ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಮಹಾರಾಷ್ಟ್ರಕ್ಕೆ; ಸರ್ಕಾರಿ ಬಸ್ ಮೇಲೆ ಮರಾಠಿ ಪೋಸ್ಟರ್

|
Google Oneindia Kannada News

ಬೆಳಗಾವಿ, ಜನವರಿ 29: ಕರ್ನಾಟಕ, ಮಹಾರಾಷ್ಟ್ರ ನಡುವಿನ ಗಡಿ ವಿವಾದದ ಬಗ್ಗೆ ಬಾರೀ ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿಯೇ ಕಿಡಿಗೇಡಿಗಳು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಿಂಬದಿಯಲ್ಲಿ ಮರಾಠಿ ಪೋಸ್ಟರ್ ಅಂಟಿಸಿದ್ದಾರೆ.

'ಬೆಳಗಾವಿ, ನಿಪ್ಪಾಣಿ, ಕಾರವಾರ ಸೇರಿ ಸಂಯುಕ್ತ ಮಹಾರಾಷ್ಟ್ರ ಆಗುವುದು' ಎಂಬ ಮರಾಠಿ ಭಾಷೆಯ ಪೋಸ್ಟರ್ ಶುಕ್ರವಾರ ಬಸ್ ಹಿಂಭಾಗದಲ್ಲಿ ಕಂಡು ಬಂದಿದೆ. ಬೆಳಗಾವಿ-ಪುಣೆ ಮಾರ್ಗದಲ್ಲಿ ಸಂಚಾರ ನಡೆಸುವ ಬಸ್‌ಗೆ ಪೋಸ್ಟರ್ ಅಂಟಿಸಲಾಗಿದ್ದು, ಇದರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯಾರಪ್ಪಂದ ಏನೈತಿ ಬೆಳಗಾವಿ ಜೊತೆ ಮುಂಬೈ ಸಹ ನಮ್ದೈತಿಯಾರಪ್ಪಂದ ಏನೈತಿ ಬೆಳಗಾವಿ ಜೊತೆ ಮುಂಬೈ ಸಹ ನಮ್ದೈತಿ

Marathi Poster Found In NWKRTC Bus

ರಾಷ್ಟ್ರವಾದಿ ಕಾಂಗ್ರೆಸ್ ಪಾರ್ಟಿ ಪುಣೆ ಹೆಸರಿನಲ್ಲಿ ಪೋಸ್ಟರ್ ಬರೆಯಲಾಗಿದೆ. ಇನ್ನೂ ಕೆಲವು ಬಸ್‌ಗಳ ಮೇಲೆ ಈ ರೀತಿಯ ಪೋಸ್ಟರ್ ಪತ್ತೆಯಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಕಿಡಿಗೇಡಿಗಳು ಬೇಕೆಂದೇ ಇಂತಹ ಪೋಸ್ಟರ್ ಹಚ್ಚಿರುವ ಸಾಧ್ಯತೆ ಇದೆ.

ಯಡಿಯೂರಪ್ಪ ಮುಂದೆ ಹೊಸ ಬೇಡಿಕೆ ಇಟ್ಟ ಮರಾಠ ಸಮುದಾಯ ಯಡಿಯೂರಪ್ಪ ಮುಂದೆ ಹೊಸ ಬೇಡಿಕೆ ಇಟ್ಟ ಮರಾಠ ಸಮುದಾಯ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಕಳೆದ ವಾರ, "ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುತ್ತೇವೆ" ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಕರ್ನಾಟಕದಲ್ಲಿ ಬಾರೀ ವಿರೋಧ ವ್ಯಕ್ತವಾಗಿತ್ತು.

ಸುವರ್ಣಸೌಧವನ್ನು ಮರಾಠ ಶ್ರೀಮಂತರಿಗೆ ಮಾರುತ್ತಾರೆ: ವಾಟಾಳ್ಸುವರ್ಣಸೌಧವನ್ನು ಮರಾಠ ಶ್ರೀಮಂತರಿಗೆ ಮಾರುತ್ತಾರೆ: ವಾಟಾಳ್

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ 50 ವರ್ಷ ಹಳೆಯ ಸಾಕ್ಷ್ಯಚಿತ್ರವನ್ನು ಗುರುವಾರ ಬಿಡುಗಡೆ ಮಾಡಲಾಗಿತ್ತು. ಇದರಿಂದಾಗಿ ಎರಡೂ ರಾಜ್ಯಗಳ ನಡುವಿನ ಸಾಮರಸ್ಯವನ್ನು ಹಾಳು ಮಾಡಲಾಗುತ್ತಿದೆ ಎಂದು ಕನ್ನಡಪರ ಸಂಘಟನೆಗಳು ಆರೋಪಿಸಿವೆ.

ಕರ್ನಾಟಕದ ಬಿಜೆಪಿ ಸರ್ಕಾರ ಮರಾಠ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಆದೇಶ ಹೊರಡಿಸಿದ ಬಳಿಕ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಚರ್ಚೆಯಾಗುತ್ತಿದೆ.

English summary
Marathi poster found in North Western Karnataka Road Transport Corporation bus which run in Belagavi-Pune route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X