ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸಿಬಿ ದಾಳಿ: ಭ್ರಷ್ಟ ಅಧಿಕಾರಿ ಮನೆಯ ಬಾತ್ ರೂಮ್‌ನಲ್ಲಿ ಲಕ್ಷ ಲಕ್ಷ ಹಣ ಪತ್ತೆ!

|
Google Oneindia Kannada News

ಬೆಳಗಾವಿ, ಜೂನ್ 21: ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಬೆಲ್ ಮಾಡ್ತಿದ್ದಂತೆ ಬೆಚ್ಚಿ ಬಿದ್ದ ಅದೆಷ್ಟೋ ಅಧಿಕಾರಿಗಳು. ಇವರು ಮಾಡಿಟ್ಟ ಆಸ್ತಿ ನೋಡಿ ಎಸಿಬಿ ಅಧಿಕಾರಿಗಳು ಸಹ ಸುಸ್ತಾಗಿದ್ದಾರೆ. ಬೆಳಗಾವಿಯ ಲೋಕೋಪಯೋಗಿ ಇಲಾಖೆಯಲ್ಲಿ ಅಧೀಕ್ಷಕ ಅಭಿಯಂತರನಾಗಿರುವ ಭೀಮರಾವ್ ಯಶವಂತ ಪವಾರ್( ಬಿವೈ ಪವಾರ್) ಮನೆಯ ಬಾತ್ ರೂಮ್‌ನಲ್ಲಿ ಲಕ್ಷ ಲಕ್ಷ ಹಣ ಸಿಕ್ಕಿದೆ.

ಮನೆಯಲ್ಲಿ ಬಾತ್‌ರೂಮ್ ಕಟ್ಟಿಸೋದು ಸ್ನಾನಕ್ಕೆ, ಮಲಮೂತ್ರ ವಿಸರ್ಜನೆಗೆ. ಆದರೆ ಇಲ್ಲೊಬ್ಬ ಭ್ರಷ್ಟ ಅಧಿಕಾರಿ ಮನೆಯ ಬಾತ್ ರೂಮ್‌ನಲ್ಲಿ ಲಕ್ಷ ಲಕ್ಷ ಹಣವಿಟ್ಟಿರೋದು ಎಸಿಬಿ ದಾಳಿಯ ವೇಳೆಯಲ್ಲಿ ಪತ್ತೆಯಾಗಿದೆ.

Belagavi : Lakhs worth assets unearthed during ACB raid on Bheema Rao Y Pawar Superintendent of Engineer

ಜೂನ್ 30ಕ್ಕೆ ಸೇವಾ ನಿವೃತ್ತಿ ಹೊಂದಲಿದ್ದ ಬಿವೈ ಪವಾರ್

ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಬಿವೈ ಪವಾರ್ ಹಿರಿಯ ಅಧಿಕಾರಿ ಅಧಿಕಾರಿಯಾಗಿದ್ದರು. ಜೂನ್ 30ರಂದು ನಿವೃತ್ತಿ ಅಂಚಿನಲ್ಲಿದ್ದರು. ಆದರೆ, ಅಕ್ರಮ ಸಂಪತ್ತನ್ನು ಗಳಿಸಿರುವ ಆರೋಪದ ಮೇಲೆ ಅವರ ಮನೆ ಮೇಲೆ ಎಸಿಬಿ ದಾಳಿಯಾಗಿದೆ. ಬೆಳಗಾವಿಯ ಲೋಕೋಪಯೋಗಿ ಇಲಾಖೆ ಅಧಿಕಾರಿಯಾಗಿರುವ PWD ಬೆಳಗಾವಿ ಅಧೀಕ್ಷಕ ಬಿ.ವೈ ಪವಾರ್ ಮನೆ, ಕಚೇರಿ ಮೇಲೆ ದಾಳಿಯಾಗಿದ್ದು ಬೆಳಗಾವಿಯ ಜಕ್ಕೇರಿ ಹೊಂಡದಲ್ಲಿರುವ ಮನೆ, ಕಚೇರಿ ಮೇಲೆ ದಾಳಿಯಾಗಿದೆ. ಇವರಿಗೆ ಸೇರಿದ ಸರ್ಕಾರಿ ನಿವಾಸದ ಮೇಲೂ ದಾಳಿ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ. ನಿಪ್ಪಾಣಿ ಮನೆ, ಬೋರಗಾಂವಿನಲ್ಲಿರುವ ಕಾರ್ಖಾನೆ, ಬಿ.ವೈ ಪವಾರ್‌ಗೆ ಸೇರಿದ ಮನೆ, ಕಚೇರಿ ಸೇರಿ ಆರು ಕಡೆ ದಾಳಿ 25 ಕ್ಕೂ ಅಧಿಕ ಸಿಬ್ಬಂದಿಯಿಂದ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.

Belagavi : Lakhs worth assets unearthed during ACB raid on Bheema Rao Y Pawar Superintendent of Engineer

ಎಸಿಬಿ ಡಿವೈಎಸ್‌ಪಿ ಬಿ.ಎಸ್.ನ್ಯಾಮಗೌಡರ ನೇತೃತ್ವದ ತಂಡದಿಂದ ಶೋಧ

ಬೆಳಗಾವಿ ಲೋಕೋಪಯೋಗಿ ಅಧೀಕ್ಷಕ ಇಂಜಿನಿಯರ್ ಬಿ.ವೈ.ಪವಾರ್ ನಿವಾಸದಲ್ಲಿ ಲಕ್ಷಾಂತರ ಹಣ ಪತ್ತೆಯಾಗಿರುವದಲ್ಲದೇ ಎಸಿಬಿ ಎಸ್‌ಪಿ ಬಿ.ಎಸ್.ನ್ಯಾಮಗೌಡರ ನೇತೃತ್ವದಲ್ಲಿ ಮುಂದುವರಿದ ಪರಿಶೀಲನೆ ಮುಂದುವರೆದಿದೆ. ಬಿ.ವೈ.ಪವಾರ್ ನಿವಾಸದಲ್ಲಿ ಬೆಳ್ಳಿ, ಚಿನ್ನದ ಆಭರಣಗಳು ಪತ್ತೆಯಾಗಿರುವುದಲ್ಲದೇ ಅಪಾರ ಪ್ರಮಾಣದ ಆಸ್ತಿ ಪತ್ರಗಳು, ಆಸ್ತಿ ಪತ್ತೆಯಾಗಿದೆ.

English summary
Karnataka ACB Raids: Lakhs worth assets unearthed during ACB raid on Bheema Rao Y Pawar Superintendent of Engineer in Belagavi. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X