ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋವಾ ಹಾಗೂ ಬೆಳಗಾವಿ ನಡುವೆ ಹೊಸ ಪ್ಯಾಸೆಂಜರ್ ರೈಲು

|
Google Oneindia Kannada News

ಬೆಳಗಾವಿ, ಜುಲೈ 13: ಗೋವಾ ಹಾಗೂ ಬೆಳಗಾವಿ ನಡುವೆ ಹೊಸ ಪ್ಯಾಸೆಂಜರ್ ರೈಲು ಓಡಾಟಕ್ಕೆ ಭಾರತೀಯ ರೈಲ್ವೆ ಇಲಾಖೆ ತಯಾರಿ ನಡೆಸುತ್ತಿದೆ.

ಇದೇ ಜುಲೈ 20ರಿಂದ ಗೋವಾ ಬೆಳಗಾವಿ ನಡುವೆ ಹೊಸ ರೈಲು ಓಡಾಟ ಆರಂಭವಾಗಲಿದೆ. ಬೆಳಗಾವಿ ಹಾಗೂ ಗೋವಾ ನಡುವೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಜುಲೈ 20ಕ್ಕೆ ಉದ್ಘಾಟನೆ ಕಾರ್ಯಕ್ರಮ ವಾಸ್ಕೋದಲ್ಲಿ ನೆರವೇರಲಿದೆ.

ಸ್ಟೇಷನ್ ಬಂದೇ ಬಿಡುತ್ತೆ, ತಾಯಿ ತಿಂಡಿ ಮುಗಿಸಿಲ್ಲವೆಂದು ರೈಲಿನ ಚೈನ್ ಎಳೆದ ಸ್ಟೇಷನ್ ಬಂದೇ ಬಿಡುತ್ತೆ, ತಾಯಿ ತಿಂಡಿ ಮುಗಿಸಿಲ್ಲವೆಂದು ರೈಲಿನ ಚೈನ್ ಎಳೆದ

ರೈಲ್ವೆ ವೇಳಾಪಟ್ಟಿ ಪ್ರಕಾರ ರೈಲು ಬೆಳಗಾವಿ ರೈಲು ನಿಲ್ದಾಣದಿಂದ ಬೆಳಗ್ಗೆ 6.20ಕ್ಕೆ ಹೊರಡಲಿದ್ದು ಮಧ್ಯಾಹ್ನ 12.40ಕ್ಕೆ ವಾಸ್ಕೋಗೆ ತಲುಪಲಿದೆ.ಅದೇ ರೈಲು ಮಧ್ಯಾಹ್ನ 3.55ಕ್ಕೆ ವಾಸ್ಕೋದಿಂದ ಹೊರಡಲಿದ್ದು ಬೆಳಗಾವಿಗೆ ರಾತ್ರಿ 9.25ಕ್ಕೆ ಬಂದು ತಲುಪಲಿದೆ.

New passenger train will resume between Goa and Belagavi

ಈ ರೈಲನ್ನು ಶನಿವಾರ ಮತ್ತು ಭಾನುವಾರ ಮಾತ್ರ ಓಡಿಸಲು ಚಿಂತನೆ ನಡೆಸಲಾಗಿದೆ. ಶನಿವಾರ ಭಾನುವಾರ ಬೆಳಗಾವಿ ಹಾಗೂ ಗೋವಾ ನಡುವೆ ಪ್ರಯಾಣಿಕೆ ದಟ್ಟಣೆ ವಿಪರೀತವಾಗುತ್ತಿರುವ ಕಾರಣ ಹೊಸ ಪ್ಯಾಸೆಂಜರ್‌ ರೈಲನ್ನು ಓಡಿಸಲು ನಿರ್ಧರಿಸಲಾಗಿದೆ.

ಜುಲೈ ಎರಡನೇ ವಾರವೇ ಈ ಹೊಸ ರೈಲಿಗೆ ಚಾಲನೆ ದೊರೆಯಬೇಕಿತ್ತು ಆದರೆ ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಜಾಗ ಸಿಗದ ಕಾರಣ ಸ್ವಲ್ಪ ತಡವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಕಲವು ದಿನಗಳಿಂದ ಬೆಳಗಾವಿ ಹಾಗೂ ಗೋವಾ ನಡುವೆ ಓಡಾಡುವ ರೈಲಿಗೆ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಹೊಸ ರೈಲನ್ನು ನಿಲುಗಡೆ ಮಾಡಲು ಜಾಗ ಒದಗಿಸುವುದೇ ಕಷ್ಟದ ಕೆಲಸವಾಗಿದೆ.

ಹುಬ್ಬಳ್ಳಿ-ಬೆಳಗಾವಿ ನಡುವೆ ಸಂಚರಿಸುತ್ತಿರುವ ರೈಲನ್ನೇ ಬೆಳಗಾವಿ ಹಾಗೂ ಗೋವಾ ನಡುವೆ ಸಂಚರಿಸಲು ಅವಕಾಶ ಮಾಡಿಕೊಡಲಾಗುತ್ತದೆ.

English summary
New passenger train will resume between Goa and Belagavi from July 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X