• search
 • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ ಸ್ನೇಹಿತರಲ್ಲಿ ನನ್ನದೊಂದು ಮನವಿ: ಕೇಂದ್ರ ಸಚಿವ ಸುರೇಶ್ ಅಂಗಡಿ

|

ಬೆಳಗಾವಿ, ಜುಲೈ 10: ರಾಜ್ಯದಲ್ಲಿ ಕೊರೊನಾ ತಾಂಡವಾಡುತ್ತಿರುವ ಈ ಸಮಯದಲ್ಲಿ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ, ಕಾಂಗ್ರೆಸ್ ಮುಖಂಡರಲ್ಲಿ ಮತ್ತು ಕೊರೊನಾ ವಾರಿಯರ್ಸ್ ಗಳಲ್ಲಿ ಮನವಿಯನ್ನು ಮಾಡಿದ್ದಾರೆ.

   Nepals bans Indian TV channels,ನೇಪಾಳದಲ್ಲಿ ಭಾರತೀಯ ಸುದ್ದಿ ವಾಹಿನಿಗಳ ಪ್ರಸಾರ ಬಂದ್ | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   "ಆಶಾ ಕಾರ್ಯಕರ್ತೆಯರು ಇಂತಹ ಸಮಯದಲ್ಲಿ ಪ್ರತಿಭಟನೆಯನ್ನು ಮಾಡಬಾರದು. ಇವರನ್ನು ಪ್ರಧಾನಿ ಮೋದಿ, ಕೊರೊನಾ ವಾರಿಯರ್ಸ್ ಎಂದು ಕರೆದಿದ್ದಾರೆ. ಹಾಗಾಗಿ, ಇಂತಹ ಸಮಯದಲ್ಲಿ ಸೇವೆಯನ್ನು ನಿಲ್ಲಿಸಬಾರದು"ಎಂದು ಸುರೇಶ್ ಅಂಗಡಿ ಮನವಿಯನ್ನು ಮಾಡಿದ್ದಾರೆ.

   ಸಿದ್ದರಾಮಯ್ಯಗೆ 'ಇದು ರಾಜಕೀಯ ಮಾಡುವ ಸಮಯವಲ್ಲ' ಎಂದ ಎಚ್ಡಿಕೆ

   "ಕೊರೊನಾವನ್ನು ಒಗ್ಗಟ್ಟಾಗಿ ಗೆಲ್ಲಬೇಕಾದ ಸಮಯವಿದು. ಇಲ್ಲಿ, ಬಿಜೆಪಿ, ಕಾಂಗ್ರೆಸ್ ಅಂತ ಏನೂ ಇಲ್ಲ. ಇದು ಇಡೀ ಜಗತ್ತಿಗೆ ಕಾಡುತ್ತಿರುವ ಸಮಸ್ಯೆ. ಈ ವೇಳೆ, ನನ್ನ ಕಾಂಗ್ರೆಸ್ ಸ್ನೇಹಿತರಲ್ಲಿ ವಿನಂತಿಯೊಂದನ್ನು ಮಾಡುತ್ತಿದ್ದೇನೆ".

   "ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಎಲ್ಲದಕ್ಕೂ ರಾಜಕೀಯ ಮಾಡುವುದನ್ನು ಬಿಡಬೇಕು. ಎಲ್ಲವನ್ನೂ ಟೀಕಿಸುವುದು ಸರಿಯಲ್ಲ. ಏನಾದರೂ ತಪ್ಪಿದ್ದಲ್ಲಿ ಸರಕಾರಕ್ಕೆ ಸಲಹೆಯನ್ನು ನೀಡಲಿ"ಎಂದು ಸುರೇಶ್ ಅಂಗಡಿ ಮನವಿ ಮಾಡಿದ್ದಾರೆ.

   "ರಾಜಕೀಯ ಮಾಡುವುದಕ್ಕೆ ಬೇರೇನೇ ಆದ ಸಮಯವಿದೆ. ಅಸೆಂಬ್ಲಿ, ಸಂಸತ್ತಿನಲ್ಲಿ ಅದನ್ನು ಮಾಡೋಣ. ಇದೊಂದು ಆರೋಗ್ಯ ತುರ್ತು ಪರಿಸ್ಥಿತಿ. ಹಾಗಾಗಿ, ಎಲ್ಲರೂ ಒಟ್ಟಾಗಿ ಕೊರೊನಾವನ್ನು ಎದುರಿಸೋಣ"ಎಂದು ಸುರೇಶ್ ಅಂಗಡಿ ಮನವಿ ಮಾಡಿದ್ದಾರೆ.

   ಸುರೇಶ್ ಅಂಗಡಿಯಿಂದ ಸಾಮಾಜಿಕ ಅಂತರ ಉಲ್ಲಂಘನೆ

   "ವಿರೋಧ ಪಕ್ಷದ ನಾಯಕರು ಮತ್ತು ಹಲವು ಕಾಂಗ್ರೆಸ್ ಮುಖಂಡರು ಸರಕಾರದ ವಿರುದ್ದ ಆರೋಪ ಮಾಡುತ್ತಿದ್ದಾರೆ. ಆದರೆ, ಇದು ರಾಜಕೀಯ ಮಾಡುವ ಸಮಯವಲ್ಲ. ಜನರ ಜೀವ ಮುಖ್ಯ"ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೂಡಾ, ಸಿದ್ದರಾಮಯ್ಯನವರಿಗೆ ಸಲಹೆಯನ್ನು ನೀಡಿದ್ದರು.

   English summary
   Let Us Not Do The Politics, Fight Together With Covid 19: Union Minister Suresh Angadi
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X