ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದುವೆಯಲ್ಲಿ ಕನ್ನಡ ಗೀತೆ ಹಾಕಿದ್ದಕ್ಕೆ ಕನ್ನಡಿಗರ ಮೇಲೆ ಎಂಇಎಸ್‌ ಕಾರ್ಯಕರ್ತರಿಂದ ಹಲ್ಲೆ

|
Google Oneindia Kannada News

ಬೆಳಗಾವಿ, ಮೇ 27: ವಿವಾಹ ಸಮಾರಂಭವೊಂದರಲ್ಲಿ ಕನ್ನಡ ಹಾಡನ್ನು ಹಾಕಿದ್ದಕ್ಕೆ ನವ ದಂಪತಿ ಸೇರಿದಂತೆ ಸಮಾರಂಭದಲ್ಲಿದ್ದ ಹಲವರ ಮೇಲೆ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ಹಲ್ಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಧಾಮನೆ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

ಘಟನೆಯಲ್ಲಿ ವರ ಸಿದ್ದು ಸೈಬಣ್ಣವರ್, ವಧು ರೇಷ್ಮಾ, ವರನ ತಮ್ಮ ಭರಮಾ ಸೇರಿ ಐವರ ಮೇಲೆ ಹಲ್ಲೆಗೊಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಎಂಇಎಸ್‌ ನಿಷೇಧಿಸುವಂತೆ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಒತ್ತಾಯರಾಜ್ಯದಲ್ಲಿ ಎಂಇಎಸ್‌ ನಿಷೇಧಿಸುವಂತೆ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಒತ್ತಾಯ

ಧಾಮನೆ ಗ್ರಾಮದಲ್ಲಿ ವಿವಾಹ ನಡೆಯುತ್ತಿತ್ತು. ರಾತ್ರಿ ಬ್ಯಾಂಡ್‌ ಮೆರವಣಿಗೆ ಮೂಲಕ ವಧು-ವರನನ್ನು ಕುಟುಂಬಸ್ಥರು ಮನೆಗೆ ಕರೆದೊಯ್ಯುತ್ತಿದ್ದರು. ಕನ್ನಡ ಬಾವುಟ ಹಿಡಿದುಕೊಂಡು ಕನ್ನಡ ಗೀತೆಗಳಿಗೆ ಸಂಭ್ರಮದಿಂದ ಕುಣಿಯುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಎಂಇಎಸ್‌ ಕಾರ್ಯಕರ್ತರು ಖ್ಯಾತೆ ತೆಗೆದು ಹಲ್ಲೆ ಮಾಡಿದರು, ಪೊಲೀಸರಿಗೆ ದೂರು ನೀಡಿದರೂ ಅವರು ಸ್ಪಂದಿಸುತ್ತಿಲ್ಲ ಎಂದು ಗಾಯಗೊಂಡವರು ಆರೋಪಿಸಿದ್ದಾರೆ.

MES activists Assaulted on Kannadigas for Playing Kannada Song During Marriage Event

10 ಮಂದಿಯ ವಿರುದ್ಧ ಪ್ರಕರಣ
ವಿವಾಹದ ಮೆರವಣಿಗೆಯಲ್ಲಿ ಕನ್ನಡ ಧ್ವಜ ಹಾಡಿಗೆ ನೃತ್ಯ ಮಾಡಿದ್ದಕ್ಕೆ ಎಂಇಎಸ್ ಕಾರ್ಯಕರ್ತರು ಕಿರಿಕ್ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ 10 ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಚೆನ್ನಮ್ಮನ ಫಲಕ ಹಾಕಿದ್ದಕ್ಕೆ ಗಲಾಟೆ
ಕನ್ನಡ ಧ್ವಜ ಹಿಡಿದು ನಾವು ಡ್ಯಾನ್ಸ್ ಮಾಡುತ್ತಿದ್ದೆವು, ಎಂಇಎಸ್‌ನವರು ನಮ್ಮನ್ನ ಪಕ್ಕಕ್ಕೆ ಕರೆದು ಗಲಾಟೆ ಶುರುಮಾಡಿದರು. ದೊಣ್ಣೆಗಳಿಂದ ಹೊಡೆದರು. ನಮ್ಮ ಮನೆಯ ಮುಂದೆ ಕಿತ್ತೂರು ರಾಣಿ ಚೆನ್ನಮ್ಮನ ಫಲಕ ಹಾಕಿದ್ದೇವೆ, ಈ ಕಾರಣಕ್ಕೆ ಪದೇ ಪದೇ ಗಲಾಟೆ ಮಾಡುತ್ತಿದ್ದಾರೆ. ಅಜಯ್ ಯಳ್ಳೂರಕರ, ಮಹೇಶ ಯಳ್ಳೂರಕರ, ಆಕಾಶ್ ಚೌಗುಲೆ ಎಂಬುವವರು
ಎರಡು ತಿಂಗಳ ಹಿಂದೆ ನನ್ನ ಗಾಡಿಯನ್ನು ಸುಟ್ಟಿದ್ದಾರೆ. ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ವರನ ತಮ್ಮ ಭರಮಾ ಸೈಬಣ್ಣ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.

ಲೋಕಸಭೆ ಚುನಾವಣೆ: ತೃತೀಯ ರಂಗದತ್ತ ಜೆಡಿಎಸ್ ಉತ್ಸುಕ

ಎಂಇಎಸ್‌ ಕಾರ್ಯಕರ್ತರು ಕನ್ನಡ ಧ್ವಜದ ವಿಚಾರವಾಗಿ ಗಲಾಟೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಬೆಳಗಾವಿ ಅಧಿವೇಶನ ವೇಳೆ ಬೈಕ್‌ಗೆ ಬೆಂಕಿ ಹಚ್ಚಿದ್ದರು, ಕನ್ನಡ ಫಲಕಗಳನ್ನು ತೆಗೆದು ಮರಾಠಿ ಫಲಕಗಳನ್ನು ಹಾಕಿ ಗಲಾಟೆ ಮಾಡಿದ್ದರು. ರಾಣಿ ಚನ್ನಮ್ಮ ನಗರ ಎನ್ನುವ ಕೈಬರಹದ ಫಲಕದ ಎದುರು ಧರ್ಮವೀರ ಸಂಭಾಜಿನಗರ ಎಂಬ ಫಲಕವನ್ನಾಕಿ ಉದ್ಧಟತನ ಮೆರೆದಿದ್ದರು.

(ಒನ್ಇಂಡಿಯಾ ಸುದ್ದಿ)

English summary
MES activists on May 26th attacked a marriage hall where Kannada song was played. They assaulted on several people including bride and grooms. This incident reported from Belagavi taluk Dhamane village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X