ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಜನರಿಗೆ ಪ್ರಚೋದನೆ ಮಾಡಿ ಅಧಿಕಾರಕ್ಕೆ ಬರೋದು ಶಿವಸೇನೆ ಅಜೆಂಡಾ''

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜನವರಿ 27: ಮಹಾರಾಷ್ಟ್ರ ಸಿಎಂ ‌ಉದ್ಧವ್ ಠಾಕ್ರೆ ಪ್ರಚೋದನಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಜನರ ಪ್ರಚೋದನೆ ಮಾಡಿ ಅಧಿಕಾರಕ್ಕೆ ಬರೋದು ಶಿವಸೇನೆ ಅಜೆಂಡಾ ಎಂದು ಹೇಳಿದರು.

ಬೆಳಗಾವಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಅವರ ಬಗ್ಗೆ ಚರ್ಚೆ ಮಾಡಬೇಡಿ ಅಂತಾ ಬಹಳ ಸಾರಿ ಮನವಿ ಮಾಡಿದ್ದೇನೆ. ಶಿವಸೇನೆ ಜನಪ್ರಿಯತೆ ಕುಗ್ಗುತ್ತಿದೆ, ಅವರಿಂದ ಯಾವ ಅಭಿವೃದ್ಧಿ ಕಾರ್ಯ ಇಲ್ಲ, ಏನೂ ಇಲ್ಲ ಎಂದರು.

ಮತ್ತೆ ಗಡಿ ಕಿಡಿ ಹೊತ್ತಿಸಲು ಮುಂದಾದ ಮತ್ತೆ ಗಡಿ ಕಿಡಿ ಹೊತ್ತಿಸಲು ಮುಂದಾದ "ಮಹಾ' ಸರ್ಕಾರ: ವಿವಾದಿತ ಪುಸ್ತಕ ಬಿಡುಗಡೆ

ಶಿವಸೇನೆಯ ಜನಪ್ರಿಯತೆ ಕುಗ್ಗುತ್ತಿರುವುದಕ್ಕೆ ಗಡಿ ವಿವಾದವನ್ನು ಇಶ್ಯೂ ಮಾಡಿ ಜನರ ಮನಸ್ಸು ಕನ್ವರ್ಟ್ ಮಾಡಲು ಯತ್ನಿಸುತ್ತಿದ್ದಾರೆ. ಎಲ್ಲಾ ಜಾತಿ, ಭಾಷೆಯವರನ್ನು ಪ್ರೀತಿಸಿ ಗೆಲ್ಲೋದು ಕರ್ನಾಟಕ ರಾಜ್ಯ. ನಮ್ಮಲ್ಲಿ ಭೇದ-ಭಾವ, ದ್ವೇಷ ಇಲ್ಲ ಎಂದು ಸಚಿವ ಜಾರಕಿಹೊಳಿ ತಿಳಿಸಿದರು.

ಉದ್ಧವ್ ಠಾಕ್ರೆ ಎಲ್ಲಾ ಹಂತದಲ್ಲಿ ಫೇಲ್ ಆಗಿದ್ದಾರೆ

ಉದ್ಧವ್ ಠಾಕ್ರೆ ಎಲ್ಲಾ ಹಂತದಲ್ಲಿ ಫೇಲ್ ಆಗಿದ್ದಾರೆ

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಎಲ್ಲಾ ಹಂತದಲ್ಲಿ ಫೇಲ್ ಆಗಿದ್ದಾರೆ, ಗಡಿ ವಿವಾದ ಇಶ್ಯೂ ಮಾಡಿ ಎಮೋಷನಲ್ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಹೀಗಾಗಿ ಅವರ ಹೇಳಿಕೆಗೆ ಮಹತ್ವ ಕೊಡಬೇಡಿ ಎಂದು ಮತ್ತೊಮ್ಮೆ ಹೇಳಿದರು. ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂಬ ಉದ್ಧವ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ರಮೇಶ್ ಜಾರಕಿಹೊಳಿ, ಈಗಾಗಲೇ ಮಹಾಜನ್ ವರದಿ ಒಪ್ಪಿ ಆಗಿದೆ, ಅದರ ಬಗ್ಗೆ ಚರ್ಚೆ ಬೇಡ ಎಂದರು.

ಗಡಿ ಉಸ್ತುವಾರಿ ಸಚಿವರ ನೇಮಕದ ಜರೂರತ್ ಇಲ್ಲ

ಗಡಿ ಉಸ್ತುವಾರಿ ಸಚಿವರ ನೇಮಕದ ಜರೂರತ್ ಇಲ್ಲ

ಮಹಾರಾಷ್ಟ್ರದಲ್ಲಿ ಇಬ್ಬರು ಗಡಿ ಉಸ್ತುವಾರಿ ಸಚಿವರ ನೇಮಕ ಹಿನ್ನೆಲೆ, ಕರ್ನಾಟಕದಲ್ಲೂ ನೇಮಕಕ್ಕೆ ಆಗ್ರಹ ವಿಚಾರವಾಗಿ, ""ಕರ್ನಾಟಕದಲ್ಲಿ ಗಡಿ ಉಸ್ತುವಾರಿ ಸಚಿವರ ನೇಮಕದ ಜರೂರತ್ ಇಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಬೇಜವಾಬ್ದಾರಿ ಹೇಳಿಕೆ ನೀಡಿದರು. ನಾವು 34 ಸಚಿವರೆಲ್ಲರೂ ಸಮರ್ಥರಿದ್ದೇವೆ, ಬೆಳಗಾವಿ ಅಷ್ಟೇ ಅಲ್ಲ, ಎಲ್ಲಾ ಗಡಿ ವಿಚಾರವಾಗಿ ನಾವು ಬದ್ಧರಿದ್ದೇವೆ. ನಮ್ಮ ಸಿಎಂ ಬಿಎಸ್‌ವೈ ಅವರೂ ಸಮರ್ಥರಿದ್ದಾರೆ ಎಂದು ಸಮರ್ಥಿಸಿಕೊಂಡರು.

ಗಡಿ ವಿವಾದ; ಮತ್ತೊಂದು ಆಗ್ರಹ ಮುಂದಿಟ್ಟ ಮಹಾರಾಷ್ಟ್ರ ಸಿಎಂಗಡಿ ವಿವಾದ; ಮತ್ತೊಂದು ಆಗ್ರಹ ಮುಂದಿಟ್ಟ ಮಹಾರಾಷ್ಟ್ರ ಸಿಎಂ

ನೀವೇನೂ ಚಿಂತೆ ಮಾಡಬೇಡಿ

ನೀವೇನೂ ಚಿಂತೆ ಮಾಡಬೇಡಿ

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಬಗ್ಗೆ ಪುಸ್ತಕ ಬಿಡುಗಡೆ ವಿಚಾರಕ್ಕೂ ಮಹತ್ವ ಕೊಡೋದು ಬೇಡ. ಅವರ ಹಕ್ಕು ಇದೆ ಅವರು ಮಾಡ್ತಾರೆ,‌ ಮಾಡಲಿ ಬಿಡ್ರಿ. ಶಿವಸೇನೆ ಅಜೆಂಡಾನೇ ಅದು, ನಮ್ಮದು ರಾಜ್ಯದ ಅಭಿವೃದ್ಧಿ ಅಜೆಂಡಾ. ಕೇಂದ್ರ ಮಟ್ಟದಲ್ಲಿ ನಮ್ಮ ವಾದ ಮಂಡನೆಗೆ ನಾವು ಸಮರ್ಥರಿದ್ದೇವೆ. ನೀವೇನೂ ಚಿಂತೆ ಮಾಡಬೇಡಿ, ನಿಮ್ಮ ಕಳಕಳಿ ಬಗ್ಗೆ ಗೊತ್ತಾಗುತ್ತದೆ ಎಂದು ಹೇಳಿದರು.

ಬಂದಾಗ ನೋಡೋಣ

ಬಂದಾಗ ನೋಡೋಣ

ಎಂಇಎಸ್ ಮಾಜಿ ಶಾಸಕ ಅರವಿಂದ ಪಾಟೀಲ್ ಮುಂಬೈನ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಕುರಿತು, ಅದರ ಬಗ್ಗೆ ಚರ್ಚೆ ಬೇಡ. ಅರವಿಂದ ಪಾಟೀಲ್ ಬಿಜೆಪಿ ಬರಬಹುದು ಎಂದು ಹೇಳಿಕೆ ನೀಡಿದ್ದ ಪ್ರಶ್ನೆಗೆ, ಬಿಜೆಪಿಗೆ ಬಂದ್ರೆ ಸ್ವಾಗತ ಅಂತಾ ಆಗ ಹೇಳಿದ್ದೆ, ಅರವಿಂದ ಪಾಟೀಲ್ ಬಂದಾಗ ನೋಡೋಣ ಎಂದು ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಉತ್ತರಿಸಿದರು.

English summary
"Shiv Sena is decreasing popularity and is trying to convert people's minds by issuing a border dispute," Minister Ramesh Jarakiholi said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X