ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುದ್ದಹನುಮೇಗೌಡರ ಮೇಲೆ ಹಣ ಪಡೆದ ಆರೋಪ: ಪರಮೇಶ್ವರ್ ಹೇಳಿದ್ದೇನು?

|
Google Oneindia Kannada News

ಬೆಳಗಾವಿ, ಏಪ್ರಿಲ್ 26: ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ ಅವರು ತುಮಕೂರಿನಿಂದ ನಾಮಪತ್ರ ವಾಪಸ್ ಪಡೆಯಲು 3.50 ಕೋಟಿ ಹಣ ಪಡೆದಿದ್ದಾರೆ ಎಂದು ಪರಮೇಶ್ವರ್ ಆಪ್ತರೊಬ್ಬರು ಆಡಿಯೋದಲ್ಲಿ ಹೇಳಿರುವ ಕುರಿತು ಡಿಸಿಎಂ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಾಮಪತ್ರ ಹಿಂಪಡೆಯಲು 3.5 ಕೋಟಿ: ಮುದ್ದಹನುಮೇಗೌಡ ವಿರುದ್ಧ ಆಡಿಯೋ ಬಾಂಬ್ನಾಮಪತ್ರ ಹಿಂಪಡೆಯಲು 3.5 ಕೋಟಿ: ಮುದ್ದಹನುಮೇಗೌಡ ವಿರುದ್ಧ ಆಡಿಯೋ ಬಾಂಬ್

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, ಮುದ್ದಹನುಮೇಗೌಡ ಅವರು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರು ಅವರು ಯಾವುದೇ ರೀತಿಯ ಹಣ ಪಡೆದು ನಾಮಪತ್ರ ವಾಪಸ್ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಮ್ಮ ಆಪ್ತ ದರ್ಶನ್ ಬಗ್ಗೆ ಮಾತನಾಡಿದ ಅವರು, ಚುನಾವಣಾ ಪ್ರಚಾರದ ವೇಳೆ ದರ್ಶನ್‌ ನನ್ನ ಜೊತೆ ಇದ್ದರು ಎಂದ ಅವರು, ಸುಳ್ಳು ಮಾಹಿತಿ ಹಬ್ಬಿಸುತ್ತಿರುವ ದರ್ಶನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಆದರೆ ಆಡಿಯೋ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.

Muddahanume Gowda did not take money he is loyal to Congress: G Parameshwar

ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ಒಂದು ಹರಿದಾಡುತ್ತಿದ್ದು, ಆ ಆಡಿಯೋದಲ್ಲಿ ಪರಮೇಶ್ವರ್ ಆಪ್ತ ಎಂದು ಹೇಳಲಾಗುವ ದರ್ಶನ್ ಎಂಬುವರು, ಮುದ್ದಹನುಮೇಗೌಡ ಅವರು ತುಮಕೂರಿನಲ್ಲಿ ದೇವೇಗೌಡ ಅವರ ವಿರುದ್ಧ ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು.

ರಮೇಶ್ ಜಾರಕಿಹೊಳಿ ಮನವೊಲಿಸುತ್ತೇನೆ: ಪರಮೇಶ್ವರ್ರಮೇಶ್ ಜಾರಕಿಹೊಳಿ ಮನವೊಲಿಸುತ್ತೇನೆ: ಪರಮೇಶ್ವರ್

ಡಿಸಿಎಂ ಪರಮೇಶ್ವರ್ ಅವರು ತುಮಕೂರಿನ ಉಸ್ತುವಾರಿ ಸಚಿವರೂ ಆಗಿದ್ದು, ಮುದ್ದಹನುಮೇಗೌಡ ಅವರು ನಾಮಪತ್ರ ವಾಪಸ್ ಪಡೆದುಕೊಳ್ಳುವಲ್ಲಿ ಅವರ ಪಾತ್ರವೂ ಇದೆ ಎನ್ನಲಾಗಿದೆ. ಅವರ ಮತ್ತು ಸಿದ್ದರಾಮಯ್ಯ ಅವರ ಸಂಧಾನದಿಂದಲೇ ಮುದ್ದಹನುಮೇಗೌಡ ಮತ್ತು ಮಾಜಿ ಶಾಸಕ ರಾಜಣ್ಣ ನಾಮಪತ್ರ ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ.

English summary
DCM G Parameshwar said Muddahanume gowda is a loyal congress leader alligations against him are all fake. Alligation rised in a viraled audio clip that Muddahanume Gowda took money to take back his nomination in Tumakuru constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X