ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಮಾಚಾರಕ್ಕೆ ಬಳಸಿದ ಲಿಂಬೆಹಣ್ಣಿನಲ್ಲಿ ಶರಬತ್ ಮಾಡಿ ಕುಡಿದ ಶಾಸಕ

|
Google Oneindia Kannada News

ಬೆಳಗಾವಿ, ನ 6: ಸ್ಮಶಾನದಲ್ಲಿ ಊಟ, ಭಜನೆ, ವಾಸ್ತವ್ಯ ಮುಂತಾದ ಹೆಜ್ಜೆಗಳನ್ನು ಇಟ್ಟು, ಮೂಢನಂಬಿಕೆಯ ವಿರುದ್ದ ಜನಜಾಗೃತಿ ಮಾಡಿಸುವ ಕೆಲಸವನ್ನು ಮಾಡುತ್ತಿರುವ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ, ದೀಪಾವಳಿ ಹಬ್ಬದ ಮುನ್ನಾದಿನ ಇನ್ನೊಂದು ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ತನ್ನ ಒಡೆತನದ ಹೊಲದಲ್ಲಿ ಕಿಡಿಗೇಡಿಗಳು ಮಾಡಿದ ವಾಮಾಚಾರ ಪ್ರಯೋಗಕ್ಕೆ ತಿರುಗೇಟು ನೀಡಲು ಶಾಸಕ ಜಾರಕಿಹೊಳಿ, ಮಾಟಮಂತ್ರಕ್ಕೆ ಪ್ರಯೋಗಿಸಿದ ಲಿಂಬೆಹಣ್ಣಿನಲ್ಲೇ ಶರಬತ್ತು ಮಾಡಿ ಕುಡಿದು, ತಾನು ಇದಕ್ಕೆಲ್ಲಾ ಕ್ಯಾರೇ ಮಾಡುವುದಿಲ್ಲ ಎಂದು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ.

ಬೆಳಗಾವಿ ರಾಜಕಾರಣದಿಂದ ಹೊಸ ಸುದ್ದಿಯೊಂದು ಹೊರಬಂತು! ಬೆಳಗಾವಿ ರಾಜಕಾರಣದಿಂದ ಹೊಸ ಸುದ್ದಿಯೊಂದು ಹೊರಬಂತು!

ಗೋಕಾಕ ಸಮೀಪದ ಸತೀಶ್ ಅವರ ಹೊಲದಲ್ಲಿ ಲಿಂಬೆಹಣ್ಣು, ತೆಂಗಿನಕಾಯಿ, ಅರಸಿಣ, ಕುಂಕುಮ, ಬ್ಲೌಸ್ ಪೀಸ್ ಮುಂತಾದವುಗಳನ್ನು ಇಟ್ಟು, ವಾಮಾಚಾರ ಮಾಡಲಾಗಿತ್ತು. ವಾಮಾಚರಕ್ಕೆ ಬಳಸಿದ್ದ ಲಿಂಬೆಹಣ್ಣಿನಿಂದ ಶರಬತ್, ತೆಂಗಿನಕಾಯಿಯನ್ನು ಬಳಸಿ, ಸಾಂಬಾರ್ ಮಾಡಿ ಊಟ ಮಾಡಲಾಗಿದೆ ಎಂದು ಜಾರಕಿಹೊಳಿ ಹೇಳಿದ್ದಾರೆ.

MLA and former Minister Satish Jarkiholi taken a lemon which is used for black magic for lime juice

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸತೀಶ್ ಜಾರಕಿಹೊಳಿ, ನಾನು ಹಿಂದಿನಿಂದಲೂ ಇದನ್ನೆಲ್ಲಾ ನಂಬುವವನಲ್ಲ. ಮಾಟಮಂತ್ರ ಪ್ರಯೋಗ ಮಾಡಿ ನನ್ನನ್ನು ಹೆದರಿಸಬಹುದು, ಮೂಲೆತಳ್ಳಬಹುದು ಎನ್ನುವ ಭ್ರಮೆಯಲ್ಲಿ ಯಾರಾದರೂ ಇದ್ದರೆ, ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ಹೇಳಿದ್ದಾರೆ.

ದೆವ್ವದ ಭಯ ಹೊಡೆದೋಡಿಸಲು ಸ್ಮಶಾನದಲ್ಲಿ ಮಲಗಿದ ಶಾಸಕದೆವ್ವದ ಭಯ ಹೊಡೆದೋಡಿಸಲು ಸ್ಮಶಾನದಲ್ಲಿ ಮಲಗಿದ ಶಾಸಕ

ಊರಿನ ಬೇರೆ ಜಾಗದಂತೆ ಸ್ಮಶಾನ ಕೂಡಾ ಒಂದು. ಸ್ಮಶಾನಕ್ಕೂ ಒಂದು ಇತಿಹಾಸವಿರುತ್ತದೆ ಎಂದು ಈ ಹಿಂದೆ ಅಬಕಾರಿ ಸಚಿವರಾಗಿದ್ದ ಸತೀಶ್ ಜಾರಕಿಹೊಳಿ ಸ್ಮಶಾನದಲ್ಲಿ ಸಹಭೋಜನ ನಡೆಸಿದ ಉದಾಹರಣೆಗಳಿವೆ.

ದೆಹಲಿಯಿಂದ ವಾಪಸಾದ ಸತೀಶ್ ಮೌನದ ಹಿಂದಿನ ಗುಟ್ಟೇನು? ದೆಹಲಿಯಿಂದ ವಾಪಸಾದ ಸತೀಶ್ ಮೌನದ ಹಿಂದಿನ ಗುಟ್ಟೇನು?

ಜಿಲ್ಲೆಯ ಪ್ರಭಾವಿ ಕುಟುಂಬವಾಗಿರುವ ಜಾರಕಿಹೊಳಿ ಒಡೆತನದ ಹೊಲದಲ್ಲೇ ವಾಮಾಚಾರ ಮಾಡಿದವರು ಯಾರು ಎನ್ನುವ ಕುತೂಹಲ ತಾಲೂಕಿನಲ್ಲಿ ಮನೆಮಾಡಿದೆ.

English summary
Yamakanamaradi (Belagavi dist) Congress MLA and former Minister Satish Jarkiholi taken a lemon which is used for black magic for lime juice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X