• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೋಕಾಕ್‌ನಿಂದ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧೆ, ಸ್ವಾಗತಿಸಿದ ಜಾರಕಿಹೊಳಿ!

By ಬೆಳಗಾವಿ ಪ್ರತಿನಿಧಿ
|

ಬೆಳಗಾವಿ, ಫೆಬ್ರವರಿ 12: ಬೆಳಗಾವಿ ರಾಜಕೀಯದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಚಿವ ರಮೇಶ್ ಜಾರಕಿಹೊಳಿ ನಡುವಿನ ಜಟಾಪಟಿ ಮುಂದುವರೆದಿದೆ. "ಪಕ್ಷ ಬಯಸಿದರೆ ಗೋಕಾಕ್‌ನಿಂದ ನಾನೇ ಅಭ್ಯರ್ಥಿಯಾಗುತ್ತೇನೆ" ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಶುಕ್ರವಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, "ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಟಾರ್ಗೆಟ್ ಮಾಡುತ್ತಿದ್ದಾರೆ. ಮಾಡಲಿ ನಾನೂ ಇನ್ನು ಮುಂದೆ ರಮೇಶ್ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ್ ಟಾರ್ಗೆಟ್ ಮಾಡುತ್ತೇನೆ. ಪಕ್ಷ ಬಯಸಿದರೆ ಮುಂದಿನ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗುತ್ತೇನೆ" ಎಂದರು.

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್

"ರಮೇಶ್ ಜಾರಕಿಹೊಳಿ‌ ಅವರ ಆರೋಪಕ್ಕೆ ನಾನೇನೂ ಮೌನವಾಗಿಲ್ಲ. ಉತ್ತರ ಕೊಡಲು ನನಗೆ ಹೆಚ್ಚಿನ ಸಮಯವೂ ಬೇಡ. ಕ್ಷೇತ್ರದ ಜನರಿಂದಲೇ ಅವರಿಗೆ ತಕ್ಕ ಉತ್ತರ ಕೊಡಿಸಬೇಕು ಅಂದು ಕೊಂಡಿದ್ದೇನೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನನ್ನ ಕ್ಷೇತ್ರದ ಜನರೇ ಅವರಿಗೆ ತಕ್ಕ ಉತ್ತರ ಕೊಡಲಿದ್ದಾರೆ" ಎಂದು ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರ: ರಮೇಶ್ ಜಾರಕಿಹೊಳಿ ಹೇಳಿಕೆಗೆ ಸತೀಶ್ ಜಾರಕಿಹೊಳಿ ತಿರುಗೇಟು

"ನಾಲ್ಕು-ಐದು ರಾಜ್ಯಗಳಲ್ಲಿ ಶಾಸಕರನ್ನು ಹೈಜಾಕ್ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇನ್ನು ನನ್ನ ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯರ ಹೈಜಾಕ್ ಯಾವ ಲೆಕ್ಕ ಬಿಡಿ. ಅವರು ಪ್ರಜಾಪ್ರಭುತ್ವದ ಮೇಲೆಯೇ ವಿಶ್ವಾಸ ಕಳೆದುಕೊಂಡಿದ್ದಾರೆ. ಸರ್ಕಾರ ಅವರದ್ದಿದೆ, ಅಧಿಕಾರಿಗಳು ಅವರವರೇ ಇದ್ದಾರೆ. ಏನಾದರೂ ಮಾಡಲಿ ಬಿಡಿ, ನಾನು ಅವರಿಗೆ ತಿರುಗೇಟು ನೀಡುವೆ" ಎಂದು ತಿಳಿಸಿದರು.

ಅದ್ಧೂರಿಯಾಗಿ ನೆರವೇರಿದ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಮದುವೆ

ಸ್ವಾಗತಿಸಿದ ಜಾರಕಿಹೊಳಿ; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಬೆಳಗಾವಿಯಲ್ಲಿ ಸಚಿವ ರಮೇಶ ಜಾರಕಿಹೊಳಿ‌ ಪ್ರತಿಕ್ರಿಯೆ ನೀಡಿದರು. "ಹೆಬ್ಬಾಳ್ಕರ್‌ಗೆ ಮೋಸ್ಟ್ ವೆಲ್ ಕಮ್, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕು ಇದೆ" ಎಂದರು.

"ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಮಾತ್ರವಲ್ಲ. ಯಾವ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇಲ್ಲವೋ ಅಲ್ಲಿ ಗೆಲ್ಲಿಸಬೇಕು. ಯಾಕೆ ಸರ್ಕಾರ ಪತನ ಆಗಿದೆ ಎನ್ನುವುದು ಅವರ ಗಾಡ್ ಫಾದರ್‌ಗೆ ಕೇಳಿದರೆ ಒಳ್ಳೇಯದು" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೆಸರು ಹೇಳದೇ ಟಾಂಗ್ ನೀಡಿದರು.

English summary
Belagavi rural Congress MLA Lakshmi Hebbalkar said that she will contest for election from Gokak assembly seat. Minister Ramesh Jarkiholi Gokak sitting MLA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X