ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೈ ಕೊಟ್ಟ ಮೋದಿ, ತೃತೀಯ ರಂಗದತ್ತ ಯಡಿಯೂರಪ್ಪ

By Mahesh
|
Google Oneindia Kannada News

ಸುವರ್ಣ ಸೌಧ ಬೆಳಗಾವಿ, ನ.26: ಮಾಜಿ ಮುಖ್ಯಮಂತ್ರಿ, ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ನಡೆಸಿರುವ ಸುವರ್ಣ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ಮುಂದುವರೆದಿದೆ. ಶಾದಿಭಾಗ್ಯ ಯೋಜನೆ ವಿಸ್ತರಣೆ ಮತ್ತು ಎಪಿಎಲ್ ಕಾರ್ಡ್ ದಾರರಿಗೆ ಹಿಂದಿನಂತೆ ಪಡಿತರ ವಿತರಣೆ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿರುವ ಯಡಿಯೂರಪ್ಪ ಅವರಿಗೆ ಈ ಸಂದರ್ಭದಲ್ಲಿ ಕೆಜೆಪಿ ಭವಿಷ್ಯದ ಬಗ್ಗೆ ಮಹತ್ವದ ಆಲೋಚನೆ ಬಂದಿದೆ.

ಬೆಂಗಳೂರಿನಲ್ಲಿ ಧರಣಿ ಅಂತ್ಯಗೊಳಿಸಿ ಬೆಳಗಾವಿಯಲ್ಲಿ ಧರಣಿ ಮುಂದುವರೆಸುವುದಾಗಿ ಘೋಷಿಸಿದ್ದ ಯಡಿಯೂರಪ್ಪ ಅವರು ತಮ್ಮ ಅನಾರೋಗ್ಯ, ವಯೋ ಸಹಜ ಸುಸ್ತು ಲೆಕ್ಕಿಸದೆ ಸರ್ಕಾರದ ವಿರುದ್ಧ ಧರಣಿ ಕೂತಿದ್ದಾರೆ. ಈ ಸಂದರ್ಭದಲ್ಲಿ ಕೆಜೆಪಿ ಅಸ್ತಿತ್ವ, ಮೋದಿ-ಬಿಜೆಪಿ ಕಡೆಯಿಂದ ಆದ ಅವಮಾನ, ಲೋಕಸಭೆ ಚುನಾವಣೆಗೂ ಮುನ್ನ ಕೆಜೆಪಿ ಭವಿಷ್ಯದ ಬಗ್ಗೆ ತೆಗೆದುಕೊಳ್ಳಬೇಕಾದ ನಿರ್ಧಾರದ ಬಗ್ಗೆ ಒನ್ ಇಂಡಿಯಾ ಪ್ರತಿನಿಧಿ ಜತೆ ಕೆಲ ಕಾಲ ಮಾತನಾಡಿದ್ದಾರೆ.

ಮೋದಿ ಅವರ 'ಭಾರತ ಗೆಲ್ಲಿಸಿ' ಸಮಾವೇಶದ ಬಗ್ಗೆ ಇಲ್ಲಿ ತನಕ ಮಾತನಾಡದಿದ್ದ ಯಡಿಯೂರಪ್ಪ ಅವರು ಬಳಲಿಕೆಯಿಂದಲೋ ಏನೋ ಬಿಜೆಪಿ ಸಹವಾಸ ಸಾಕು ಎಂದಿದ್ದಾರೆ. ನರೇಂದ್ರ ಮೋದಿ ಅವರನ್ನು ನಾನು ಬೆಂಬಲಿಸುತ್ತಾ ಬಂದೆ ಆದರೆ, ಸಮಾವೇಶಕ್ಕೆ ಕನಿಷ್ಠ ಆಹ್ವಾನವೂ ಸಿಗಲಿಲ್ಲ. ವೇದಿಕೆಯಲ್ಲಿ ಬಿಜೆಪಿ ಗುಣಗಾನ ಮಾಡಿದರೂ ಯಡಿಯೂರಪ್ಪ ಹೆಸರು ಪ್ರಸ್ತಾಪವಾಗಲಿಲ್ಲ. ಬಿಜೆಪಿ-ಕೆಜೆಪಿ ವಿಲೀನ ಕಣ್ಣಾಮುಚ್ಚಾಲೆ ಆಟ ಸಾಕಾಗಿದೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. [ಅಕ್ರಮ ಆಸ್ತಿ ಸುಳಿಯಲ್ಲಿ]

KJP president Yeddyurappa looking beyond BJP to the Third Front

ಚುನಾವಣೆ ಬಗ್ಗೆ ಡಿಸೆಂಬರ್ 6 ರವರೆಗೂ ಮೈತ್ರಿ ಬಗ್ಗೆ ಎನ್ ಡಿಎನಿಂದ ಪ್ರತಿಕ್ರಿಯೆಗಾಗಿ ಕಾಯುತ್ತೇವೆ. ಎನ್ ಡಿಎಯಿಂದ ಸಕಾರಾತ್ಮಕ ಸ್ಪಂದನೆ ದೊರೆಯದಿದ್ದರೆ ಮುಂದಿನ ನಿರ್ಧಾರ ಪ್ರಕಟಿಸುತ್ತೇವೆ. ಬಿಜೆಪಿ ಮೈತ್ರಿಗೆ ಒಪ್ಪಿಗೆ ನೀಡದಿದ್ದರೆ, ಕೆಜೆಪಿ ಎಲ್ಲಾ ಕ್ಷೇತ್ರಗಳಲ್ಲಿಯೂ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಹೇಳಿದರು.

ಶಿಕಾರಿಪುರದ ಯಡಿಯೂರಪ್ಪ ಅವರು ಈಗ 'ಅನಿಸುತದೆ ಯಾಕೋ ಇಂದು ಬಿಜೆಪಿ ಬೇಡ ಎಂದೂ ಗುನುಗುತ್ತಿದ್ದಾರೆ. ಬಿಜೆಪಿ ಸಖ್ಯ ಬೇಡ ಎಂದರೆ ಮುಂದಿನ ನಡೆ ಏನು? ಎಂದು ಪ್ರಶ್ನಿಸಿದರೆ, ತೃತೀಯ ರಂಗದತ್ತ[ ಸಮಾಜವಾದಿ ಪಕ್ಷ ಸೇರುವ ಸಾಧ್ಯತೆ?] ತಮ್ಮ ಚಿತ್ತ ಹರಿದಿದೆ ಎಂದಿದ್ದಾರೆ.

ಆದರೆ, ಯಾವ ರಂಗ ಸೇರಿದರೂ ಕರ್ನಾಟಕ ಜನತಾ ಪಕ್ಷ ತನ್ನ ಅಸ್ತಿತ್ವ, ಪ್ರತ್ಯೇಕತೆ ಉಳಿಸಿಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು. ಓದುಗರೇ.. ಧರಣಿ ಮಾಡಿ ಆಯಾಸಗೊಂಡಿದ್ದ ಯಡಿಯೂರಪ್ಪ ಅವರು ಸಕ್ಕರೆ ಕಾಯಿಲೆ ಪೀಡಿತರಾಗಿದ್ದು ಜಲಬಾಧೆ ತೀರಿಸಿಕೊಳ್ಳಬೇಕಾದರೆ ಸದನದಿಂದ ಬಹುದೂರ ಹೋಗಬೇಕಾಗುತ್ತದೆ. ಜನಪ್ರತಿನಿಧಿಗಳಿಗೆ ಸೂಕ್ತ ಶೌಚಾಲಯ ವ್ಯವಸ್ಥೆಯನ್ನು ಸರ್ಕಾರ ಒದಗಿಸಿಲ್ಲ ಎಂಬ ದೂರು ದೂರದಿಂದ ಕೇಳಿ ಬರುತ್ತಿದೆ.

ಸಿದ್ದರಾಮಯ್ಯ ಮನವಿ: ಶಾದಿ ಭಾಗ್ಯ ಯೋಜನೆ ಹೊಸದಾಗಿ ಘೋಷಣೆ ಮಾಡಿರುವ ಕಾರ್ಯಕ್ರಮವಲ್ಲ. ಆಯವ್ಯಯದಲ್ಲಿ ಮಂಡಿಸಿ ಅಂಗೀಕರಿಸಿದ ಯೋಜನೆಯನ್ನು ಇದೀಗ ಅನುಷ್ಠಾನಕ್ಕೆ ತರುತ್ತಿದ್ದೇವೆ. ಸಂವಿಧಾನದ ಸದಾಶಯದಂತೆ ಅಲ್ಪಸಂಖ್ಯಾತ ವರ್ಗದ ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಕಲ್ಪಿಸಿ ಕೊಡುವ ಕಾರ್ಯಕ್ರಮವನ್ನು ಅಲ್ಪ ಸಂಖ್ಯಾತ ಇಲಾಖೆಯ ಮೂಲಕ ಜಾರಿಗೊಳಿಸಲಾಗುತ್ತಿದೆ.

ಈ ಯೋಜನೆಯನ್ನು ಇತರೆ ವರ್ಗದ ಹೆಣ್ಣು ಮಕ್ಕಳಿಗೂ ವಿಸ್ತರಿಸಲು ಯಾವುದೇ ವಿರೋಧವಿಲ್ಲ. ಎಲ್ಲಾ ಕಾರ್ಯಕ್ರಮಗಳ ಅನುಷ್ಠಾನದ ಮುನ್ನ ಸಾಧಕ-ಬಾಧಕಗಳ ಕುರಿತ ಸಮೀಕ್ಷೆ, ಸಮಾಲೋಚನೆ, ಚರ್ಚೆ ನಡೆಯಬೇಕಾಗಿದೆ. ನೀತಿ-ನಿರೂಪಣೆ ಮಾಡುವಾಗ ಆಗ್ರಹಿಸುವುದು ಸಹಜ. ತಮ್ಮ ನಿಲುವು ಹಾಗೂ ತಮ್ಮ ಧೋರಣೆ, ಒತ್ತಡ ಹೇರುವ ತಂತ್ರಗಾರಿಕೆ ಸರಿಯಲ್ಲ. ಈ ವಿಷಯದ ಮೇಲೆ ಸದನದಲ್ಲಿ ಚರ್ಚೆಗೂ ಸಿದ್ಧ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

English summary
Belgaum Winter Session 2013 : After pledging support to Modi for PM, the Lingayat strongman now finds himself at the crossroads. Should KJP wait endlessly for NDA (or the BJP) to embrace him or simply take the plunge into the ‘Third Front' being propelled by Samajwadi Party in the state
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X