ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ; ವಾಟ್ಸಪ್‌ ಕಾಲ್‌ನಲ್ಲಿಯೇ ನಡೆಯಿತು ನಿಶ್ಚಿತಾರ್ಥ!

|
Google Oneindia Kannada News

ಬೆಳಗಾವಿ, ಏಪ್ರಿಲ್ 09: ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಕಾರ್ಯಕ್ರಮಗಳ ಹೆಸರಿಯಲ್ಲಿ ಹೆಚ್ಚು ಜನ ಸೇರುವುದನ್ನು ನಿಷೇಧಿಸಲಾಗಿದೆ. ಇದರಿಂದಾಗಿ ಶುಭ ಕಾರ್ಯಗಳಲ್ಲಿ ಕುಟುಂಬದವರು ಮಾತ್ರ ಪಾಲ್ಗೊಳ್ಳುತ್ತಿದ್ದಾರೆ.

ಲಾಕ್ ಡೌನ್ ಪರಿಣಾಮ ಬೆಳಗಾವಿಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ವಾಟ್ಸಪ್ ವಿಡಿಯೋ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಲಾಗಿದೆ. ವರನ ಮನೆಯವರು ಬಾಗಲಕೋಟೆಯಲ್ಲಿದ್ದ ಕಾರಣ, ಶುಭ ಕಾರ್ಯವನ್ನು ರದ್ದುಗೊಳಿಸಲು ಸಾಧ್ಯವಾಗದೇ ವಾಟ್ಸಪ್ ಮೊರೆ ಹೋಗಲಾಗಿದೆ.

ದೆಹಲಿಯಲ್ಲಿ ಆನ್ ಲೈನ್ ಮದುವೆ, ವಿಡಿಯೋ ಕಾಲ್‌ನಲ್ಲೇ ನೃತ್ಯದೆಹಲಿಯಲ್ಲಿ ಆನ್ ಲೈನ್ ಮದುವೆ, ವಿಡಿಯೋ ಕಾಲ್‌ನಲ್ಲೇ ನೃತ್ಯ

ಶಿಕ್ಷಕರಾಗಿರುವ ಪ್ರಕಾಶ್ ಪಾಟೀಲ್ ತಮ್ಮ ಪುತ್ರಿ ಆಶಾ ಪಾಟೀಲ್ ನಿಶ್ಚಿತಾರ್ಥವನ್ನು ವಾಟ್ಸಪ್ ವಿಡಿಯೋ ಕರೆ ಮೂಲಕ ಮಾಡಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಆಶಾ ಬಾಗಲಕೋಟೆಯ ಮಹಾಂತೇಶ್ ಜೊತೆ ವಿವಾಹವಾಗಲಿದ್ದಾರೆ.

Lockdown Engagement In Belagavi Through Whatsapp Video Call

ಎರಡು ತಿಂಗಳ ಹಿಂದೆ ನಿಶ್ಚಿತಾರ್ಥಕ್ಕೆ ಮುಹೂರ್ತ ನಿಗದಿ ಮಾಡಲಾಗಿತ್ತು. ಆದರೆ, ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆಯಾಗಿದೆ. ನಿಶ್ಚಿತಾರ್ಥ ಮುಂದೂಡಲು ಬಯಸದ ಪ್ರಕಾಶ್ ಪಾಟೀಲ್ ವಾಟ್ಸಪ್ ವಿಡಿಯೋ ಕರೆ ಮೂಲಕ ಶುಭ ಕಾರ್ಯ ಮಾಡಿದ್ದಾರೆ.

ಎರಡೂ ಕುಟುಂಬದ ಒಪ್ಪಿಗೆಯಂತೆ ಸರಳವಾಗಿ ವಾಟ್ಸಪ್ ವಿಡಿಯೋ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿದ್ದಾರೆ. ಶುಭ ಕಾರ್ಯವನ್ನು ಮಾಡಿದ್ದು, ಹೆಚ್ಚು ಜನ ಸೇರುವಂತಿಲ್ಲ ಎಂದು ಸರ್ಕಾರದ ಆದೇಶವನ್ನು ಪಾಲನೆ ಮಾಡಲಾಗಿದೆ.

ಚಾಮರಾಜನಗರದ ಚೆಕ್ ಪೋಸ್ಟ್‌ನಲ್ಲಿ ಸಪ್ತಪದಿ ತುಳಿದ ವಧು-ವರರುಚಾಮರಾಜನಗರದ ಚೆಕ್ ಪೋಸ್ಟ್‌ನಲ್ಲಿ ಸಪ್ತಪದಿ ತುಳಿದ ವಧು-ವರರು

ಪ್ರಕಾಶ್ ಪಾಟೀಲ್ ಕುಟುಂಬದ 14 ಸದಸ್ಯರು ಮಾತ್ರ ನಿಶ್ಚಿತಾರ್ಥದಲ್ಲಿ ಪಾಲ್ಗೊಂಡಿದ್ದರು. ಎಲ್ಲರೂ ಮಾಸ್ಕ್ ಧರಿಸಿದ್ದರು. ಸಾಮಾಜಿಕ ಅಂತರವನ್ನು ಕಾಪಾಡಿದರು.

English summary
Belagavi witnessed for the engagement through whatsapp video call. Software engineer Asha Patil will marry Bagalkot based Mahantesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X