ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ, ಹುಬ್ಬಳ್ಳಿ ಜನರಿಗೆ ಸಿಹಿ ಸುದ್ದಿ ಕೊಟ್ಟ ಎನ್‌ಇಕೆಆರ್‌ಟಿಸಿ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಡಿಸೆಂಬರ್ 09 : ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಮತ್ತು ಬೆಳಗಾವಿ ಜನರಿಗೆ ಸಿಹಿಸುದ್ದಿಯನ್ನು ನೀಡಿದೆ. ಉಭಯ ನಗರಗಳ ನಡುವಿನ ವೋಲ್ವೊ ಬಸ್ ಸಂಚಾರ ಪುನಃ ಆರಂಭವಾಗಿದೆ.

ಕೋವಿಡ್ ಹರಡದಂತೆ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಹುಬ್ಬಳ್ಳಿ - ಬೆಳಗಾವಿ ನಡುವಿನ ತಡೆ ರಹಿತ ವೋಲ್ವೊ ಬಸ್ಸುಗಳ ಸಂಚಾರ ಸ್ಥಗಿತವಾಗಿತ್ತು. ಜನರು ಬಸ್‌ ಸಂಚಾರ ಆರಂಭಿಸಬೇಕು ಎಂದು ಬೇಡಿಕೆ ಇಟ್ಟಿದ್ದರು.

ಕರ್ನಾಟಕ; ಎಸಿ/ ನಾನ್ ಎಸಿ ಸ್ಲೀಪರ್ ಬಸ್ ದರ ಕಡಿತ ಕರ್ನಾಟಕ; ಎಸಿ/ ನಾನ್ ಎಸಿ ಸ್ಲೀಪರ್ ಬಸ್ ದರ ಕಡಿತ

ಜನರ ಒತ್ತಾಯದಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ-ಹುಬ್ಬಳ್ಳಿ ಮತ್ತು ಹುಬ್ಬಳ್ಳಿ-ಬೆಳಗಾವಿ ತಡೆ ರಹಿತ ವೋಲ್ವೊ ಬಸ್ ಸೇವೆಗೆ ಮತ್ತೆ ಚಾಲನೆ ನೀಡಿದೆ.

ರಾಜಹಂಸ ಬಸ್ ಪ್ರಯಾಣ ದರದಲ್ಲಿ ಭಾರಿ ಕಡಿತರಾಜಹಂಸ ಬಸ್ ಪ್ರಯಾಣ ದರದಲ್ಲಿ ಭಾರಿ ಕಡಿತ

NEKRTC Resumed Belagavi Hubballi Volvo Bus Service

ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದಿಂದ ತಡೆ ರಹಿತ ವೋಲ್ವೊ ಬಸ್ ಸಂಚಾರವನ್ನು ಆರಂಭಿಸಲಿದೆ ಎಂದು ಪ್ರಕಟಣೆಯ ತಿಳಿಸಿದೆ.

ಗದಗ ಬಸ್ ನಿಲ್ದಾಣಕ್ಕೆ ಪುಟ್ಟರಾಜ ಗವಾಯಿಗಳ ಹೆಸರು ಗದಗ ಬಸ್ ನಿಲ್ದಾಣಕ್ಕೆ ಪುಟ್ಟರಾಜ ಗವಾಯಿಗಳ ಹೆಸರು

ಪ್ರತಿ ದಿನ ಬೆಳಗ್ಗೆ 8.30, 9, ಮಧ್ಯಾಹ್ನ 11.15, 12.45, 3, 3.30 ಮತ್ತು ಸಂಜೆ 5.30 ಮತ್ತು 6ಕ್ಕೆ ಹುಬ್ಬಳ್ಳಿ ಹಾಗೂ ಬೆಳಗಾವಿಯಿಂದ ಏಕ ಕಾಲಕ್ಕೆ ಹೊರಡಲಿವೆ.

ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್

ಈ ಬಸ್‌ಗಳಿಗೆ ರಿಯಾಯಿತಿ ಪ್ರಯಾಣ ದರ ರೂ.150 ನಿಗದಿ ಮಾಡಲಾಗಿದೆ. ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

English summary
North Eastern Karnataka Road Transport Corporation resumed Belagavi-Hubballi volvo bus service. Bus stopped after announcement of lock down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X