ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾದಾಯಿ ವಿಚಾರದಲ್ಲಿ ಕನ್ನಡಿಗರ ಕೆರಳಿಸಿದ ಮಹಾರಾಷ್ಟ್ರದ ಸಚಿವ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಫೆಬ್ರವರಿ 3 : ಮಹಾರಾಷ್ಟ್ರದ ಸಚಿವ- ಶಿವಸೇನೆ ಶಾಸಕ ದೀಪಕ ಕೇಸರಕರ ಕನ್ನಡಿಗರನ್ನು ಕೆರಳಿಸುವಂಥ ಹೇಳಿಕೆ ನೀಡಿದ್ದಾರೆ. ಮಹಾದಾಯಿ ನೀರು ಹಂಚಿಕೆ ವಿಚಾರವಾಗಿ ಮಾತನಾಡುತ್ತಾ, "ಗೋವಾಗೆ ಮಹಾರಾಷ್ಟ್ರದ ನೀರು ಹೋಗುತ್ತಿದೆ. ಮಹಾದಾಯಿ ಇರೋದು ಖಾನಾಪುರದಲ್ಲಿ. ಮಹಾಜನ್ ವರದಿ ಪ್ರಕಾರ ಖಾನಾಪುರ ಮಹಾರಾಷ್ಟ್ರಕ್ಕೆ ಸೇರಿದೆ" ಎಂದಿದ್ದಾರೆ.

ಮಹದಾಯಿ ನೀರು ಹಂಚಿಕೆ : ಅಂದಿನಿಂದ ಇಂದಿನವರೆಗೆಮಹದಾಯಿ ನೀರು ಹಂಚಿಕೆ : ಅಂದಿನಿಂದ ಇಂದಿನವರೆಗೆ

ಕರ್ನಾಟಕವು ಮಹಾಜನ್ ವರದಿ ಅಂಗೀಕರಿಸಿದೆ. ನಾವು ಮಹಾದಾಯಿ ವಿಚಾರದಲ್ಲಿ ಗೋವಾ ಬೇಡಿಕೆ ಆಲಿಸಬೇಕು. ಗೋವಾ ಚಿಕ್ಕ ರಾಜ್ಯ. ಕರ್ನಾಟಕ, ಮಹಾರಾಷ್ಟ್ರ ದೊಡ್ಡ ರಾಜ್ಯ ಎನ್ನುವ ಮೂಲಕ ಮಹಾರಾಷ್ಟ್ರದ ಸಚಿವ ದೀಪಕ ಕೇಸರಕರ ಗೋವಾ ಪರ ಬ್ಯಾಟಿಂಗ್ ಮಾಡಿದ್ದಾರೆ.

Deepak Kesarkar

ಇನ್ನೂ ಮುಂದುವರಿದು, ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ. ಗಡಿ ವಿವಾದ, ಮಹದಾಯಿ ವಿವಾದ ನ್ಯಾಯಾಧೀಕರಣದಲ್ಲಿದೆ. ಬೆಳಗಾವಿ ನಗರ ಸೇರಿ 856 ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಇಲ್ಲಿ ಮರಾಠಿಗರು ಇದ್ದಾರೆ. ಕರ್ನಾಟಕ ಸರಕಾರ ಮರಾಠಿಗರಿಗೆ ಮರಾಠಿ ಭಾಷೆಯಲ್ಲಿ ಸರಕಾರಿ ದಾಖಲೆ ನೀಡುತ್ತಿಲ್ಲ ಎಂದು ಹೇಳಿದ್ದಾರೆ.

English summary
Maharashtra minister- Shiva Sena MLA Deepak Kesarkar provoked Kannadigas in Mahadayi issue in Belagavi. Mahadayi belongs to Maharashtra. So, small state Goa have all the rights on water, he said in Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X