ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ-ದೆಹಲಿ ವಿಮಾನ; ಡಿ.20ರಿಂದ ವಾರದಲ್ಲಿ 4 ದಿನ

|
Google Oneindia Kannada News

ಬೆಳಗಾವಿ, ಡಿಸೆಂಬರ್ 13; ರಾಷ್ಟ್ರ ರಾಜಧಾನಿ ನವದೆಹಲಿಗೆ ಪ್ರಯಾಣ ಬೆಳೆಸುವ ಜನರಿಗೆ ಸಿಹಿಸುದ್ದಿ. ಬೆಳಗಾವಿ-ನವದೆಹಲಿ ನಡುವೆ ವಾರದಲ್ಲಿ ನಾಲ್ಕು ದಿನ ವಿಮಾನ ಸಂಚಾರ ನಡೆಸಲಿದೆ. ಡಿಸೆಂಬರ್ 20ರಿಂದ ಪರಿಷ್ಕೃತ ವೇಳಾಪಟ್ಟಿ ಜಾರಿಗೆ ಬರಲಿದೆ.

ಬೆಳಗಾವಿ ವಿಮಾನ ನಿಲ್ದಾಣ ಈ ಕುರಿತು ಟ್ವೀಟ್‌ ಮಾಡಿದೆ. ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಸೋಮವಾರ, ಮಂಗಳವಾರ, ಗುರುವಾರ ಮತ್ತು ಶನಿವಾರ ಬೆಳಗಾವಿ-ನವದೆಹಲಿ ನಡುವೆ ವಿಮಾನ ಸಂಚಾರ ನಡೆಸಲಿದೆ.

ಬೆಳಗಾವಿ, ಚಾಮರಾಜನಗರ ಜಿಲ್ಲಾಧಿಕಾರಿಗಳ ವರ್ಗಾವಣೆ ಬೆಳಗಾವಿ, ಚಾಮರಾಜನಗರ ಜಿಲ್ಲಾಧಿಕಾರಿಗಳ ವರ್ಗಾವಣೆ

2021ರ ಆಗಸ್ಟ್‌ನಲ್ಲಿ ಗುರುಗ್ರಾಮ ಮೂಲದ ಸ್ಪೈಸ್‌ ಜೆಟ್ ಬೆಳಗಾವಿ-ನವದೆಹಲಿ ನಡುವೆ ವಿಮಾನ ಸೇವೆಯನ್ನು ಆರಂಭಿಸಿತ್ತು. ಬೋಯಿಂಗ್ 737-700 ವಿಮಾನವ ಈ ಮಾರ್ಗದಲ್ಲಿ ಸಂಚಾರ ನಡೆಸುತ್ತಿತ್ತು.

ಓಮಿಕ್ರಾನ್‌ ಆತಂಕ: ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿಷೇಧ ವಿಸ್ತರಿಸಿದ ಭಾರತಓಮಿಕ್ರಾನ್‌ ಆತಂಕ: ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿಷೇಧ ವಿಸ್ತರಿಸಿದ ಭಾರತ

Belagavi New Delhi Flight Four Times In A Week From December 20

ಡಿಸೆಂಬರ್ 20ರಿಂದ ವಾರದಲ್ಲಿ ನಾಲ್ಕು ದಿನ ಉಭಯ ನಗರಗಳ ನಡುವೆ ವಿಮಾನ ಸಂಚಾರ ನಡೆಸಲಿದೆ. ಆದರೆ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ವೇಳಾಪಟ್ಟಿ; ಪ್ರಸ್ತುತ ಇರುವ ವೇಳಾಪಟ್ಟಿ ಪ್ರಕಾರ ನವದೆಹಲಿಯಿಂದ ವಿಮಾನ ಬೆಳಗ್ಗೆ 6.35ಕ್ಕೆ ಟೇಕಾಫ್ ಆಗಲಿದೆ. ಬೆಳಗಾವಿಗೆ 9.30ಕ್ಕೆ ತಲುಪಲಿದೆ. ಬೆಳಗಾವಿಯಿಂದ 10 ಗಂಟೆಗೆ ಹೊರಡುವ ವಿಮಾನ 12.30ಕ್ಕೆ ದೆಹಲಿ ತಲುಪಲಿದೆ.

ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಭಾರತ ಅಸ್ತು: 14 ದೇಶಗಳಿಗೆ ನಿರ್ಬಂಧಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಭಾರತ ಅಸ್ತು: 14 ದೇಶಗಳಿಗೆ ನಿರ್ಬಂಧ

ಅಕ್ಕ-ಪಕ್ಕದ ರಾಜ್ಯಕ್ಕೂ ಅನುಕೂಲ; ಬೆಳಗಾವಿ ವಿಮಾನ ನಿಲ್ದಾಣ ಕರ್ನಾಟಕ ಮಾತ್ರವಲ್ಲ. ನೆರೆಯ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗೋವಾಕ್ಕೆ ಸಹ ಸಹಕಾರಿಯಾಗಿವೆ. ಒಟ್ಟು ಮೂರು ರಾಜ್ಯಗಳ ಜನರು ವಿಮಾನ ನಿಲ್ದಾಣ ಬಳಕೆ ಮಾಡುತ್ತಾರೆ.

ಪುಣೆ, ಚೆನ್ನೈ, ಹೈದರಾಬಾದ್, ಬೆಂಗಳೂರು, ತಿರುಪತಿ, ಕಡಪ, ಇಂದೋರ್, ನವದೆಹಲಿ ಸೇರಿದಂತೆ ವಿವಿಧ ನಗರಗಳಿಗೆ ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸುತ್ತದೆ. ಕೇಂದ್ರ ಸರ್ಕಾರ ಉಡಾನ್ ಯೋಜನೆಯ 3ನೇ ಹಂತಕ್ಕೆ ವಿಮಾನ ನಿಲ್ದಾಣವನ್ನು ಸೇರಿಸಿದೆ.

ಕರ್ನಾಟಕದ ಹಳೆಯ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ್ದು. ಆದರೆ ಪ್ರಯಾಣಿಕರ ಕೊರತೆಯನ್ನು ನಿಲ್ದಾಣ ಎದುರಿಸುತ್ತಿತ್ತು. ಆದರೆ ಉಡಾನ್ ಯೋಜನೆಗೆ ಸೇರಿದ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.

ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್, ದೆಹಲಿ ಸೇರಿದಂತೆ ವಿವಿಧ ನಗರಗಳಿಗೆ ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸುತ್ತದೆ. 2018ರಲ್ಲಿ ಪ್ರತಿದಿನ 19 ಸಾವಿರ ಪ್ರಯಾಣಿಕರು ವಿಮಾನ ನಿಲ್ದಾಣ ಬಳಕೆ ಮಾಡುತ್ತಿದ್ದರು. 2019ರಲ್ಲಿ ಈ ಸಂಖ್ಯೆ 21,000ಕ್ಕೆ ಏರಿಕೆಯಾಗಿತ್ತು.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೊರತುಪಡಿಸಿದರೆ ಅತಿ ಹೆಚ್ಚು ಜನರು ಬಳಕೆ ಮಾಡುವ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಬೆಳಗಾವಿ ವಿಮಾನ ನಿಲ್ದಾಣ ಸೇರಿದೆ.

ಲಾಕ್‌ಡೌನ್‌ ತೆರವು ಬಳಿಕವೂ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಮೇ 26 ರಿಂದ ಸೆಪ್ಟೆಂಬರ್ 13ರ ತನಕ ವಿಮಾನ ನಿಲ್ದಾಣ ಬಳಸಿದ ಪ್ರಯಾಣಿಕರು 53 ಸಾವಿರ.

2020ರ ಜನವರಿಯಿಂದ ಸೆಪ್ಟೆಂಬರ್ 13ರ ತನಕ 1,37,545 ಜನರು ಬೆಳಗಾವಿ ವಿಮಾನ ನಿಲ್ದಾಣದ ಮೂಲಕ ಸಂಚಾರವನ್ನು ನಡೆಸಿದ್ದಾರೆ. ಪುಣೆ ವಿಮಾನ ನಿಲ್ದಾಣಕ್ಕಿಂತ ಬೆಳಗಾವಿ ಹತ್ತಿರವಾಗುವುದರಿಂದ ಮಹಾರಾಷ್ಟ್ರದ ಜನರು ಹೆಚ್ಚಾಗಿ ಸಾಂಬ್ರಾಕ್ಕೆ ಆಗಮಿಸುತ್ತಾರೆ.

ವಿಮಾನ ನಿಲ್ದಾಣದಲ್ಲಿ ಕಾರ್ಗೊ ಕಟ್ಟಡದ ಕಾಮಗಾರಿ ಸಹ ನಡೆಯುತ್ತಿದೆ. ಇದು ಪೂರ್ಣಗೊಂಡು ಉದ್ಘಾಟನೆಗೊಂಡರೆ ವಸ್ತುಗಳನ್ನು ಬೇರೆ ರಾಜ್ಯಗಳಿಗೆ ರಫ್ತು ಮಾಡಲು ಸಹ ಅವಕಾಶ ದೊರೆಯಲಿದೆ. ಸರಕುಗಳ ಸಾಗಾಟದಿಂದ ವಿಮಾನ ನಿಲ್ದಾಣಕ್ಕೆ ಸಹಾಯಕವಾಗಲಿದೆ.

ಬೆಳಗಾವಿಯಿಂದ ಚೆನ್ನೈ, ನವದೆಹಲಿಗೆ ನೇರ ವಿಮಾನ ಸೇವೆ ಆರಂಭಿಸಬೇಕು ಎನ್ನುವುದು ಪ್ರಮುಖ ಬೇಡಿಕೆಯಾಗಿತ್ತು. ಈಗ ವಿಮಾನ ಹಾರಾಟ ಆರಂಭವಾಗಿದೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದ್ದರಿಂದ ಸ್ಪೈಸ್ ಜೆಟ್ ವಾರದಲ್ಲಿ 4 ದಿನಗಳ ಕಾಲ ಬೆಳಗಾವಿ-ದೆಹಲಿ ವಿಮಾನ ಹಾರಾಟ ನಡೆಸಲು ತೀರ್ಮಾನಿಸಿದೆ.

English summary
SpiceJet will operate the Belagavi-New Delhi flight four times (Monday, Tuesday, Thursday and Saturday) a week from December 20, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X