ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಇಬ್ಬಾಗವಾಗಲಿದೆ, ದೇಶದಲ್ಲಿ 50 ರಾಜ್ಯಗಳು ಉದಯವಾಗಲಿವೆ: ಕತ್ತಿ ಭವಿಷ್ಯ

|
Google Oneindia Kannada News

ಬೆಳಗಾವಿ, ಜೂನ್ 23: ಮುಂಬರುವ ಲೋಕಸಭಾ ಚುನಾವಣೆ ನಂತರ ಕರ್ನಾಟಕ ಇಬ್ಬಾಗವಾಗಲಿದೆ. ಉತ್ತರ ಕರ್ನಾಟಕ ರಾಜ್ಯ ಪ್ರತ್ಯೇಕವಾಗಲಿದೆ. ಪ್ರತ್ಯೇಕ ರಾಜ್ಯಕ್ಕೆ ಬೇಕಾದ ಎಲ್ಲ ಮೂಲ ಸೌಕರ್ಯಗಳು ನಮ್ಮಲ್ಲಿವೆ ಎಂದು ಆರೋಗ್ಯ ಮತ್ತು ಅರಣ್ಯ ಸಚಿವ ಉಮೇಶ್‌ ಕತ್ತಿ ಮತ್ತೆ ಪ್ರತ್ಯೇಕ ರಾಜ್ಯದ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಉತ್ತರ ಕರ್ನಾಟಕ ಸೇರಿದಂತೆ ಎರಡು ರಾಜ್ಯಗಳು ಹೊಸದಾಗಿ ಅಸ್ತಿತ್ವಕ್ಕೆ ಬರಲಿವೆ. ಇವೆರಡು ಸೇರಿ ದೇಶದಲ್ಲಿ ಒಟ್ಟು 50 ಹೊಸ ರಾಜ್ಯಗಳು ಉದಯವಾಗಲಿವೆ ವಿಚಿತ್ರ ಹೇಳಿಕೆ ನೀಡಿದ್ದಾರೆ.

ಶಾಸಕರು Yes ಎಂದರೆ 'ಮಹಾ' ವಿಕಾಸ ಅಘಾಡಿಗೆ ಶಿವಸೇನೆ ಟಾಟಾ.. ಬಾಯ್ ಬಾಯ್!ಶಾಸಕರು Yes ಎಂದರೆ 'ಮಹಾ' ವಿಕಾಸ ಅಘಾಡಿಗೆ ಶಿವಸೇನೆ ಟಾಟಾ.. ಬಾಯ್ ಬಾಯ್!

2024 ರ ಚುನಾವಣೆ ನಂತರ ಪ್ರಧಾನಿ ನರೇಂದ್ರ ಮೋದಿಯೇ 50 ಹೊಸ ರಾಜ್ಯಗಳನ್ನು ಪ್ರಕಟಿಸಲಿದ್ದಾರೆ. ದೇಶದ ದೊಡ್ಡ ರಾಜ್ಯವಾದ ಉತ್ತರಪ್ರದೇಶದದಲ್ಲಿ ನಾಲ್ಕು, ಮಹಾರಾಷ್ಟ್ರದಲ್ಲಿ ಮೂರು ಹಾಗೂ ಕರ್ನಾಟಕದಲ್ಲಿ ಎರಡು ರಾಜ್ಯಗಳು ಅಸ್ತಿತ್ವಕ್ಕೆ ಬರಲಿವೆ ಉತ್ತರ ಕರ್ನಾಟಕ ಪ್ರತ್ಯೇಕವಾಗುವುತ್ತದೆ ಎಲ್ಲಾ ಸೌಲಭ್ಯಗಳಿವೆ. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಇದೆ, ಧಾರವಾಡದಲ್ಲಿ ಹೈಕೋರ್ಟ್ ಇದೆ. ಕಿತ್ತೂರು ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವ ಚಿಂತನೆ ನಡೆದಿದೆ, ಹಾಗಾಗಿ ಉತ್ತರ ಕರ್ನಾಟಕ ನೂತನ ರಾಜ್ಯ ಆಗುವದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.

Karnataka Will be 2 States After 2024 Lok Sabha Election:Umesh Katti

ಬೆಂಗಳೂರು ಈಗಾಗಲೇ ತುಂಬಿ ಹೋಗಿದೆ. ಕುಡಿಯುವ ನೀರಿನ ಅಭಾವ ಉಂಟಾಗಿದೆ. ಇದೆ. ಸಂಚಾರ ಸಮಸ್ಯೆ ವಿಪರೀತವಾಗಿದೆ. ಒಂದು ಕಿಲೋಮೀಟರ್ ದೂರ ಹೋಗಲು ತಾಸು ಗಟ್ಟಲೇ ಟ್ರಾಫಿಕ್ ದಲ್ಲಿ ಸಿಲುಕಬೇಕಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಅದಕ್ಕೆ ಎಲ್ಲರೂ ಕೂಡಿ ಪ್ರಯತ್ನಿಸಬೇಕು ಎಂದು ತಿಳಿಸಿದ್ದಾರೆ.

ಕರ್ನಾಟಕ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ ಎಲ್ಲಾ ರೀತಿ ಐಟಿ ಕಂಪನಿಗಳು, ಕಾರ್ಖಾನೆಗಳು ತುಂಬಿ ತುಳುಕುತ್ತಿವೆ. ಉತ್ತರ ಕರ್ನಾಟಕದ ಯುವಕರು ಕೆಲಸಕ್ಕಾಗಿ ಬೆಂಗಳೂರಿಗೆ ಬರುತ್ತಿದ್ದಾರೆ. ಹೊಸ ಸಂಸ್ಥೆಗಳು ಉತ್ತರ ಕರ್ನಾಟಕದ ಕಡೆ ಮುಖ ಮಾಡಿದ್ದಾರೆ. ಹಾಗಾಗಿ ಉತ್ತರ ಕರ್ನಾಟಕವನ್ನು ಪ್ರತ್ಯೇಕಿಸಲು ಇದು ಸರಿಯಾದ ಸಮಯ ಎಂದಿದ್ದಾರೆ.

ನೀವು ಬಿಜೆಪಿಯೊಂದಿಗೆ ಸೇರಿಕೊಳ್ಳಿ, ನಾವು ಶಿವಸೇನಾ ಮತ್ತೆ ಕಟ್ಟುತ್ತೇವೆ: ರಾವತ್‌ನೀವು ಬಿಜೆಪಿಯೊಂದಿಗೆ ಸೇರಿಕೊಳ್ಳಿ, ನಾವು ಶಿವಸೇನಾ ಮತ್ತೆ ಕಟ್ಟುತ್ತೇವೆ: ರಾವತ್‌

ಉಮೇಶ್‌ ಕತ್ತಿ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಿರುವುದು ಇದೇ ಮೊದಲೇನಲ್ಲ, ಈ ಹಿಂದೆ, ಉತ್ತರ ಕರ್ನಾಟಕ ಪತ್ಯೇಕ ರಾಜ್ಯವಾದರೆ ಇಲ್ಲಿಯವರೇ ಮುಖ್ಯಮಂತ್ರಿಯಾಗಬಹುದು ಎಂದು ಹೇಳುವ ಮೂಲಕ ತಾವೂ ಮುಖ್ಯಮಂತ್ರಿಯಾಗಬೇಕೆನ್ನುವ ಆಸೆಯನ್ನು ಆ ರೀತಿ ಹೇಳಿಕೆ ನೀಡಿ ಹೊರ ಹಾಕಿದ್ದರು. ನಾನು 8 ಬಾರಿ ಶಾಸಕನಾಗಿದ್ದೇನೆ, ಆರು ಇಲಾಖೆಗಳಲ್ಲಿ ಸಚಿವನಾಗಿದ್ದೇನೆ, ನನ್ನ ರಾಜಕೀಯ ವೃತ್ತಿ ಜೀವನದಲ್ಲಿ ಭ್ರಷ್ಟಾಚಾರದ ಕಪ್ಪುಚುಕ್ಕೆಯನ್ನು ಹೊಂದಿಲ್ಲ. ನನಗೂ ರಾಜ್ಯದ ಮುಖ್ಯಮಂತ್ರಿಯಾಗುವ ಆಸೆ ಇದೆ ಎನ್ನುವ ತಮ್ಮೊಳಗಿ ಆಸೆಯನ್ನು ಹೇಳಿಕೊಂಡಿದ್ದರು.

English summary
Umesh Katti,Minister of Food, Civil Supplies & Consumer Affairs and Forest, has said that Karnataka will be split into 2 stats and India will have 50 new state after 2024 Lokasabha election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X