ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂದಿನ ವಾರದಿಂದ ಬೆಳಗಾವಿಯಿಂದ ಬೆಂಗಳೂರಿಗೆ ನೂತನ ರೈಲು ಸಂಚಾರ

|
Google Oneindia Kannada News

ಬೆಂಗಳೂರು, ಜೂನ್ 24: ಮುಂದಿನ ವಾರದಿಂದ ಬೆಳಗಾವಿಯಿಂದ ಬೆಂಗಳೂರಿಗೆ ನೂತನ ರೈಲು ಸಂಚರಿಸಲಿದೆ.

ರೈಲ್ವೆ ಸಚಿವ ಸುರೇಶ್ ಅಂಗಡಿ ಅವರು ಬೆಳಗಾವಿಯಿಂದ ಹುಬ್ಬಳ್ಳಿಯವರೆಗೆ ರೈಲಿನಲ್ಲಿ ಚಲಿಸಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಬೆಳಗಾವಿಯಿಂದ ಬೆಂಗಳೂರಿಗೆ ಹೊಸ ರೈಲು ಸಂಚಾರ ಆರಂಭಿಸುವುದಾಗಿ ಘೋಷಿಸಿದ್ದಾರೆ.

ಉ.ಪ್ರದೇಶ ಬಿಸಿಲಿನ ಝಳಕ್ಕೆ ನಾಲ್ವರು ರೈಲು ಪ್ರಯಾಣಿಕರು ಸಾವು ಉ.ಪ್ರದೇಶ ಬಿಸಿಲಿನ ಝಳಕ್ಕೆ ನಾಲ್ವರು ರೈಲು ಪ್ರಯಾಣಿಕರು ಸಾವು

3 ಎಸಿ, 7 ಸ್ಲೀಪರ್ ಬೋಗಿಗಳನ್ನು ಹೊಂದಿರುವ ಈ ರೈಲು ರಾತ್ರಿ 9ಕ್ಕೆ ಬೆಳಗಾವಿಯಿಂದ ಹೊರಟು ಬೆಳಗ್ಗೆ 7ಕ್ಕೆ ಬೆಂಗಳೂರು ತಲುಪಲಿದೆ. ಬೆಳಗಾವಿ ಭಾಗದ ಜನರ ಬಹುದಿನಗಳ ಬೇಡಿಕೆ ಈಗ ಈಡೇರಿದಂತಾಗಿದೆ. 14 ಬೋಗಿಗಳನ್ನು ಹೊಂದಿರುವ ಈ ರೈಲು ಮುಂದಿನ ವಾರದಿಂದಲೇ ಸಂಚಾರ ಆರಂಭಿಸಲಿದೆ.

New train from Belagavi to Bengaluru will resume next week

ಬೆಳಗಾವಿಯಿಂದ ಹುಬ್ಬಳ್ಳಿಗೆ ವಿಶೇಷ ಪರಿಶೀಲನಾ ರೈಲಿನಲ್ಲಿ ಭಾನುವಾರ ಪ್ರಯಾಣಿಸಿದ ಸುರೇಶ್ ಅಂಗಡಿ, ಈ ಮಾರ್ಗದ ಜೋಡಿ ರೈಲು ಮಾರ್ಗ ಕಾಮಗಾರಿ ಹಾಗೂ ವಿವಿಧ ರೈಲು ನಿಲ್ದಾಣಗಳನ್ನು ಪರಿಶೀಲಿಸಿದರು.

ಇದೇ ವೇಳೆ ಬೆಳಗಾವಿ, ಖಾನಾಪುರ ಹಾಗೂ ಲೋಂಡಾ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಜೊತೆ ಸಮಾಲೋಚನೆ ನಡೆಸಿದ ಸಚಿವ ಸುರೇಶ ಅಂಗಡಿ ಅವರಿಗೆ ದೂರು ಹಾಗೂ ಮನವಿಗಳ ಮಹಾಪೂರವೇ ಹರಿದು ಬಂತು.

ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ಬೆಳಗಾವಿಗೆ ಬೆಳಗಿನ ಸಮಯ ತಡವಾಗಿ ಬರುತ್ತದೆ. ಇದರಿಂದ ಬಹಳ ತೊಂದರೆಯಾಗುತ್ತಿದ್ದು, ಬೆಳಗ್ಗೆ 6:30ರಿಂದ 7 ಗಂಟೆಗೆ ಬೆಳಗಾವಿಗೆ ಬರುವಂತೆ ಸಮಯ ಬದಲಾವಣೆ ಮಾಡಬೇಕು. ಬೆಳಗಾವಿಯಿಂದ ಬೆಂಗಳೂರಿಗೆ ವಿಶೇಷ ರೈಲು ಸಂಚಾರ ಆರಂಭಿಸಬೇಕು.

ಈಗ ಧಾರವಾಡದಿಂದ ಮೈಸೂರಿಗೆ ಇರುವ ರೈಲನ್ನು ಮೀರಜ್‌ವರಗೆ ವಿಸ್ತರಿಸಬೇಕು ಎಂದು ಪ್ರಯಾಣಿಕರು ಮನವಿ ಮಾಡಿದರು. ಲೋಂಡಾ ಮತ್ತು ಮೀರಜ್‌ ಮಧ್ಯೆ ಡಬ್ಲಿಂಗ್‌ ಕಾರ್ಯ ನಡೆದಿದೆ. ಈ ಕಾಮಗಾರಿ ಪೂರ್ಣಗೊಂಡ ನಂತರ ಹೊಸ ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

English summary
Railway state minister Suresh Angadi annpunced that new train from Belagavi to Bengaluru will resume next week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X