ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಗವಿಕಲ ಮಗನಿಗೆ ಔಷಧಿಯೂ ಇಲ್ಲ; ನೆರವಿಗೆ ಕಣ್ಣೀರಿಟ್ಟ ತಾಯಿ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಏಪ್ರಿಲ್ 15: ಕೊರೊನಾ ವೈರಸ್ ಅನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ದೇಶದಲ್ಲಿ ಲಾಕ್‌ಡೌನ್ ಅನ್ನು ಮೇ 3ರವರೆಗೂ ಮುಂದುವರಿಸಲಾಗಿದೆ. ಆದರೆ ಈ ಸಮಯದಲ್ಲಿ ಕೆಲವರ ಬದುಕು ಇನ್ನಷ್ಟು ಕಠಿಣಗೊಂಡಿದೆ.

ಹಾಗೆಯೇ ಬೆಳಗಾವಿಯಲ್ಲಿ ತಾಯಿಯೊಬ್ಬರು ತಮ್ಮ ಅಂಗವಿಕಲ ಮಗನನ್ನು ಸಾಕಲಾಗದೇ ಕಣ್ಣೀರು ಹಾಕುತ್ತಿದ್ದಾರೆ. ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದ ವಿಜಯ್ ಗಲ್ಲಿ ನಿವಾಸಿ ಅಶ್ವಿನಿ ಹಲಗೇಕರ್ ಎಂಬುವರು ಹೊಲಿಗೆ ಕೆಲಸ ಮಾಡಿಕೊಂಡಿದ್ದರು. ಆದರೆ ಲಾಕ್ ಡೌನ್ ನಿಂದಾಗಿ ಕೆಲಸವೂ ಇಲ್ಲದಂತಾಗಿದೆ. ಹೀಗಾಗಿ ಜೀವನ ನಡೆಸಲು ಕಷ್ಟವಾಗುತ್ತಿರುವುದಾಗಿ ದುಃಖ ಹೇಳಿಕೊಂಡಿದ್ದಾರೆ.

ಟಿಕ್ ಟಾಕ್ ನಲ್ಲಿ ತಾಯಿ ಚಿಕಿತ್ಸೆಗೆ ಗೋಗರೆದಿದ್ದ ಬಳ್ಳಾರಿ ಯುವತಿಗೆ ಸಿಕ್ಕಿತು ಸಹಾಯಟಿಕ್ ಟಾಕ್ ನಲ್ಲಿ ತಾಯಿ ಚಿಕಿತ್ಸೆಗೆ ಗೋಗರೆದಿದ್ದ ಬಳ್ಳಾರಿ ಯುವತಿಗೆ ಸಿಕ್ಕಿತು ಸಹಾಯ

ಅಶ್ವಿನಿ ಅವರ ಪತಿ ಹನ್ನೆರಡು ವರ್ಷಗಳ ಹಿಂದೆ ತೀರಿಹೋಗಿದ್ದಾರೆ. 24 ವರ್ಷದ ಮಗ ಶುಭಂ ಅಂಗವಿಕಲನಾಗಿದ್ದು, ಹಾಸಿಗೆ ಹಿಡಿದಿದ್ದಾನೆ. ಜೀವನ ನಡೆಸುವುದೇ ಕಷ್ಟವಾಗಿಬಿಟ್ಟಿರುವ ಈ ಹೊತ್ತಿನಲ್ಲಿ ತಮ್ಮ ಮಗನಿಗೆ ಔಷಧ ತರಲೂ ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಜೀವನೋಪಾಯಕ್ಕೆ ಏನಾದರೂ ಕೆಲಸ ನೀಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.

Mother Requested For Help To Her Handicap Son In Machche Village

ಗಂಡ ಸಾವನ್ನಪ್ಪಿದ್ದ ನಂತರ ತಮ್ಮ ಮೂವರು ಮಕ್ಕಳೊಂದಿಗೆ ಅಶ್ವಿನಿ ತಂದೆಯ ಮನೆಯಲ್ಲಿ ವಾಸವಿದ್ದರು. ಆದರೆ ಇತ್ತೀಚೆಗಷ್ಟೇ ತಂದೆಯೂ ಮೃತಪಟ್ಟಿದ್ದಾರೆ. ಹಿರಿಯ ಮಗಳಿಗೆ ಮದುವೆಯಾಗಿದ್ದು, ಅಂಗವಿಕಲ ಮಗ, ಮತ್ತೋರ್ವ ಮಗ ಮನೆಯಲ್ಲಿದ್ದಾರೆ. ಇಂಥ ಕಷ್ಟದ ಸಮಯದಲ್ಲಿ ನಮ್ಮ ಜೀವನಕ್ಕೆ ಏನಾದರೂ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ್ದಾರೆ.

English summary
Because of lockdown, some people are in economical trouble. Here is a mother requesting for help to his handicap son in machche village of belagavi district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X