• search
 • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಮಹಾ' ಸಚಿವರು ಬರ್ತಾರೆ ಅಂತಾ ಕನ್ನಡವನ್ನೆ ಮರೆತ ರಾಜ್ಯದ ಸಚಿವ

By ಬೆಳಗಾವಿ ಪ್ರತಿನಿಧಿ
|

ಬೆಳಗಾವಿ, ಆಗಸ್ಟ್ 04: ಮಹಾರಾಷ್ಟ್ರದ ಸಚಿವರು ಬರುತ್ತಾರೆ ಎಂದು ರಾಜ್ಯದ ಸಚಿವರೊಬ್ಬರು ಕನ್ನಡವನ್ನೆ ಮರೆತಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನಲ್ಲಿ ನಡೆದಿದೆ.

   ಸರ್ಕಾರಿ ಆಸ್ಪತ್ರೆಗಳ ಮೇಲೆ ಸಿದ್ದರಾಮಯ್ಯ, ಯಡಿಯೂರಪ್ಪ ಇಬ್ಬರಿಗೂ ನಂಬಿಕೆ ಇಲ್ಲ | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ರಾಜ್ಯದ ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ್ ಅವರು ಕರ್ನಾಟಕದ ಸಚಿವರಾದರೂ, ಕನ್ನಡ ಭಾಷೆಯನ್ನೆ ಮರೆತಂತಿದೆ. ಅಲ್ಲದೇ ರಾಜ್ಯ ಮತ್ತು ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಇದ್ದರೂ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರವೂ ಇಲ್ಲದೆ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ.

   ಗೋಕಾಕ್ ಉಪಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಆರೋಪ; ಬಿಎಸ್ ‌ವೈಗೆ ಮತ್ತೆ ಸಂಕಷ್ಟ

   ಅಥಣಿ ತಾಲೂಕಿನ ಬಾಳೆಗೇರಿ ಗ್ರಾಮದಲ್ಲಿ ಬಸವೇಶ್ವರ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಕ್ರಮ ಆಯೋಜಿಸಲಾಗಿದೆ.

   ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಕೃಷಿ ಸಚಿವ ವಿಶ್ವಜೀತ ಕದಂ, ಎಂಎಲ್ಸಿ ಮೋಹನರಾವ್ ಕದಂ ಭಾಗಿಯಾಗಿದ್ದರು. ರಾಜ್ಯ ಸರ್ಕಾರದ ಸಚಿವರೊಬ್ಬರು ಭಾಗಿಯಾದ, ಕರ್ನಾಟಕದಲ್ಲಿಯೇ ಈ ಕಾರ್ಯಕ್ರಮ ಆಯೋಜನೆಯಾದರೂ ಸಹ ಕನ್ನಡ ಬ್ಯಾನರ್ ಇರಲಿಲ್ಲ ಎಂಬುದು ಕನ್ನಡದ ಶೋಚನೀಯ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

   English summary
   Minister Shrimanta Patil violated the Covid rule without a mask and no social gap.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X