ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯ ಸಂಭಾಜಿ ಪಾಟೀಲರಿಗೆ ರವಿ ಪೂಜಾರಿ ಕರೆ

|
Google Oneindia Kannada News

ಬೆಳಗಾವಿ, ಮಾ.5 : ಭೂಗತ ಪಾತಕಿ ರವಿ ಪೂಜಾರಿ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಸಂಭಾಜಿ ಪಾಟೀಲ ಅವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾನು ಭೂಗತ ಪಾತಕಿ ರವಿ ಪೂಜಾರಿ ಎಂದು ಹೇಳಿಕೊಂಡ ವ್ಯಕ್ತಿ ಬುಧವಾರ ಮೂರು ಬಾರಿ ತನಗೆ ಕರೆ ಮಾಡಿದ್ದಾನೆ ಎಂದು ಶಾಸಕ ಸಂಭಾಜಿ ಪಾಟೀಲ (ಎಂಇಎಸ್) ಅವರು ಬೆಳಗಾವಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. 4 ರಿಂದ 5 ಲಕ್ಷ ಹಣ ನೀಡುವಂತೆ ಪೂಜಾರಿ ಬೇಡಿಕೆ ಇಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. [ಸಂಭಾಜಿ ಪಾಟೀಲ ವಿರುದ್ಧ ದೂರು ದಾಖಲು]

Sambhaji Patil

ಸಂಭಾಜಿ ಪಾಟೀಲ ಅವರ ದೂರಿನಂತೆ ಬುಧವಾರ ಮಧ್ಯಾಹ್ನ 12.43ಕ್ಕೆ ಮೊದಲು ಮಿಸ್‌ಕಾಲ್ ಬಂದಿದೆ. ನಂತರ ಎರಡು ಮಿಸ್‌ಕಾಲ್‌ಗಳನ್ನು ನೀಡಿದ ನಂತರ 1 ಗಂಟೆಯಿಂದ 1.40ರ ಅವಧಿಯಲ್ಲಿ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ.

ಸದ್ಯ, ಆಸ್ಟ್ರೇಲಿಯಾದಲ್ಲಿರುವುದಾಗಿ ಪರಿಚಯಿಸಿಕೊಂಡ ರವಿ ಪೂಜಾರಿ, ನೀವು ಮಹಾರಾಷ್ಟ್ರದ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿರುವುದು ನಮಗೆ ತಿಳಿದಿದೆ. 4 ರಿಂದ 5 ಲಕ್ಷ ಹಣವನ್ನು ತಮಗೆ ನೀಡಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಾನೆ.

ಸಂಭಾಜಿ ಪಾಟೀಲ ಅವರು ಈ ಕುರಿತು ಪೊಲೀಸ್ ಆಯುಕ್ತರಾದ ಎಸ್.ರವಿ ಅವರಿಗೆ ದೂರು ನೀಡಿದ್ದಾರೆ. ಹೆಚ್ಚಿನ ರಕ್ಷಣೆ ಬೇಕಿದ್ದರೆ ವ್ಯವಸ್ಥೆ ಮಾಡುತ್ತೇವೆ ಎಂದು ಆಯುಕ್ತರು ಭರವಸೆ ನೀಡಿದ್ದು, ಶಾಸಕರ ಮನೆಗೆ ಪೊಲೀಸ್ ಭದ್ರತೆ ನೀಡಲಾಗಿದೆ. ದೂರವಾಣಿ ಕರೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

English summary
A man claiming to be the underworld don Ravi Pujari, called Belagavi South MLA Sambhaji Patil (MES) and sought financial help on Wednesday. Patil met Belagavi Police Commissioner S. Ravi and registered a complaint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X