ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡದ ಧ್ವಜ; ಎಂಇಎಸ್‌ಗೆ ಎಚ್ಚರಿಕೆ ನೀಡಿದ ಲಕ್ಷ್ಮಣ ಸವದಿ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜನವರಿ 08: ಬೆಳಗಾವಿ ಮಹಾನಗರ ಪಾಲಿಕೆ ಮುಂದಿನ ಕನ್ನಡ ಧ್ವಜವನ್ನು ತೆರವುಗೊಳಿಸಲು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಕಾರ್ಯಕರ್ತರು ಗಡುವು ನೀಡಿದ್ದಾರೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಎಂಇಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಎಂಇಎಸ್‌ನವರು ಹೇಳುವುದಿದ್ದರೆ ಮಹಾರಾಷ್ಟ್ರಕ್ಕೆ ಹೋಗಿ ಹೇಳಲಿ. ಕನ್ನಡ ನೆಲದಲ್ಲಿ ಕನ್ನಡ ಧ್ವಜ ಹಾರಿಸೋದು ನಮ್ಮೆಲ್ಲರ ಹಕ್ಕು. ಕನ್ನಡ ಧ್ವಜ ಹಾರಿಸೋದರಲ್ಲಿ ಯಾವುದೇ ತಪ್ಪಿಲ್ಲ" ಎಂದರು.

ಕನ್ನಡ ಧ್ವಜಸ್ತಂಭ ತೆರವಿಗೆ ಗಡುವು ಕೊಟ್ಟ ಎಂಇಎಸ್ ಕನ್ನಡ ಧ್ವಜಸ್ತಂಭ ತೆರವಿಗೆ ಗಡುವು ಕೊಟ್ಟ ಎಂಇಎಸ್

"ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಕಾರ್ಯಕರ್ತರು ಕಾನೂನು ಮಿತಿಯನ್ನು ಮೀರಿ ಮಾತನಾಡಿದರೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ" ನೀಡಲಾಗುತ್ತದೆ ಎಂದು ಲಕ್ಷ್ಮಣ ಸವದಿ ಎಚ್ಚರಿಕೆ ನೀಡಿದರು.

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ವಿರೋಧಿಸಿ ಎಂಇಎಸ್ ಕರಾಳ ದಿನಾಚರಣೆ ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ವಿರೋಧಿಸಿ ಎಂಇಎಸ್ ಕರಾಳ ದಿನಾಚರಣೆ

Lakshman Savadi Outrage Against MES

ವಂಚಕ ಯುವರಾಜ್; ಯುವರಾಜ್ ಸ್ವಾಮಿ ವಂಚನೆ ಬಗ್ಗೆ ಮಾತನಾಡಿದ ಲಕ್ಷ್ಮಣ ಸವದಿ ಅವರು, "ನಮಗೆ ತಿಳಿದ ಹಾಗೇ ಯುವರಾಜ್ ಚಿತ್ರದುರ್ಗ ಕಡೆ ಮಠಕ್ಕೆ ಮೊದಲು ಸ್ವಾಮೀಜಿ ಆಗಿದ್ದ. ಆ ಮಠದಿಂದ ಯುವರಾಜ್‌ನನ್ನು ಹೊರಗೆ ಹಾಕಿದರು" ಎಂದರು.

ಬೆಳಗಾವಿ ಕನ್ನಡ ಧ್ವಜ ವಿವಾದ; ಕುಮಾರಸ್ವಾಮಿ ಟ್ವೀಟ್ ಬೆಳಗಾವಿ ಕನ್ನಡ ಧ್ವಜ ವಿವಾದ; ಕುಮಾರಸ್ವಾಮಿ ಟ್ವೀಟ್

"ಬೆಂಗಳೂರಿಗೆ ಬಂದು ನೆಲೆಸಿ ನಾನು ಆರ್‌ಎಸ್‌ಎಸ್ ಮುಖಂಡ ಅಂತಾ ಬಹಳಷ್ಟು ಕಡೆ ಹೇಳಿದ್ದಾನೆ. ಬಿಜೆಪಿಯ ಅನೇಕ ನಾಯಕರನ್ನು ಭೇಟಿಯಾಗಿ ಅವರ ಜೊತೆ ಫೋಟೋ ತೆಗೆಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾನೆ. ನನ್ನ ಹತ್ತಿರ ಬಂದು ಹಾರ ಹಾಕಿ ಶುಭಾಶಯ ತಿಳಿಸಿದ್ದೂ ಇದೆ" ಎಂದು ಹೇಳಿದರು.

"ಯಾವ ವ್ಯಕ್ತಿ ಏನು ಮಾಡುತ್ತಿದ್ದಾನೆ ಅಂತಾ ಆಂತರಿಕವಾಗಿ ಯಾರಿಗೂ ಗೊತ್ತಿರುವುದಿಲ್ಲ. ಶುಭಾಶಯಗಳನ್ನು ಹೇಳಲು ಬಂದಾಗ ಸಹಜವಾಗಿ ಸ್ವೀಕರಿಸಬೇಕಾಗುತ್ತದೆ. ಬಿಜೆಪಿಗೂ ಆತನಿಗೂ ಯಾವುದೇ ಸಂಬಂಧ ಇಲ್ಲ" ಎಂದು ಸಾರಿಗೆ ಸಚಿವರು ಸ್ಪಷ್ಟಪಡಿಸಿದರು.

"ಒಂದು ತಿಂಗಳಿನಿಂದ ಯುವರಾಜ್ ಮೋಸ‌ ಮಾಡಿದ ಬಗ್ಗೆ ಮಾಧ್ಯಮಗಳಲ್ಲಿ ತೋರಿಸುತ್ತಿದ್ದೀರಿ. ಅನೇಕ ನಟ-ನಟಿಯರ ಜೊತೆ ಅವನ ಸಂಬಂಧವಿದೆ. ಬಹಳಷ್ಟು ಹಣಕಾಸು ಅವ್ಯವಹಾರ ಆಗಿದ್ದು ಮೇಲ್ನೋಟಕ್ಕೆ ಬೆಳಕಿಗೆ ಬರುತ್ತಿದೆ. ಈಗಾಗಲೇ ಆತ ಪೊಲೀಸ್ ಕಸ್ಟಡಿಯಲ್ಲಿದ್ದು ಸಿಸಿಬಿ ತನಿಖೆ ಮಾಡುತ್ತಿದೆ" ಎಂದು ಹೇಳಿದರು.

ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತುಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು

"ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಿದ್ದಾರೆ. ವಂಚಕ ಯುವರಾಜ್ ಸ್ವಾಮಿ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆ ಟಿಕೆಟ್‌ಗಾಗಿ ಹಣ ನೀಡಿದ್ದ ಬಗ್ಗೆ ಖಚಿತ ದಾಖಲೆ, ಮಾಹಿತಿ ಬಂದಿಲ್ಲ" ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಪಾಲಿಕೆ ಚುನಾವಣೆ; ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಪಕ್ಷದ ಚಿಹ್ನೆ ಮೇಲೆ ಸ್ಪರ್ಧೆ ವಿಚಾರದ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿಗಳು, "ಈ ಹಿಂದೆ ಎಂದೂ ಪಕ್ಷದ ಆಧಾರದ ಮೇಲೆ ಚುನಾವಣೆ ನಡೆದಿಲ್ಲ. ಮರಾಠಾ ವರ್ಸಸ್ ಕನ್ನಡಿಗ ಎಂಬ ಪರಿಪಾಠದಲ್ಲೇ ಚುನಾವಣೆ ಆಗಿದೆ. ಬೇರೆ ಪಕ್ಷದವರು ಚಿಹ್ನೆ ಆಧಾರದ ಮೇಲೆ ಚುನಾವಣೆ ಎದುರಿಸುತ್ತಾರೆ ಎಂಬುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಚುನಾವಣೆ ಘೋಷಣೆ ಆದ ಮೇಲೆ ನಮ್ಮ ಪಕ್ಷದ ತೀರ್ಮಾನ ಪ್ರಕಟಿಸುತ್ತದೆ" ಎಂದರು.

English summary
Deputy chief minister of Karnataka Lakshman Savadi outrage against Maharashtra Ekikaran Samiti who demand to remove Kannada flag in-front of Belgaum City Corporation office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X