ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೈಸ್ ಒಪ್ಪಂದ ರದ್ದುಗೊಳಿಸುವಂತೆ ಕಾನೂನು ಇಲಾಖೆ ಸಿಫಾರಸ್ಸು

|
Google Oneindia Kannada News

ಬೆಳಗಾವಿ, ನವೆಂಬರ್ 20 : ಬೆಳಗಾವಿಯಲ್ಲಿ ಸೋಮವಾರ(ನ.20)ದ ಅಧಿವೇಶನದಲ್ಲಿ ನೈಸ್‌ ಒಪ್ಪಂದ ರದ್ದುಗೊಳಿಸುವಂತೆ ಕಾನೂನು ಇಲಾಖೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ಬಸ್‌ನಲ್ಲಿ ಬೆಳಗಾವಿಗೆ ಬಂದ ಆರೋಗ್ಯ ಸಚಿವ ರಮೇಶ್ ಕುಮಾರ್ಬಸ್‌ನಲ್ಲಿ ಬೆಳಗಾವಿಗೆ ಬಂದ ಆರೋಗ್ಯ ಸಚಿವ ರಮೇಶ್ ಕುಮಾರ್

ನೈಸ್​ ಅಕ್ರಮ ಕುರಿತು ಸದನ ಸಮಿತಿ ನೀಡಿದ್ದ 392 ಪುಟಗಳ ಬೃಹತ್ ವರದಿಯನ್ನು ಕಾನೂನು ಸಚಿವ ಜಯಚಂದ್ರ ಮಂಡಿಸಿದ್ದರು. ಈ ಅಕ್ರಮಗಳ ಕುರಿತು ಸಿಬಿಐ- ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಸಲಾಗಿತ್ತು. ವರದಿ ಇನ್ನೂ ಲೋಕೋಪಯೋಗಿ ಇಲಾಖೆಯಲ್ಲಿ ಧೂಳು ಹಿಡಿಯುತ್ತಿದೆ. ವರ್ಷ ಕಳೆದರೂ ದಾಖಲೆ ಎ.ಜಿ ಕಚೇರಿ ತಲುಪಿಲ್ಲ. ಲೋಕೋಪಯೋಗಿ ಇಲಾಖೆ ಗೊಂದಲದಲ್ಲಿದೆ. ನೈಸ್ ಒಪ್ಪಂದ ರದ್ದು ಕುರಿತು ವಿಧಾನಸಭೆಯಲ್ಲಿಂದು ಚರ್ಚೆ ನಡೆಯಲಿದೆ.

Law department recommends cancellation of NICE tender

ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ಬಹಳಷ್ಟು ಷರತ್ತುಗಳನ್ನು ನೈಸ್ ಉಲ್ಲಂಘಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಅಗತ್ಯಕ್ಕಿಂತಲೂ ಹೆಚ್ಚಿನ ಭೂಮಿ ಸ್ವಾಧೀನಪಡಿಸಿಕೊಂಡಿದೆ. ಮೂಲಸೌಕರ್ಯ ಅಭಿವೃದ್ಧಿಗಿಂತ ಅನಧಿಕೃತ ಬೆಳವಣಿಗೆಗಳು ಹೆಚ್ಚಾಗಿವೆ.

ಕೆಐಎಡಿಬಿಯ ನಿರಾಕ್ಷೇಪಣಾ ಪತ್ರ ಆಧರಿಸಿ ಭೂಸ್ವಾಧೀನದಿಂದ ಕೈಬಿಡಲಾಗಿದೆ. ಇದರಿಂದ ಕೆಲವು ಪ್ರಭಾವಿಗಳು ವ್ಯಾಪಕ ವಿಸ್ತೀರ್ಣದ ಜಮೀನನ್ನು ಬೇನಾಮಿಯಾಗಿ ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

English summary
The department of law and parliamentary affairs recommended to cancellation of tender which has given to NICE company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X