India
  • search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ 100 ಕೆಜಿ ಕೇಕ್ ಕತ್ತರಿಸಿ ನಾಯಿ ಹುಟ್ಟುಹಬ್ಬ: 4000 ಅತಿಥಿಗಳಿಗೆ ಅನ್ನಸಂತರ್ಪಣೆ

|
Google Oneindia Kannada News

ನೆಚ್ಚಿನ ನಾಯಿಯ ಹುಟ್ಟುಹಬ್ಬವನ್ನು 100 ಕೆಜಿ ಕೇಕ್ ಕತ್ತರಿಸುವ ಮೂಲಕ ಆಚರಿಸಿರುವುದು ಭಾರೀ ಸುದ್ದಿಯಾಗಿದೆ. ಇತ್ತೀಚೆಗಷ್ಟೇ ಬೆಳಗಾವಿಯಲ್ಲಿ ಈ ಘಟನೆ ನಡೆದಿದ್ದು ಫೋಟೋಗಳು ವೈರಲ್ ಆಗಿವೆ. ಶಿವಪ್ಪ ಯಲ್ಲಪ್ಪ ಮರಡಿ ಅವರು ತಮ್ಮ ನೆಚ್ಚಿನ ನಾಯಿ ಕ್ರಿಶ್ ಹುಟ್ಟುಹಬ್ಬವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಿದ್ದಾರೆ. ಮಾತ್ರವಲ್ಲದೆ ಬಂಧು ಮಿತ್ರರಿಗೆ ಭರ್ಜರಿ ಪಾರ್ಟಿಯನ್ನೂ ನೀಡಿದ್ದಾರೆ. ಇದರ ವಿಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಇದರಲ್ಲಿ ಅವರು ತಮ್ಮ ನಾಯಿಯೊಂದಿಗೆ 100 ಕೆಜಿ ಕೇಕ್ ಕತ್ತರಿಸುತ್ತಿರುವುದನ್ನು ಕಾಣಬಹುದು. ಜೊತೆಗೆ ಸುಮಾರು 4,000 ಜನರಿಗೆ ಅನ್ನಸಂತರ್ಪಣೆ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗುತ್ತಿರುವ ಹೃದಯಸ್ಪರ್ಶಿ ಚಿತ್ರಗಳು ಮತ್ತು ವಿಡಿಯೊಗಳು ಅತಿಥಿಗಳು ಕ್ರಿಶ್ ಹುಟ್ಟುಹಬ್ಬದ ಕೇಕ್ ಅನ್ನು ತಿನ್ನುವುದನ್ನು ತೋರಿಸುತ್ತವೆ. ಕ್ರಿಶ್‌ಗೆ ಹುಟ್ಟುಹಬ್ಬದ ಶುಭಾಶಯದೊಂದಿಗೆ ಶಿವಪ್ಪ ಮುದ್ದಾದ ನೇರಳೆ ಟೋಪಿಯನ್ನೂ ಅದಕ್ಕೆ ಹಾಕಿದ್ದಾರೆ.

ಸಿನಿಮಾದಲ್ಲಿ ನಾಯಿ ಸತ್ತಿದ್ದಕ್ಕೆ ಕಣ್ಣೀರಿಟ್ಟ ಮುಖ್ಯಮಂತ್ರಿಗೆ ಈಗ ಕಣ್ಣೀರು ಬರುತ್ತಿಲ್ಲ ಯಾಕೆ?ಸಿನಿಮಾದಲ್ಲಿ ನಾಯಿ ಸತ್ತಿದ್ದಕ್ಕೆ ಕಣ್ಣೀರಿಟ್ಟ ಮುಖ್ಯಮಂತ್ರಿಗೆ ಈಗ ಕಣ್ಣೀರು ಬರುತ್ತಿಲ್ಲ ಯಾಕೆ?

ಈ ವಿಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಸಿಹಿ ಪ್ರತಿಕ್ರಿಯೆಗಳನ್ನು ಗಳಿಸಿದೆ. "ಹಹಹ್ಹ ಕ್ರಿಶ್ ತುಂಬಾ ಅದೃಷ್ಟವಂತ" ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. "ಸೂಪರ್ಕ್ಯೂಟ್" ಎಂದು ಮತ್ತೊಬ್ಬರು ಬರೆದಿದ್ದಾರೆ.

ಈ ಹಿಂದೆ ಮಂಗಳೂರು ಪೊಲೀಸ್ ಶ್ವಾನದಳದ 3 ತಿಂಗಳ ಲ್ಯಾಬ್ರಡಾರ್ ರಿಟ್ರೈವರ್ ಪೊಲೀಸ್ ಶ್ವಾನಕ್ಕೆ ಕನ್ನಡದ 'ಚಾರ್ಲಿ 777' ಚಿತ್ರದಿಂದ ಪ್ರೇರಿತರಾಗಿ 'ಚಾರ್ಲಿ' ಎಂದು ನಾಮಕರಣ ಮಾಡಿ ಗಮನ ಸೆಳೆದಿತ್ತು. ಚಾರ್ಲಿಗೆ ನಾಮಕರಣ ಸಮಾರಂಭ ಕಾರ್ಯಕ್ರಮದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

777 ಚಾರ್ಲಿ ಚಲನಚಿತ್ರದಿಂದ ಪ್ರೇರಿತವಾಗಿದೆ. ಇದು ಭಾರತೀಯ ಕನ್ನಡ ಭಾಷೆಯ ಸಾಹಸ ಹಾಸ್ಯ ಚಲನಚಿತ್ರವಾಗಿದ್ದು, ಜೂನ್ 10, 2022 ರಂದು ಬಿಡುಗಡೆಯಾಯಿತು. ಇ ಚಿತ್ರವನ್ನು ಕಿರಣ್‌ರಾಜ್ ಕೆ ಬರೆದು ನಿರ್ದೇಶಿಸಿದ್ದಾರೆ ಮತ್ತು ರಕ್ಷಿತ್ ಶೆಟ್ಟಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.

Karnataka man celebrates dogs birthday by cutting 100 kg cake

ಚಿತ್ರವು ನಾಯಿ ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಆಧರಿಸಿದೆ. ಈ ಚಿತ್ರದಲ್ಲಿ ನಾಯಿಯೊಂದು ಒಂಟಿಯಾಗಿದ್ದ ಮತ್ತು ಅಂತರ್ಮುಖಿಯಾಗಿದ್ದ ಧರ್ಮ (ರಕ್ಷಿತ್ ಶೆಟ್ಟಿ) ಜೀವನವನ್ನು ಬದಲಾಯಿಸುತ್ತದೆ.

English summary
Celebrating the birthday of a favorite dog in the Belgaum district of Karnataka by cutting a 100kg cake is huge news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X