ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪಚುನಾವಣೆಯ ನಂತರ ಡಿಸಿಎಂ ಸವದಿ ತಲೆದಂಡ? ಓವರ್ ಟು ಬಿಎಸ್ವೈ

|
Google Oneindia Kannada News

ಬೆಳಗಾವಿ, ನ 24: ಉಪಚುನಾವಣೆಯ ಫಲಿತಾಂಶದ ನಂತರ, ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಯಬೇಕಾಗುತ್ತದಾ ಎನ್ನುವ ಪ್ರಶ್ನೆ, ರಾಜಕೀಯ ವಲಯದಲ್ಲಿ ಓಡಾಡುತ್ತಿದೆ.

ಇದಕ್ಕೆ ಕಾರಣ, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಸವದಿ, ಅಥಣಿಯಿಂದ ಪರಾಭವಗೊಂಡಿದ್ದು. ಕಾಂಗ್ರೆಸ್ ಅಭ್ಯರ್ಥಿ ಮಹೇಶ್ ಕುಮಠಳ್ಳಿ ವಿರುದ್ದ ಸವದಿ ಸೋಲುಂಡಿದ್ದರು.

ಕುತೂಹಲ ಮೂಡಿಸಿದ ಪ್ರಕಾಶ್ ಹುಕ್ಕೇರಿ-ಸಿಎಂ ಭೇಟಿಕುತೂಹಲ ಮೂಡಿಸಿದ ಪ್ರಕಾಶ್ ಹುಕ್ಕೇರಿ-ಸಿಎಂ ಭೇಟಿ

ವಿಧಾನಪರಿಷತ್ತಿನ ಸ್ಥಾನವೂ ಖಾಲಿ ಇಲ್ಲದೇ ಇರುವುದರಿಂದ, ಸವದಿ ತಲೆದಂಡವಾಗುತ್ತದೆ. ಅವರ ಜಾಗಕ್ಕೆ ಉಮೇಶ್ ಕತ್ತಿ ಬರುತ್ತಾರೆಂದೆಲ್ಲಾ ಸುದ್ದಿಯಾಗಿತ್ತು.

ಯಡಿಯೂರಪ್ಪ ಬೆಚ್ಚುವಂತೆ ಮಾಡಿದ ಆಂತರಿಕ ಸಮೀಕ್ಷೆ ರಿಸಲ್ಟ್!ಯಡಿಯೂರಪ್ಪ ಬೆಚ್ಚುವಂತೆ ಮಾಡಿದ ಆಂತರಿಕ ಸಮೀಕ್ಷೆ ರಿಸಲ್ಟ್!

ಈ ಬಗ್ಗೆ, ಸ್ಪಷ್ಟನೆ ನೀಡಿರುವ ಯಡಿಯೂರಪ್ಪ, " ಯಾರೂ ಈ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಸವದಿ ಸ್ಥಾನ ಅಬಾಧಿತ" ಎಂದು ಅಥಣಿಯಲ್ಲಿ ಹೇಳಿದ್ದಾರೆ.

ಅಥಣಿಗೆ ಇಬ್ಬರು ಸಚಿವರಾಗಿತ್ತಾರೆ

ಅಥಣಿಗೆ ಇಬ್ಬರು ಸಚಿವರಾಗಿತ್ತಾರೆ

ಪಕ್ಷದ ಅಭ್ಯರ್ಥಿ ಮಹೇಶ್ ಕುಮಠಳ್ಳಿ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದ ಯಡಿಯೂರಪ್ಪ, "ಅಥಣಿಗೆ ಇಬ್ಬರು ಸಚಿವರಾಗಿತ್ತಾರೆ. ಒಂದು ಸವದಿ, ಇನ್ನೊಂದು ನಿಮ್ಮ ಆಶೀರ್ವಾದದಿಂದ ಮಹೇಶ್ ಕುಮಠಳ್ಳಿ" ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

ಲಕ್ಷ್ಮಣ ಸವದಿ ಅವರ ತಲೆದಂಡವಾಗುತ್ತದೆ ಎನ್ನುವ ಸುದ್ದಿ ಕಪೋಕಲ್ಪಿತ

ಲಕ್ಷ್ಮಣ ಸವದಿ ಅವರ ತಲೆದಂಡವಾಗುತ್ತದೆ ಎನ್ನುವ ಸುದ್ದಿ ಕಪೋಕಲ್ಪಿತ

"ಲಕ್ಷ್ಮಣ ಸವದಿ ಅವರ ತಲೆದಂಡವಾಗುತ್ತದೆ ಎನ್ನುವ ಸುದ್ದಿ ಕಪೋಕಲ್ಪಿತ. ಈ ಬಗ್ಗೆ ಯಾವ ಆಧಾರದಲ್ಲಿ ಸುದ್ದಿ ಹರಿದಾಡುತ್ತಿದೆಯೋ ಎನ್ನುವುದು ಗೊತ್ತಿಲ್ಲ. ಸವದಿಯಾಗಲಿ, ಕಾರ್ಯಕರ್ತರಾಗಲಿ ಈ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ" ಎಂದು ಯಡಿಯೂರಪ್ಪ, ಸವದಿ ತಲೆದಂಡದ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

ಸವದಿಯವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವುದು ನಮ್ಮ ವರಿಷ್ಠರು

ಸವದಿಯವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವುದು ನಮ್ಮ ವರಿಷ್ಠರು

"ಸವದಿಯವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವುದು ನಮ್ಮ ವರಿಷ್ಠರು. ಹಾಗಾಗಿ, ಮೂರೂವರೆ ವರ್ಷ ಬಿಜೆಪಿ ಸರಕಾರವಿರುತ್ತದೆ. ಸವದಿಯೇ ಡಿಸಿಎಂ ಆಗಿರುತ್ತಾರೆ. ಶಾಸಕರಾಗಿಲ್ಲದಿದ್ದರೇ ಡಿಸಿಎಂ ಅಧಿಕಾರ ಇರುವುದಿಲ್ಲ ಎನ್ನುವ ಅನುಮಾನ ಬೇಡ" ಎಂದು ಯಡಿಯೂರಪ್ಪ ಅಥಣಿ ಸಭೆಯಲ್ಲಿ ಖಚಿತ ಪಡಿಸಿದ್ದಾರೆ.

ಅಥಣಿ ಉಪಚುನಾವಣೆಗೆ ಲಕ್ಷ್ಮಣ ಸವದಿಯವರ ಆಪ್ತ ದಾಸ್ಯಾಳ

ಅಥಣಿ ಉಪಚುನಾವಣೆಗೆ ಲಕ್ಷ್ಮಣ ಸವದಿಯವರ ಆಪ್ತ ದಾಸ್ಯಾಳ

ಅಥಣಿ ಉಪಚುನಾವಣೆಗೆ ಲಕ್ಷ್ಮಣ ಸವದಿಯವರ ಆಪ್ತ ದಾಸ್ಯಾಳ ಕೂಡಾ ನಾಮಪತ್ರ ಸಲ್ಲಿಸಿದ್ದರು. ಇದು ಸವದಿಯವರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಯಡಿಯೂರಪ್ಪ ಈ ವಿಚಾರದಲ್ಲಿ, ಸವದಿ ಮೇಲೆ ಬೇಸರ ವ್ಯಕ್ತಪಡಿಸಿದ್ದರು. ಅದಾದ ನಂತರ, ಸವದಿಯ ತೀವ್ರ ಒತ್ತಡದಿಂದ ದಾಸ್ಯಾಳ ನಾಮಪತ್ರ ಹಿಂದಕ್ಕೆ ಪಡೆದಿದ್ದರು.

ವಿರೋಧಿಗಳ ಡೆಪಾಸಿಟ್ ಜಪ್ತಿಯಾಗುವ ಹಾಗೇ, ಕುಮುಠಳ್ಳಿ ಜಯಭೇರಿ

ವಿರೋಧಿಗಳ ಡೆಪಾಸಿಟ್ ಜಪ್ತಿಯಾಗುವ ಹಾಗೇ, ಕುಮುಠಳ್ಳಿ ಜಯಭೇರಿ

"ನಾನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ. ವಿರೋಧಿಗಳ ಡೆಪಾಸಿಟ್ ಜಪ್ತಿಯಾಗುವ ಹಾಗೇ, ನಮ್ಮ ಅಭ್ಯರ್ಥಿ ಕುಮುಠಳ್ಳಿ ಜಯಭೇರಿ ಬಾರಿಸಲಿದ್ದಾರೆ. ನಾವೆಲ್ಲರೂ, ಒಗ್ಗಟ್ಟಾಗಿ ಪ್ರಚಾರ ನಡೆಸಲಿದ್ದೇವೆ" ಎಂದು ಸವದಿ, ಯಡಿಯೂರಪ್ಪನವರು ಭಾಗವಹಿಸಿದ್ದ ಸಭೆಯಲ್ಲಿ ಹೇಳಿದ್ದಾರೆ.

English summary
News On Lakshman Savadi May Have To Get Down From DCM Post: CM BS Yediyurappa Clarification
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X