ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್ಥಿಕತೆ ಕುಸಿತ ಹೆಸರಲ್ಲಿ ಮೋದಿ ಹೆಸರಿಗೆ ಕಳಂಕ ತರಲು ಯತ್ನ: ಸುರೇಶ್

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ ನವೆಂಬರ್ 17: ಆರ್ಥಿಕತೆ ಹೆಸರಿನಲ್ಲಿ ನರೇಂದ್ರ ಮೋದಿ ಅವರ ಹೆಸರಿಗೆ ಕಳಂಕ ತರಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವ ಸುರೇಶ್ ಅಂಗಡಿ ದೂರಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಹೇಳುತ್ತಾ ಅಪಪ್ರಚಾರ ಮಾಡುತ್ತಿದ್ದಾರೆ. ಇಕಾನಮಿ ಎಲ್ಲಿ ಕುಸಿದಿದೆ. ಎಲ್ಲಾ ಕಡೆ ರೈಲ್ವೆಗಳು ಭರ್ತಿಯಾಗಿವೆ, ವಿಮಾನಗಳು ಇವೆ, ಎಲ್ಲಾ ಜನ ಕೆಲಸ ಮಾಡುತ್ತಿದ್ದಾರೆ, ಆರ್ಥಿಕತೆ ಕುಸಿತ ನಿಮಗೆ ಎಲ್ಲಿ ಕಣುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಗೋಕಾಕನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಅಶೋಕನ ಪೂಜೇರಿ ಸ್ಪರ್ಧೆ ವಿಚಾರವಾಗಿ ರಮೇಶ ಜಾರಕಿಹೊಳಿ ಮನೆಯಲ್ಲಿ ರಹಸ್ಯ ಮೀಟಿಂಗ್ ಕುರಿತು ಮಾತನಾಡಿರುವ ಅವರು ಅಶೋಕ್ ಪೂಜಾರಿ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಎಲ್ಲೂ ಹೇಳಿಲ್ಲ.. ನಿನ್ನೆ ನಾನು ಗೋಕಾಕಗೆ ಹೋಗಿದ್ದೆ ರಮೇಶ್ ಜಾರಕಿಹೊಳಿ ಮನೆಯಲ್ಲಿ ಅಶೋಕ ಜೊತೆ ಮಾತನಾಡಿದ್ದೇನೆ.

Modis Name Tarnished In The Name Of Economy Slowdown

ರಮೇಶ ಜಾರಕಿಹೊಳಿ ರಾಜೀನಾಮೆ ನೀಡಿದ್ದರಿಂದ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ, ಉಳಿದ 15 ಶಾಸಕರ ತ್ಯಾಗದಿಂದ ಅಧಿಕಾರಕ್ಕೆ ಬಂದಿದ್ದೇವೆ.

ಹೀಗಾಗಿ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಪಕ್ಷದ ಮೇಲಿದೆ. ಹೀಗಾಗಿ ಒಗ್ಗಟ್ಟಿನಿಂದ ರಮೇಶ ಜಾರಕಿಹೊಳಿ ಪರವಾಗಿ ಕೆಲಸ ಮಾಡುವಂತೆ ಅಶೋಕ ಪೂಜೇರಿಗೆ ಹೇಳಿದ್ದೇನೆ.

ತಮ್ಮ ಹಿರಿಯರ ಜೊತೆ ಚರ್ಚಿಸಿ ಇಂದು ಸಂಜೆಯೊಳಗೆ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.ಗೋಕಾಕನಲ್ಲಿ ರಮೇಶ ಜಾರಕಿಹೊಳಿ ಪರವಾಗಿ ಪ್ರಚಾರ ಮಾಡದಂತೆ ಬಾಲಚಂದ್ರ ಜಾರಕಿಹೊಳಿ ಮೇಲೆ ಸತೀಶ್, ಲಖನ್ ಒತ್ತಡ ವದಂತಿ ಕುರಿತು ಸ್ಪಷ್ಟನೆ ನೀಡಿರುವ ಅವರು, ಅದು ಜಾರಕಿಹೊಳಿ ಸಹೋದರರ ಆಂತರಿಕ ವಿಚಾರ ರಮೇಶ, ಬಾಲಚಂದ್ರ ಹಾಗೂ ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಗಳು, ಪಕ್ಷ ಮಾಡುವ ಆದೇಶವನ್ನು ತಪ್ಪದೇ ಎಲ್ಲರೂ ಪಾಲಿಸಲೇಬೇಕು.

ಕಾಗವಾಡದ ರಾಜು ಕಾಗೆ ಎಮೋಷನಲ್ ಆಗಿ ತಪ್ಪು ನಿರ್ಧಾರ ಕೈಗೊಂಡಿದ್ದಾರೆ, ಮುಂದೆ ಪಶ್ಚಾತಾಪ ಪಡಲಿದ್ದಾರೆ. ಅಥಣಿ ಟಿಕೆಟ್ ಕೈತಪ್ಪಿದ್ದರಿಂದ ಡಿಸಿಎಂ ಲಕ್ಷ್ಮಣ ಸವದಿ ಮುನಿಸು ವಿಚಾರದ ಕುರಿತು ಮಾತನಾಡಿರುವ ಅವರು, ಬಿಜೆಪಿಯಲ್ಲಿ ವ್ಯಕ್ತಿ ಮುಖ್ಯವಲ್ಲ, ಇಲ್ಲಿ ವ್ಯಕ್ತಿ ಬರ್ತಾರೆ ಹೋಗ್ತಾರೆ. ಲಕ್ಷ್ಮಣ ಸವದಿ ತನ್ನ ಕಾಳಜಿಯನ್ನ ಹೈಕಮಾಂಡ್ ಮಾಡಲಿದೆ ಎಂದಿದ್ದಾರೆ. ಅಥಣಿಯಲ್ಲಿ ಮಹೇಶ ಕುಮಟಳ್ಳಿ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ.

English summary
Minister Suresh Angadi said that Some are trying to tarnish Narendra Modi's name in the name of Economy slowdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X