• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಳಗಾವಿ; ಯೋಧನನ್ನು ಕೊಂದಿದ್ದ ತಂದೆಗೆ ಜೀವಾವಧಿ ಶಿಕ್ಷೆ

|

ಬೆಳಗಾವಿ, ನವೆಂಬರ್ 11: ಬೆಳಗಾವಿಯ ನಯಾನಗರದಲ್ಲಿ ರಜೆಗೆ ಬಂದ ಯೋಧ ಮಗನನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಧನ ತಂದೆಗೆ ಬುಧವಾರ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ.

ಬೆಳಗಾವಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ. ಜೀವಾವಧಿ ಶಿಕ್ಷೆಯ ಜೊತೆಗೆ ಮೂರು ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗಿದೆ.

ಮಂಡ್ಯ; ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದ ನಾಲ್ವರಿಗೆ 5 ವರ್ಷ ಶಿಕ್ಷೆ

2016ರ ಡಿಸೆಂಬರ್ 12ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ರಜೆಗೆಂದು ಯೋಧ ಈರಣ್ಣ ಊರಿಗೆ ಬಂದಿದ್ದರು. ಈ ಮಧ್ಯೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ತಂದೆ ಮಗನ ಮಧ್ಯೆ ಗಲಾಟೆ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿ ರಿವಾಲ್ವರ್ ‌ನಿಂದ ಗುಂಡು ಹಾರಿಸಿ ಮಗನನ್ನು ವಿಠ್ಠಲ್ ಇಂಡಿ ಕೊಲೆ ಮಾಡಿದ್ದರು.

ವಿಠ್ಠಲ್ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಈ ಕುರಿತಂತೆ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

English summary
A father who killed his soldier son in Nayanagar at Belagavi has been sentenced to life imprisonment on Wednesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X