ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಸರು ಬಹಿರಂಗಪಡಿಸಿದ್ದಕ್ಕೆ ಬೆಳಗಾವಿ ಪಾಲಿಕೆ ವಿರುದ್ಧ ದೂರು ನೀಡಲು ಮುಂದಾದ ಮರಾಠಿ ಸಾಹಿತಿ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜುಲೈ 2: ಬೆಳಗಾವಿಯಲ್ಲಿ ಸಾವನ್ನಪ್ಪಿದ ತಾಯಿಯ ಅಂತ್ಯಕ್ರಿಯೆಯನ್ನು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಮುಗಿಸಿ ಬೆಳಗಾವಿಗೆ ಮರಳಿ ಬಂದು, ಬೆಳಗಾವಿ ನಗರದ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ಆಗಿರುವ ಪ್ರಸಿದ್ಧ ಮರಾಠಿ ಸಾಹಿತಿಯೊಬ್ಬರು ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.

ಕೊಲ್ಹಾಪೂರ ಜಿಲ್ಲಾಧಿಕಾರಿಗಳು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರವನ್ನು ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಲೀಕ್ ಮಾಡಿದ್ದರಿಂದ ಸಾರ್ವಜನಿಕವಾಗಿ ಅವಮಾನವಾಗಿದ್ದು, ಕೂಡಲೇ ಪತ್ರವನ್ನು ಬಹಿರಂಗ ಪಡಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಬೆಳಗಾವಿಯ ಪ್ರಸಿದ್ಧ ಮರಾಠಿ ಸಾಹಿತಿ ಈಗ ಪೊಲೀಸರ ಮೊರೆ ಹೋಗಿದ್ದಾರೆ.

ಕೊರೊನಾ ನಡುವೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲೊಂದು ಅಮಾನವೀಯ ಘಟನೆಕೊರೊನಾ ನಡುವೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲೊಂದು ಅಮಾನವೀಯ ಘಟನೆ

ಇಪ್ಪತ್ತು ದಿನಗಳ ಹಿಂದೆ ಬೆಳಗಾವಿಯ ಮರಾಠಿ ಸಾಹಿತಿಯಿಬ್ಬರ ತಾಯಿ ನಿಧನರಾಗಿದ್ದರು, ತಾಯಿಯ ಪಾರ್ಥೀವ ಶರೀರವನ್ನು ಆ್ಯಂಬುಲೆನ್ಸ್ ನಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಮುಗಿಸಿ ಅದೇ ಆ್ಯಂಬುಲೆನ್ಸ್ ನಲ್ಲಿ ಮರಳಿ ಬೆಳಗಾವಿಗೆ ಮರಳಿದ್ದರು.

Belagavi: Marathi Writer Who Is Under Quarantine Names, Addresses Made Public

ತಾಯಿಯ ಅಂತ್ಯಕ್ರಿಯೆ ಮುಗಿಸಿ ಬೆಳಗಾವಿಗೆ ಮರಳಿದ ಬಳಿಕ ಸರ್ಕಾರದ ಮಾರ್ಗಸೂಚಿಯಂತೆ ಬೆಳಗಾವಿಯ ಈ ಮರಾಠಿ ಸಾಹಿತಿ ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆಗೆ ಮಾಡಿಸಿಕೊಂಡಿದ್ದರು.

ತಾಯಿಯ ಅಂತ್ಯಕ್ರಿಯ ಮುಗಿದ ಇಪ್ಪತ್ತು ದಿನಗಳ ಬಳಿಕ ಕೊಲ್ಹಾಪುರದಲ್ಲಿದ್ದ ಬೆಳಗಾವಿ ಸಾಹಿತಿಯ ಸಹೋದರನಿಗೆ ಕೊರೊನಾ ವೈರಸ್ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಕೊಲ್ಲಾಪುರ ಜಿಲ್ಲಾಧಿಕಾರಿಗಳು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಬೆಳಗಾವಿಯ ಮರಾಠಿ ಸಾಹಿತಿಯ ಮೇಲೆ ನಿಗಾ ಇಡುವಂತೆ ಕೋರಿದ್ದರು.

ಕೊರೊನಾ ಭಯದ ನಡುವೆ ಸರ್ಕಾರದ ವಿರುದ್ಧ ಜನರ ಪ್ರತಿಭಟನೆಕೊರೊನಾ ಭಯದ ನಡುವೆ ಸರ್ಕಾರದ ವಿರುದ್ಧ ಜನರ ಪ್ರತಿಭಟನೆ

ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಕೊಲ್ಹಾಪುರದಿಂದ ಬಂದ ಈ ಪತ್ರ ಬೆಳಗಾವಿ ಮಹಾನಗರ ಪಾಲಿಕೆಗೆ ಕಳಿಸಲಾಗಿತ್ತು. ಈ ಪತ್ರದಲ್ಲಿ ಸಾಹಿತಿಯ ಹೆಸರು, ವಿಳಾಸ ಎಲ್ಲವನ್ನೂ ನಮೂದಿಸಲಾಗಿತ್ತು.

ಈ ಪತ್ರ ಸಾಮಾಜಿಕ ಮಾಧ್ಯಮದಲ್ಲಿ ಕಳೆದ ಎರಡು ದಿನಗಳಿಂದ ವೈರಲ್ ಆಗಿತ್ತು. ಬೆಳಗಾವಿಯ ಶಹಾಪುರ ಪ್ರದೇಶದಲ್ಲಿ ನೆಲೆಸಿರುವ ಈ ಮರಾಠಿ ಸಾಹಿತಿಯನ್ನು ಈಗ ಬೆಳಗಾವಿಯ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಕ್ವಾರಂಟೈನ್ ನಲ್ಲಿರುವ ಪ್ರಸಿದ್ಧ ಮರಾಠಿ ಸಾಹಿತಿ ಈಗ ಬೆಳಗಾವಿ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ""ನನ್ನ ಹೆಸರು ಮತ್ತು ವಿಳಾಸ ನಮೂದಿಸಿರುವ ಪತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಕಾರಣ ನನಗೆ ಮತ್ತು ನನ್ನ ಕುಟುಂಬದವರಿಗೆ ಸಾಮಾಜಿಕವಾಗಿ ಅವಮಾನವಾಗಿದೆ.

ಈ ಪತ್ರವನ್ನು ಬಹಿರಂಗ ಪಡಿಸಿದವರ ವಿರುದ್ಧ ಕ್ರಮ ಜರುಗಿಸುವಂತೆ ಮರಾಠಿ ಸಾಹಿತಿ ಈಗ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಕ್ವಾರಂಟೈನ್ ನಲ್ಲಿ ಇದ್ದುಕೊಂಡೆ ಬೆಳಗಾವಿಯ ಮರಾಠಿ ಸಾಹಿತಿ ತಮಗಾಗಿರುವ ಸಾಮಾಜಿಕ ಅವಮಾನದ ವಿರುದ್ಧ ಸಮರ ಸಾರಿದ್ದಾರೆ.

English summary
A well-known Marathi writer, a quarantine at a hotel in Belagavi, has come forward to file a complaint against the Mahanagara Palike Officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X