ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗೆ ಸೋಲು

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಡಿಸೆಂಬರ್ 31; ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ಗ್ರಾಮ ಪಂಚಾಯಿತಿ ಚುನಾವಣೆ ಅಖಾಡಕ್ಕೆ ಇಳದಿದ್ದ ಅಭ್ಯರ್ಥಿಗೆ ಸೋಲಾಗಿದೆ. 'ಆಟೋ' ಚಿಹ್ನೆಯಡಿ ಕಣಕ್ಕಿಳಿಸಿದ್ದ ಅಭ್ಯರ್ಥಿ 430 ಮತಗಳನ್ನು ಪಡೆದಿದ್ದು, 156 ಮತಗಳಿಂದ ಸೋತಿದ್ದಾರೆ.

ಪರುಶರಾಮ ಪಾಕರೆ ಎಂಬುವವರು ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದ 1ನೇ ವಾರ್ಡ್‌ನಿಂದ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. 37 ವರ್ಷದ ಪರುಶರಾಮ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದಾರೆ.

ಜೈಲಿನಿಂದಲೇ ಗ್ರಾ. ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿ!ಜೈಲಿನಿಂದಲೇ ಗ್ರಾ. ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿ!

ರಾಜು ಸೋಮನಾಥ ವರತೆ 586 ಮತಗಳನ್ನು ಪಡೆದು ಪರುಶರಾಮ ಪಾಕರೆಯನ್ನು ಸೋಲಿಸಿದ್ದಾರೆ. ಮುಚ್ಚಂಡಿ ಗ್ರಾಮದ ಮಹೇಶ ಅವ್ವಾನೆ ಎಂಬಾತನ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಪರುಶರಾಮ ಪಾಕರೆ ಜೈಲು ಸೇರಿದ್ದಾರೆ.

Infographics:ಜಿಲ್ಲಾವಾರು ಗ್ರಾಮ ಪಂಚಾಯಿತಿ ಫಲಿತಾಂಶ ಅಪ್ಡೇಟ್ಸ್ Infographics:ಜಿಲ್ಲಾವಾರು ಗ್ರಾಮ ಪಂಚಾಯಿತಿ ಫಲಿತಾಂಶ ಅಪ್ಡೇಟ್ಸ್

Murder Accused Who Contest For Gram Panchayat Election From Jail Lost

ಎರಡು ತಿಂಗಳ ಹಿಂದೆ ಜೈಲು ಪಾಲಾಗಿದ್ದ ಪರುಶರಾಮ ಸ್ನೇಹಿತರ ಒತ್ತಾಯದ ಮೇರೆಗೆ ಚುನಾವಣಾ ಕಣಕ್ಕಿಳಿಸಿದ್ದರು. ಕೊಲೆ ಪ್ರಕರಣದಲ್ಲಿ 4ನೇ ಆರೋಪಿಯಾಗಿರುವ ಪರುಶರಾಮ ಪರವಾಗಿ ಸ್ನೇಹಿತರೇ ಗ್ರಾಮದಲ್ಲಿ ಪ್ರಚಾರವನ್ನು ಮಾಡಿದ್ದರು.

ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ: ಬಿ.ಎಲ್.ಸಂತೋಷ್ ಟ್ವೀಟ್ ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ: ಬಿ.ಎಲ್.ಸಂತೋಷ್ ಟ್ವೀಟ್

ಜೈಲಿನಲ್ಲಿದ್ದ ಪರುಶರಾಮ ಅಲ್ಲಿಂದಲೇ ನಾಮಪತ್ರಗಳಿಗೆ ಸಹಿ ಮಾಡಿ ಕಳಿಸಿದ್ದರು. ಪರುಶರಾಮ ಪರವಾಗಿ ಸ್ನೇಹಿತರೇ ನಾಮಪತ್ರವನ್ನು ಸಲ್ಲಿಸಿದ್ದರು. 430 ಮತಗಳನ್ನು ಪಡೆದರೂ ಪರುಶರಾಮ ಪಾಕರೆ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ.

English summary
37 year old Parusharam Bharama Pakare who is accused in murder case contest for gram panchayat election from Belagavi taluk. He bagged 430 votes and lost election with 156 votes. Parusharam Bharama Pakare in Hindalga jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X