• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಳಗಾವಿ ಉಪ ಚುನಾವಣೆ; ಬಿಜೆಪಿ ಟಿಕೆಟ್‌ಗೆ ಅಮೆರಿಕದಿಂದಲೂ ಅರ್ಜಿ!

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜನವರಿ 10: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ಘೋಷಣೆ ಆಗಿಲ್ಲ. ಆದರೆ, ಈ ಉಪ ಚುನಾವಣೆ ಬಗ್ಗೆ ಚರ್ಚೆಗಳು ಜೋರಾಗಿವೆ. ವಿದೇಶದಲ್ಲಿ ನೆಲೆಸಿರುವ ಭಾರತ ಮೂಲದವರು ಕೂಡ ಉಪ ಚುನಾವಣೆಯ ಬಿಜೆಪಿ ಟಿಕೆಟ್‌ಗೆ ಅರ್ಜಿ ಹಾಕಿದ್ದಾರೆ.

ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು? ಎಂಬ ಚರ್ಚೆಗಳು ಜೋರಾಗಿವೆ. ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಈ ಪಟ್ಟಿಯಲ್ಲಿ ಅಮೆರಿಕದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರ ಹೆಸರು ಸೇರ್ಪಡೆಯಾಗಿದ್ದು, ಅಚ್ಚರಿಗೆ ಕಾರಣವಾಗಿದೆ.

ಬೆಳಗಾವಿ ಉಪ ಚುನಾವಣೆ; ಅಭ್ಯರ್ಥಿ ಬಗ್ಗೆ ರಮೇಶ್ ಜಾರಕಿಹೊಳಿ ಹೇಳಿಕೆಬೆಳಗಾವಿ ಉಪ ಚುನಾವಣೆ; ಅಭ್ಯರ್ಥಿ ಬಗ್ಗೆ ರಮೇಶ್ ಜಾರಕಿಹೊಳಿ ಹೇಳಿಕೆ

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹುಳ್ಳೂರ ಗ್ರಾಮದ ವ್ಯಕ್ತಿಯೊಬ್ಬರು ಬಿಜೆಪಿ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸೂರ್ಯಕಾಂತ ಸಂತ್ರಿ ಎಂಬುವವರು ಎನ್‌ಆರ್‌ಐ ಕೋಟಾದಲ್ಲಿ ಬಿಜೆಪಿ ಟಿಕೆಟ್ ಕೊಡುವಂತೆ ಅರ್ಜಿ ಹಾಕಿದ್ದಾರೆ.

ಬೆಳಗಾವಿ ಲೋಕಸಭಾ ಚುನಾವಣೆ: ಶ್ರದ್ಧಾ ಶೆಟ್ಟರ್ Vs ಅನಿಲ್ ಲಾಡ್?ಬೆಳಗಾವಿ ಲೋಕಸಭಾ ಚುನಾವಣೆ: ಶ್ರದ್ಧಾ ಶೆಟ್ಟರ್ Vs ಅನಿಲ್ ಲಾಡ್?

ಸೂರ್ಯಕಾಂತ ಅವರು ಜಪಾನಿನ ಶಿಪ್ಪಿಂಗ್ ಕಂಪನಿಯ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದಾರೆ. ಈಗ ಅಮೆರಿಕದಲ್ಲಿ ಉದ್ಯಮ ಆರಂಭಿಸಿದ್ದಾರೆ. ಸ್ನೇಹಿತರ ಕೋರಿಕೆ ಮೇರೆಗೆ ಸೂರ್ಯಕಾಂತ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ, ಬಸವಕಲ್ಯಾಣ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳು ಅಂತಿಮ!ಬೆಳಗಾವಿ, ಬಸವಕಲ್ಯಾಣ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳು ಅಂತಿಮ!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರಿಗೆ ಇ-ಮೇಲ್ ಮಾಡಿ ಬಿಜೆಪಿ ಟಿಕೆಟ್ ಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ.

ದೆಹಲಿಯ ಬಿಜೆಪಿ ಕಚೇರಿಯ ಪ್ರಮುಖರು ಸೂರ್ಯಕಾಂತ ಸಂತ್ರೆ ಅವರನ್ನು ಸಂಪರ್ಕ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಬಿಜೆಪಿ ಟಿಕೆಟ್‌ಗಾಗಿ 70ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿಯನ್ನು ಹಾಕಿದ್ದಾರೆ.

ಡಾ. ರವಿ ಪಾಟೀಲ, ಸಂಜಯ ಪಾಟೀಲ, ಎಂ.ಬಿ ಝಿರಲಿ, ರಮೇಶ್ ಕತ್ತಿ,‌ ವಿಶ್ವನಾಥ ಪಾಟೀಲ, ಜಗದೀಶ್
ಮೆಟಗುಡ್, ಅಮಿತ್ ಕೋರೆ, ರಾಜೀವ ಟೋಪಣ್ಣವರ, ಡಾ ಸೋನಾಲಿ, ಭಾರತಿ ಮಗದುಮ್ಮ,‌ ಶಂಕರಗೌಡ ಪಾಟೀಲ, ರುದ್ರಣ್ಣಾ ಚಂದರಗಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ.

2019ರ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಗೆಲವು ಸಾಧಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ರೈಲ್ವೆ ಖಾತೆಯ ರಾಜ್ಯ ಸಚಿವರು ಆಗಿದ್ದರು. ಕೋವಿಡ್ ಸೋಂಕು ತಗುಲಿದ್ದ ಅವರು ಸೆಪ್ಟೆಂಬರ್ 23ರಂದು ವಿಧಿವಶರಾಗಿದ್ದು, ಉಪ ಚುನಾವಣೆ ಎದುರಾಗಿದೆ.

English summary
Belagavi based Suryakantha Santri who currently in America sent application for BJP ticket for Belagavi lok sabha seat by election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X