ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋವು ಇದ್ದ ಮನೆ ಭಾಗ್ಯಶಾಲಿ: ಸಚಿವ ಪ್ರಭು ಚವ್ಹಾಣ್

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ನವೆಂಬರ್ 18: ಯಾರ ಮನೆಯಲ್ಲಿ ಗೋವು ಇರುತ್ತದೋ ಆ ಕುಟುಂಬ ಭಾಗ್ಯಶಾಲಿ ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಹೇಳಿದರು.

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಆರ್.ಐ.ಡಿ.ಎಫ್ ಯೋಜನೆಯಡಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಪಶು ಆಸ್ಪತ್ರೆಯ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಸಚಿವ ಪ್ರಭು ಚವ್ಹಾಣ್ ಮಾತನಾಡಿದರು.

ಬೆಳಗಾವಿ; ತಾಯಿ, ಮಕ್ಕಳ 'ಸ್ಮಾರ್ಟ್' ಆಸ್ಪತ್ರೆ ಲೋಕಾರ್ಪಣೆಬೆಳಗಾವಿ; ತಾಯಿ, ಮಕ್ಕಳ 'ಸ್ಮಾರ್ಟ್' ಆಸ್ಪತ್ರೆ ಲೋಕಾರ್ಪಣೆ

ಗೋವು ನಮಗೆ ಪೂಜನೀಯ, ತಾಯಿಯ ಸಮಾನ. ನಮ್ಮ ಆರೋಗ್ಯವನ್ನು ಎಲ್ಲ ವಿಧಗಳಿಂದ ಕಾಪಾಡುತ್ತಿರುವ ಗೋವನ್ನು ಎಂದೂ ಕಸಾಯಿಖಾನೆಗೆ ಹೋಗಲು ಬಿಡಬಾರದು. ಹಾಲು, ಮೊಸರು, ತುಪ್ಪ, ಗೋಮೂತ್ರ ಸಗಣಿ ಎಲ್ಲವನ್ನು ಇಂದು ನಾವು ಯಥೇಚ್ಛವಾಗಿ ಬಳಸುತ್ತಿದ್ದೇವೆ ಎಂದು ತಿಳಿಸಿದರು.

Belagavi: Land Worship For Veterinary Hospital Building From Minister Prabhu Chauhan

ಪಶು ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಎಪಿಎಂಸಿಯಿಂದ ಸ್ಥಳ ನೀಡಿದ್ದು ಸಂತಸವಾಗಿದೆ. ಇಲಾಖೆಗಗಳ ಮಧ್ಯೆ ಈ ತರಹದ ಸಮನ್ವಯತೆ ಇದ್ದರೆ ಸರ್ಕಾರಿ ಕೆಲಸಗಳು ಅತ್ಯಂತ ಸರಾಗವಾಗಿ ನಡೆಯುವುದಲ್ಲದೆ, ರೈತಾಪಿ ವರ್ಗಕ್ಕೂ ಅನುಕೂಲವಾಗುತ್ತದೆ ಎಂದು ಸಚಿವರು ಹೇಳಿದರು.

ಆಸ್ಪತ್ರೆ ಕಟ್ಟಡದ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 21 ಲಕ್ಷ ರುಪಾಯಿ ನೀಡುವುದಾಗಿ ಸಚಿವ ಪ್ರಭು ಚವ್ಹಾಣ್ ಈ ಸಂಧರ್ಭದಲ್ಲಿ ಘೋಷಣೆ ಮಾಡಿದರು.

ಈ ಸಂಧರ್ಭದಲ್ಲಿ ಮಠದ ಗೋಶಾಲೆಗೂ ಸಹ ಈ ಭೇಟಿ ನೀಡಲಾಯಿತು. ಈ ಸಂಧರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಪಶುಸಂಗೋಪನೆ ಇಲಾಖೆಯ ಆಯುಕ್ತ ಬಸವರಾಜೇಂದ್ರ ಹಾಗೂ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

English summary
Minister Prabhu Chauhan gave land worship to the newly built veterinary hospital building under RIDF project in Nippani, Belagavi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X