• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಖರ್ಗೆ-ದೇವೇಗೌಡ ಹಳೆ ಹುಲಿಗಳು, ಏನ್ಬೇಕಾದ್ರೂ ಆಗಬಹುದು: ಸವದಿ

|

ಬೆಳಗಾವಿ, ಡಿಸೆಂಬರ್ 04: ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಳೆ ಹುಲಿಗಳು, ಇವರಿಬ್ಬರೂ ಸೇರಿದರೆ ರಾಜಕೀಯದಲ್ಲಿ ಏನ್ ಬೇಕಾದರೂ ಆಗಬಹುದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ.

ಅಥಣಿಯಲ್ಲಿ ಮಾತನಾಡಿದ ಲಕ್ಷ್ಮಣ್ ಸವದಿ, ಡಿಸೆಂಬರ್ 09 ರಂದು ಸಿಹಿಸುದ್ದಿ ನೀಡುತ್ತೇವೆಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ, ಅದು ಅವರ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಅನಿಸುತ್ತದೆ ಎಂದು ವ್ಯಂಗ್ಯವಾಗಿ ಮಾತನಾಡಿದರು.

ಬಹಿರಂಗ ಪ್ರಚಾರ ಮುಗಿದ ಬೆನ್ನಲ್ಲೇ ಅಲ್ಲೋಲಕಲ್ಲೋಲ ಸೃಷ್ಟಿಸುವ ಕಾಂಗ್ರೆಸ್ ಹೇಳಿಕೆ

ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಲ್ಲಿಕಾರ್ಜುನ ಖರ್ಗೆ ಇಬ್ಬರೂ ರಾಜಕೀಯದಲ್ಲಿ ಅನುಭವಿಗಳು, ಅವರು ಏನು ಮಾಡುತ್ತಾರೆಂದು ನಾನೂ ಕುತೂಹಲದಿಂದ ಕಾಯುತ್ತಿದ್ದೇನೆಂದು ಲಕ್ಷ್ಮಣ್ ಸವದಿ ತಿಳಿಸಿದರು.

ಬಣ್ಣದ ಕಾಗೆಯನ್ನು ಖರ್ಗೆಯವರು ಹಾರಿಸುವುದಿಲ್ಲ

ಬಣ್ಣದ ಕಾಗೆಯನ್ನು ಖರ್ಗೆಯವರು ಹಾರಿಸುವುದಿಲ್ಲ

ಮಲ್ಲಿಕಾರ್ಜುನ ಖರ್ಗೆ ಅವರು ಅವರು ಯಾವತ್ತೂ ಬೀಸು ಹೇಳಿಕೆ ನೀಡುವುದಿಲ್ಲ, ಅವರ ಮಾತಿಗೆ ಬಹಳ ತೂಕವಿರುತ್ತದೆ. ಅವರ ಮಾತುಗಳನ್ನು ಕಾಂಗ್ರೆಸ್ ಪಕ್ಷದ ನಾಯಕರು ಕೇಳುತ್ತಾರೆ, ಮುಂದೇನಾಗುತ್ತದೆ ಎಂದು ಕಾತರದಿಂದ ಕಾಯುತ್ತಿದ್ದೇನೆಂದು ಹೇಳಿದರು.

ನಾನು ಖರ್ಗೆ ಅವರ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ, ಅವರು ಎಂದಿಗೂ ಹಗುರವಾಗಿ ಮಾತನಾಡುವುದಿಲ್ಲ, ಯಾವತ್ತೂ ಊಹಾಪೋಹ ಹುಟ್ಟುಹಾಕುವುದಿಲ್ಲ, ರಾಜಕಾರಣದಲ್ಲಿ ಅವರು ಬಣ್ಣದ ಕಾಗೆ ಹಾರಿಸಿದ್ದು ನೋಡಿಲ್ಲವೆಂದರು.

ಎರಡು ಪಕ್ಷಗಳ ಕನಸು ಈಡೇರುವುದಿಲ್ಲ

ಎರಡು ಪಕ್ಷಗಳ ಕನಸು ಈಡೇರುವುದಿಲ್ಲ

ಮಲ್ಲಿಕಾರ್ಜುನ ಖರ್ಗೆಯವರಿಗಿಂತ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ರಾಜಕೀಯ ದೊಡ್ಡದು, ಈ ಇಬ್ಬರೂ ರಾಜಕೀಯದಲ್ಲಿ ಹುಲಿಗಳಿದ್ದಂತೆ, ಅವರು ಒಂದೆಡೆ ಸೇರಿದರೆ ಏನಾಗಲಿದೆ ಎಂದು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದರು.

ರಾಜ್ಯ ರಾಜಕೀಯದಲ್ಲಿ ಬಿರುಗಾಳಿ: ಸಿದ್ದರಾಮಯ್ಯ ಬೆಚ್ಚಿಬೀಳಿಸುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ?

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಕನಸು ಭಗ್ನವಾಗಲಿದೆ ಅದೇ ಆ ಎರಡೂ ಪಕ್ಷಗಳಲ್ಲಿ ಆಗುವ ಬದಲಾವಣೆ ಎಂದು ಜರಿದರು. ಡಿಸೆಂಬರ್ 09 ರಂದು ನಿರಾಶೆ ಅನುಭವಿಸಲಿವೆ ಎಂದರು. ಇತ್ತೀಚಿಗೆ ಖರ್ಗೆಯವರು ಡಿಸೆಂಬರ್ ೦೯ ರ ನಂತರ ಸಿಹಿಸುದ್ದಿ ನೀಡಲಿದ್ದೇನೆ ಎಂದು ಹೇಳಿದ್ದರು. ಆ ಮಾತನ್ನು ಉಲ್ಲೇಖಿಸಿ ಸವದಿ ಟಾಂಗ್ ನೀಡಿದ್ದಾರೆ.

ನಾನೂ ಪ್ರಧಾನಿಯಾಗುವ ಮಹತ್ವಾಕಾಂಕ್ಷೆ ಇದೆ

ನಾನೂ ಪ್ರಧಾನಿಯಾಗುವ ಮಹತ್ವಾಕಾಂಕ್ಷೆ ಇದೆ

ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ, ಮನುಷ್ಯ ಆಸೆ ಪಡೋದು ತಪ್ಪಲ್ಲ, ನಾನು ಪ್ರಧಾನಿಯಾಗೋ ಆಸೆ ಇದೆ, ಆದರೆ ಆ ಅವಕಾಶ ಸಿಗಬೇಕು ಅಷ್ಟೇ, ಸುಮ್ಮನೇ ಕೈಲಾಗದ ಮಾತುಗಳನ್ನು ಆಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಡಿ.ಕೆ.ಶಿವಕುಮಾರ ಜೋಡೆತ್ತುಗಳು ಆಗಾಗ ಭೇಟಿಯಾಗುತ್ತಿರುತ್ತಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ ಎಂದರು.

ಶೀಘ್ರವೇ ಸಚಿವ ಸಂಪುಟ ವಿಸ್ತರಣೆ

ಶೀಘ್ರವೇ ಸಚಿವ ಸಂಪುಟ ವಿಸ್ತರಣೆ

ಉಪ ಚುನಾವಣೆ ಮುಗಿದ ಮೇಲೆ ಒಂದು ವಾರಕ್ಕೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ, ಬೆಳಗಾವಿ ಜಿಲ್ಲೆಯ ಹಿರಿಯ ಶಾಸಕ ಉಮೇಶ್ ಕತ್ತಿಗೂ ಸಂಪುಟದಲ್ಲಿ ಸ್ಥಾನ ಸಿಗಬಹುದು, ನಾನೂ ಅವರ ಹೆಸರನ್ನು ಸೂಚಿಸುತ್ತೇನೆ ಎಂದಿದ್ದಾರೆ.

ವಿಜಯಪುರ ಜಿಲ್ಲೆಗೆ ಪ್ರಾತಿನಿಧ್ಯ ಸಿಗಬೇಕೆಂದರೆ ಬಸನಗೌಡ ಪಾಟೀಲ್ ಅವರಿಗೆ ಸಿಗಬೇಕು, ಅವರು ಕೇಳುವುದರಲ್ಲಿ ತಪ್ಪಿಲ್ಲ ಆದರೆ ಸದರ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಅಂತಿಮ ನಿರ್ಣಯ ಮುಖ್ಯಮಂತ್ರಿ ಯಡಿಯೂರಪ್ಪ ಅವರದ್ದಾಗಿದೆ ಎಂದು ಲಕ್ಷ್ಮಣ್ ಸವದಿ ತಿಳಿಸಿದರು.

English summary
Deputy Chief Minister Laxman Sawadi Has Said That Mallikarjun Kharge And Former Prime Minister HD Deve Gowda Are Old Tigers And That If The Two Are Involved, Something Can Be Done In Politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more