• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೋವಾ ಸಿಎಂ ಪ್ರಮೋದ್ ಸಾವಂತ್‌ಗೆ ರಮೇಶ್ ಜಾರಕಿಹೊಳಿ ಸವಾಲ್

By ಬೆಳಗಾವಿ ಪ್ರತಿನಿಧಿ
|

ಬೆಳಗಾವಿ, ನವೆಂಬರ್ 30: ಕರ್ನಾಟಕದಿಂದ ಮಹದಾಯಿ ನದಿ ತಿರುವು ಮಾಡಲಾಗಿದೆ ಎಂಬ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರ ಆರೋಪಕ್ಕೆ ಕರ್ನಾಟಕ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

ಗೋವಾ ಸಿಎಂ ಮಹದಾಯಿ ಹೇಳಿಕೆ ವಿಚಾರವಾಗಿ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ರಮೇಶ್ ಜಾರಕಿಹೊಳಿ, ಮಹದಾಯಿ ನದಿ ನೀರು ತಿರುವು ಮಾಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.

ಮೇಲಿಂದ ಮೇಲೆ ದೆಹಲಿಗೆ ಹೋಗಬೇಕಾಗುತ್ತದೆ: ರಮೇಶ್ ಜಾರಕಿಹೊಳಿ

ಮಹದಾಯಿ ನದಿ ನೀರು ತಿರುವು ಮಾಡಿದ್ದರಿಂದ ನೀರಿನ ಮಟ್ಟ ಕಡಿಮೆ ಎಂಬ ಗೋವಾ ಸಿಎಂ ಪ್ರಮೋದ್ ಸಾವಂತ್ ಆರೋಪಕ್ಕೆ ಸಚಿವ ರಮೇಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

ಗೋವಾ ಸಿಎಂಗೆ ಆಹ್ವಾನ ಮಾಡುತ್ತೇನೆ, ಅವರು ಬಂದು ಕಾಮಗಾರಿ ಸ್ಥಳ ನೋಡಲಿ ಎಂದು ಬೆಳಗಾವಿಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಮಹದಾಯಿ ನದಿಗೆ ಅಡ್ಡಲಾದ ಗೋಡೆ ಟಚ್ ಮಾಡಿದ್ದರೆ ರಾಜೀನಾಮೆ ಕೊಡ್ತೀನಿ, ಮಹದಾಯಿ ವಿಚಾರದಲ್ಲಿ ಗೋವಾ ಸಿಎಂರಿಂದ ಗಿಮಿಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

ಭಾನುವಾರ ಸಿಎಂ ಬಿ.ಎಸ್ ಯಡಿಯೂರಪ್ಪ ಅವರೂ ಕೂಡಾ ಈ ವಿಚಾರವಾಗಿ ಗೋವಾ ಸಿಎಂ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದ್ದರು.

English summary
Karnataka Water Resources Minister Ramesh Jarakiholi has reacted about Goa CM Pramod Sawant of making a fake allegation on Mahadayi Issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X