ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ವಿರೋಧ ವ್ಯಕ್ತಪಡಿಸಿದ ಕರವೇ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

Recommended Video

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟದ ಬಗ್ಗೆ ಬೆಳಗಾವಿ ರಕ್ಷಣಾ ವೇದಿಕೆ ವಿರೋಧ | Oneindia Kannada

ಬೆಳಗಾವಿ, ಜುಲೈ.31: ರಾಜ್ಯದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಜೋರಾಗುತ್ತಿದ್ದಂತೆ, ಹೋರಾಟಕ್ಕೆ ಕುಂದಾನಗರಿ ಬೆಳಗಾವಿಯಲ್ಲಿ ಪ್ರಾರಂಭದಲ್ಲೇ ವಿರೋಧ ವ್ಯಕ್ತವಾಗಿದೆ. ಹೌದು, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ ಜಿಲ್ಲಾಧ್ಯಕ್ಷ ಮಹಾದೇವ ತಳವಾರ ಪತ್ರಿಕಾಗೋಷ್ಠಿ ನಡೆಸಿ, ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರತ್ಯೇಕ ರಾಜ್ಯ ಬೇಡ, ಉತ್ತರ ಕರ್ನಾಟಕದ 13 ಜಿಲ್ಲೆಗಳು ಅಭಿವೃದ್ಧಿಯಾಗಬೇಕು. ವಿವಿಧ ಕ್ಷೇತ್ರಗಳಲ್ಲಿ ಜಿಲ್ಲೆಗಳಿಗೆ ಅನ್ಯಾಯವಾಗಿರುವುದರಿಂದ ಶಾಸಕರಾದ ಉಮೇಶ ಕತ್ತಿ, ಪಿ ರಾಜೀವ್ , ಶ್ರಿರಾಮಲು ಅವರು ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಮುಂದಾಗಿದ್ದಾರೆ.

ಉಸಿರಿರುವ ತನಕ ರಾಜ್ಯ ವಿಭಜನೆಗೆ ಅವಕಾಶ ಕೊಡಲಾರೆ: ಯಡಿಯೂರಪ್ಪಉಸಿರಿರುವ ತನಕ ರಾಜ್ಯ ವಿಭಜನೆಗೆ ಅವಕಾಶ ಕೊಡಲಾರೆ: ಯಡಿಯೂರಪ್ಪ

ಶಾಸಕರು ಪ್ರತ್ಯೇಕ ರಾಜ್ಯ ಹೋರಾಟ ಕೈ ಬಿಟ್ಟು, ಅಭಿವೃದ್ಧಿಗೋಸ್ಕರ ಹೋರಾಟ ಮಾಡಲಿ. ರಾಜ್ಯವನ್ನು ಒಡೆಯುವ ಕೆಲಸ ಮಾಡಬಾರದು. ಸ್ವಾಮೀಜಿಗಳು ಪ್ರತ್ಯೇಕ ರಾಜ್ಯದ ಹೋರಾಟವನ್ನು ಕೈ ಬಿಟ್ಟು ಅಭಿವೃದ್ಧಿಗೋಸ್ಕರ ಹೋರಾಡ ಮಾಡಲಿ, ಅವರ ಜೊತೆಗೆ ಕನ್ನಡಪರ ಸಂಘಟನೆಗಳು ಬೆಂಬಲ ಕೊಡುತ್ತವೆ.

Karnataka Rakshana Vedike opposed to North Karnataka a separate state

ಆದರೆ ಯಾವುದೇ ಕಾರಣಕ್ಕೂ ರಾಜ್ಯವನ್ನು ಒಡೆಯುವ ಕೆಲಸಕ್ಕೆ ಬೆಂಬಲ ಕೊಡುವುದಿಲ್ಲ ಎಂದು ಮಹಾದೇವ ತಳವಾರ ಆಕ್ರೋಶ ವ್ಯಕ್ತಪಡಿಸಿದರು.

ಸಾಹಿತಿ ಅಶೋಕ ಚಂದರಗಿ ಮಾತನಾಡಿ, ಉಮೇಶ ಕತ್ತಿ ಅವರು ತಾಕತ್ತಿದ್ದರೆ ಅಭಿವೃದ್ಧಿಗೋಸ್ಕರ ಅನುದಾನ ತನ್ನಿ, ಅದನ್ನು ಬಿಟ್ಟು ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಬೆಂಬಲ ನೀಡಿದ ಆಸಕ್ತರ ವಿರುದ್ಧ ಕಿಡಿಕಾರಿದರು.

English summary
Karnataka Rakshana Vedike opposed to North Karnataka a separate state. Vedike District President Mahadeva Thalavara said, 13 Districts of North Karnataka should be developed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X