ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

SSLC ವಿದ್ಯಾರ್ಥಿಗಳಿಗೆ ಹೆಲ್ತ್ ಕಿಟ್ ನೀಡಿ ಶುಭ ಕೋರಿದ ಶಾಸಕಿ ಅಂಜಲಿ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜೂನ್ 25: ತಮ್ಮ ಖಾನಾಪುರ ಕ್ಷೇತ್ರದ ಮಕ್ಕಳು ಆರೋಗ್ಯಕರವಾಗಿ ಇರಬೇಕು, ಕೊರೊನಾ ವೈರಸ್ ಸೋಂಕಿನಿಂದ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿತಾಯಿ ನಿಂಬಾಳ್ಕರ್ ಅವರು, ಸಾವಿರಾರು ಹೆಲ್ತ್ ಕಿಟ್ ಗಳನ್ನು ಕ್ಷೇತ್ರದ ಎಲ್ಲ SSLC ಪರೀಕ್ಷಾ ಕೇಂದ್ರಗಳಲ್ಲಿ ಕಿಟ್ ಗಳನ್ನು ಹಂಚಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

Recommended Video

SSLC Exam : Students reached 3 hours earlier to the examination center | Oneindia Kannada

MBBS ಪದವೀಧರೆ ಆಗಿರುವ ಡಾಕ್ಟರ್ ಅಂಜಲಿತಾಯಿ ಕೊರೊನಾ ವೈರಸ್ ಸೊಂಕಿನ ಕುರಿತು ಕ್ಷೇತ್ರದಲ್ಲಿ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ, ಕ್ಷೇತ್ರದ ಜನರಿಗೆ ಉಚಿತವಾಗಿ ಮಾಸ್ಕ್ ಹಂಚಿಕೆ ಮಾಡಿದ್ದರು.

ಬೆಳಗಾವಿ; ಕೊನೆ ಕ್ಷಣದಲ್ಲಿ sslc ಪರೀಕ್ಷಾ ಕೇಂದ್ರದ ಬದಲಾವಣೆಬೆಳಗಾವಿ; ಕೊನೆ ಕ್ಷಣದಲ್ಲಿ sslc ಪರೀಕ್ಷಾ ಕೇಂದ್ರದ ಬದಲಾವಣೆ

ಅಂಜಲಿತಾಯಿ ಕ್ಷೇತ್ರದಲ್ಲಿ ಮಾಡುತ್ತಿರುವ ಹೆಲ್ತ್ ಕೇರ್ ಕಾರ್ಯಕ್ರಮಗಳಿಂದಾಗಿ ಕ್ಷೇತ್ರದ ಜನರು ಅವರನ್ನು ಅಂಜಲಿತಾಯಿ MBBS ಎಂದೇ ಕರೆಯಲು ಶುರು ಮಾಡಿದ್ದಾರೆ‌.

MLA Anjali Nimbalkar Wishes To SSLC Students

ಡಾ.ಅಂಜಲಿತಾಯಿ ಫೌಂಡೇಶನ್ ವತಿಯಿಂದ, 18,000-ಸಾಬೂನುಗಳು, 9,000-ಮಾಸ್ಕ್ ಗಳು, 4,500-ಸ್ಯಾನಿಟೈಜರ್, 4,500- ಕಂಪಾಸ್ ಬಾಕ್ಸ್ ಗಳು ಹೊಂದಿರುವ 4500 ಹೆಲ್ತ್ ಕಿಟ್ ಗಳು ಖಾನಾಪೂರ ಕ್ಷೇತ್ರದ SSLC ಪರೀಕ್ಷಾ ಕೇಂದ್ರಗಳಲ್ಲಿ ಬಟವಡೆಯಾಗಿವೆ.

SSLC ಪರೀಕ್ಷೆ ಸುದ್ದಿಗೋಷ್ಠಿ: ವಿದ್ಯಾರ್ಥಿಗಳು ತಿಳಿಯಬೇಕಾದ ವಿಷಯಗಳುSSLC ಪರೀಕ್ಷೆ ಸುದ್ದಿಗೋಷ್ಠಿ: ವಿದ್ಯಾರ್ಥಿಗಳು ತಿಳಿಯಬೇಕಾದ ವಿಷಯಗಳು

ವಿದ್ಯಾರ್ಥಿಗಳಿಗೆ ಕಿಟ್ ಗಳನ್ನು ಪರೀಕ್ಷಾ ಕೇಂದ್ರದ ಹೊರಗಡೆ ಡಾ.ಅಂಜಲಿತಾಯಿ ಫೌಂಡೇಶನ್ ಕಾರ್ಯಕರ್ತರು ಪರೀಕ್ಷೆ ಬರೆಯುವ ಎಲ್ಲ ವಿಧ್ಯಾರ್ಥಿಗಳಿಗೆ ನೀಡಿ, ಎಲ್ಲ ವಿದ್ಯಾರ್ಥಿಗಳಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಶುಭಕೋದರು.

English summary
Anjali Nimbalkar, a MLA from Khanapur constituency, congratulated thousands of SSLC Students and Donate health kits at the Exam centers in the constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X