನಿರಂಜನ್ ತಿಳಿಸಿದ್ದಾರೆ.

English summary
Niranjan Karagi is the world's best producer of water filters at a cost of Rs. 30 and selling all over the world. He is a Mechanical Engineering graduate from Belgaum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X