ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಮೇಶ್ ಜಾರಕಿಹೊಳಿ, ಶಾಸಕ ಮಹೇಶ್ ಕುಮಟಳ್ಳಿ ಮಾತುಕತೆ: ಆಪರೇಷನ್ ಕಮಲ?

|
Google Oneindia Kannada News

Recommended Video

ಫಾರಿನ್ ಗೆ ಹೋಗಲು ಪಾಸ್ ಪೋರ್ಟ್ ಇಲ್ಲ..! ಅದಕ್ಕೆ ನೀರಿನ ಬಗ್ಗೆ ಚರ್ಚೆ..! Oneindia Kannada

ಬೆಳಗಾವಿ, ಏಪ್ರಿಲ್ 29: ಕಾಂಗ್ರೆಸ್‌ ಭಿನ್ನಮತೀಯ ಶಾಸಕ ರಮೇಶ್ ಜಾರಕಿಹೊಳಿ ಜೊತೆ ಶಾಸಕ ಮಹೇಶ್ ಕುಮಟಳ್ಳಿ ಅವರು ಇಂದು ಮಾತುಕತೆ ನಡೆಸಿದ್ದು, ಇದು ಆಪರೇಷನ್ ಕಮಲದ ಭೇಟಿಯೇ ಎಂಬ ಅನುಮಾನ ಮೂಡುತ್ತಿದೆ.

ಕಾಂಗ್ರೆಸ್‌ಗೆ ರಾಜೀನಾಮೆ ನೀಡಲು ತುದಿಗಾಲಿನಲ್ಲಿ ನಿಂತಿರುವ ರಮೇಶ್ ಜಾರಕಿಹೊಳಿ ಅವರನ್ನು ಮಹೇಶ್ ಕುಮಟಳ್ಳಿ ಅವರು ಭೇಟಿ ಮಾಡಿದ್ದು, ರಮೇಶ್ ಜಾರಕಿಹೊಳಿ ಜೊತೆಗೆ ಅವರ ಬೆಂಬಲಿಗರಾಗಿರುವ ಮಹೇಶ್ ಕುಮಟಳ್ಳಿ ಅವರು ರಾಜೀನಾಮೆ ನೀಡುತ್ತಾರೆಯೇ ಎಂಬ ಅನುಮಾನ ಮೂಡಿಸಿದೆ.

ಮೌನಕ್ಕೆ ಶರಣಾದ ರಮೇಶ್ ಜಾರಕಿಹೊಳಿ, ವಿದೇಶ ಪ್ರವಾಸ?ಮೌನಕ್ಕೆ ಶರಣಾದ ರಮೇಶ್ ಜಾರಕಿಹೊಳಿ, ವಿದೇಶ ಪ್ರವಾಸ?

ಮಹೇಶ್ ಕುಮಟಳ್ಳಿ ಅವರು ರಮೇಶ್ ಜಾರಕಿಹೊಳಿ ಅವರ ಬೆಂಬಲಿಗರಾಗಿದ್ದು, ಈ ಹಿಂದೆ ಕಾಂಗ್ರೆಸ್‌ ಜೊತೆ ಮುನಿಸಿಕೊಂಡು ರಮೇಶ್ ಜಾರಕಿಹೊಳಿ ಅವರು ಮುಂಬೈನ ರೆಸಾರ್ಟ್‌ಗೆ ತೆರಳಿದ್ದಾಗ ಅವರೊಂದಿಗೆ ತೆರಳಿದ್ದ ಶಾಸಕರಲ್ಲಿ ರಮೇಶ್ ಜಾರಕಿಹೊಳಿ ಅವರು ಸಹ ಒಬ್ಬರಾಗಿದ್ದರು.

 MLA Mahesh Kumtalli met dissident MLA Ramesh Jarkiholi

ರಮೇಶ್ ಜಾರಕಿಹೊಳಿ ಅವರು ವಿದೇಶಕ್ಕೆ ಹೊರಡುತ್ತಿದ್ದಾರೆಂಬ ಸುದ್ದಿಯೊಂದು ಸಹ ಹರಿದಾಡುತ್ತಿದ್ದು, ಅವರು ತಮ್ಮೊಂದಿಗೆ ಭಿನ್ನಪತೀಯ ಶಾಸಕರನ್ನು ಕೊಂಡೊಯ್ಯುತ್ತಾರೆ ಎನ್ನಲಾಗಿದೆ. ಹಾಗಾಗಿಯೇ ಮಹೇಶ್ ಕುಮಟಳ್ಳಿ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ.

ರಾಜೀನಾಮೆ ಬಗ್ಗೆ ಶಾಸಕ ಶ್ರೀಮಂತ ಪಾಟೀಲ್ ಹೇಳಿದ್ದೇನು?ರಾಜೀನಾಮೆ ಬಗ್ಗೆ ಶಾಸಕ ಶ್ರೀಮಂತ ಪಾಟೀಲ್ ಹೇಳಿದ್ದೇನು?

ರಮೇಶ್ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಮಹೇಶ್ ಕುಮಟಳ್ಳಿ, ಫಾರಿನ್‌ಗೆ ಹೋಗಲು ನನ್ನ ಬಳಿ ಪಾಸ್‌ಪೋರ್ಟ್‌ ಇಲ್ಲ ಎಂದು ಸಿಟ್ಟಿನಿಂದ ಪ್ರತಿಕ್ರಿಯಿಸಿದ್ದಾರೆ. ರಮೇಶ್ ಅವರನ್ನು ಭೇಟಿಯಾಗಿ ನಮ್ಮ ಭಾಗಕ್ಕೆ ಕೃಷ್ಣ ನದಿ ನೀರು ಹೇಗೆ ತರುವುದೆಂದು ಚರ್ಚೆ ಮಾಡಿದ್ದೇನೆ ಎಂದರು.

English summary
Congress MLA Mahesh Kumathalli met dissident MLA Ramesh Jarkiholi. He said we met to discuss development programs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X